ಸಾಹಿತಿ ಎನ್.ಟಿ.ಎರಿಸ್ವಾಮಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಒತ್ತಾಯ

ಸಾಹಿತಿ ಎನ್.ಟಿ.ಎರಿಸ್ವಾಮಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ಒತ್ತಾಯ

ಜಗಳೂರು, ಅ. 15 – 36ಕ್ಕೂ ಅಧಿಕ ಕೃತಿಗಳನ್ನು ರಚಿಸಿ, ರಾಜ್ಯದ ವಿವಿಧ 15 ಜಿಲ್ಲೆಗಳಲ್ಲಿ ಸಾವಿರಾರು ಸ್ವಸಹಾಯ ಮಹಿಳಾ ಸಂಘಗಳಿಗೆ ಆರ್ಥಿಕ ಸಾಲ ಸೌಲಭ್ಯ ನೀಡಿ, ಬೆಳವಣಿಗೆಗೆ ಕಾರಣರಾದ ಜಗಳೂರಿನ ಸಾಹಿತಿ, ಲೀಡ್‍ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ, ಎನ್.ಟಿ. ಎರಿಸ್ವಾಮಿಯವರ ಅಪಾರ ಸೇವೆಯನ್ನು ಗುರುತಿಸಿ ರಾಜ್ಯ ಸರ್ಕಾರ 2023 ನೇ ಸಾಲಿನ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಬೇಕೆಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಜಾತಮ್ಮ ರಾಜು ಮನವಿ ಮಾಡಿದ್ದಾರೆ.
ಪಟ್ಟಣದ ಪತ್ರಕರ್ತರ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಪದಾಧಿಕಾರಿಗಳೊಂದಿಗೆ ಸುದ್ದಿಗೋಷ್ಠಿಯನ್ನುದ್ದೇಶಿ ಅವರು ಮಾತನಾಡಿದರು.
ಸುಮಾರು 20 ಸಾವಿರ ಮಹಿಳೆಯರಿಗೆ ಅಕ್ಷರಾಭ್ಯಾಸ ನೀಡಿದ್ದಾರೆ. ಬ್ಯಾಂಕನವರು ಕೂಡಿ ಕಳೆಯುವುದಲ್ಲದೇ ಸಹಿ ಮಾಡಿದ್ದಾರೆ. ಬ್ಯಾಂಕುಗಳ ಮಾಹಿತಿ ತಿಳಿಯುವಂತೆ ಕನ್ನಡದಲ್ಲಿ ಅನೇಕ ಕೃತಿಗಳನ್ನು, 400ಕ್ಕೂ ಅಧಿಕ ಬಿಡಿ ಲೇಖನಗಳನ್ನು ನಾಡಿನ ನೂರಾರು ಪತ್ರಿಕೆಗಳಲ್ಲಿ ಪ್ರಕಟಿಸಿ ಮಾಹಿತಿ ಜನರಿಗೆ ತಿಳಿಯುವಂತೆ ಮಾಡಿದ್ದಾರೆ ಎಂದರು.
ಸಾಹಿತಿ ಡಿ.ಸಿ.ಮಲ್ಲಿಕಾರ್ಜುನ್ ಮಾತನಾಡಿ, ಸಾಹಿತಿಯಾಗಿ ಜನರಿಗೆ ತಿಳಿಯುವಂತೆ ಅನೇಕ ಪುಸ್ತಕಗಳನ್ನು ಬರೆಯುವ ಜೊತೆಗೆ ಬಡ ಮಹಿಳೆ ಯರಿಗೆ ಸ್ವಸಹಾಯ ಸಂಘಗಳ ಮೂಲಕ ಆರ್ಥಿಕ ಸಹಾಯ ಮಾಡಿ ದ್ದಾರೆ. `ತೊರೆಸಾಲ ನೊರೆಹಾಲು’ ಎಂಬ ಅಭಿನಂದನಾ ಗ್ರಂಥ ಬರೆದ ಇವರಿಗೆ ನಾಡಿನ ವಿವಿಧ 103 ಜನ ಹಿರಿಯರು ಕೃತಿ ಮೂಲಕ ಅಭಿನಂದಿ ಸಿದ್ದಾರೆ. ಇಂತವರಿಗೆ ಸರ್ಕಾರ ಗುರುತಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದರು.
ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷೆ ಬಿ.ಟಿ.ಗೀತಾ ಮಂಜು ಮಾತನಾಡಿ, ಕೆನರಾ ಬ್ಯಾಂಕಿನ ಸೇವೆಯ ಜೊತೆಗೆ ಸಾಹಿತಿಯಾಗಿ ಅನೇಕ ಕೃತಿಗಳನ್ನು ಬರೆದಿರುವ ಎರಿಸ್ವಾಮಿ ಅವರು 10ನೇ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಅವರಿಗೆ ರಾಜ್ಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಸರ್ಕಾರಕ್ಕೆ ಅವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‍ ಪದಾಧಿ ಕಾರಿಗಳಾದ ನಾಗಲಿಂಗಪ್ಪ, ಆರ್.ಓಬಳೇಶ್, ಓಬಣ್ಣ ಲೋಕೇಶ್, ಕೃಷ್ಣಮೂರ್ತಿ, ಲೋಕೇಶ್ ಪತ್ರಿಕಾ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!