ಪ್ರತಿ ಹಳ್ಳಿಯಲ್ಲೂ ಜನಪದ ಉತ್ಸವಗಳು ನಡೆಯಲಿ

ಪ್ರತಿ ಹಳ್ಳಿಯಲ್ಲೂ ಜನಪದ ಉತ್ಸವಗಳು ನಡೆಯಲಿ

ಹನಗವಾಡಿ : ರಾಷ್ಟ್ರೀಯ ಜನಪದ ಉತ್ಸವದಲ್ಲಿ ಮಾಜಿ ಶಾಸಕ ರಾಮಪ್ಪ ಆಶಯ

ಮಲೇಬೆನ್ನೂರು, ಅ.15- ಗ್ರಾಮೀಣ ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆಗಳನ್ನು ಉಳಿಸಿ, ಬೆಳೆಸಲು ಇಂತಹ ಜನಪದ ಉತ್ಸವಗಳು ಎಲ್ಲಾ ಹಳ್ಳಿಗಳಲ್ಲಿ ನಡೆಯಬೇಕೆಂದು ಮಾಜಿ ಶಾಸಕ ಎಸ್.ರಾಮಪ್ಪ ಹೇಳಿದರು.
ಹನಗವಾಡಿ ಗ್ರಾಮದ ಬಣಕಾರ ಕುರುವತ್ತೆಪ್ಪ ರಂಗಮಂದಿರದಲ್ಲಿ ದಕ್ಷಿಣ ಮಧ್ಯಕ್ಷೇತ್ರ ಸಾಂಸ್ಕೃತಿಕ ಕೇಂದ್ರ (ನಾಗಪುರ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ದಾವಣಗೆರೆ) ಮತ್ತು ಹನಗವಾಡಿ ಗ್ರಾ.ಪಂ. ಹಾಗೂ ಶ್ರೀ ವೀರಭದ್ರೇಶ್ವರ ವೀರಗಾಸೆ ಕಲಾ ಸಂಘ (ಹನಗವಾಡಿ) ಇವರುಗಳ ಸಂಯುಕ್ತಾಶ್ರ ಯದಲ್ಲಿ ಇಂದು ಹಮ್ಮಿಕೊಂಡಿದ್ದ ರಾಷ್ಟ್ರೀಯ ಜಾನಪದ ನೃತ್ಯಗಳ ಉತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹರಿಹರ ತಾಲ್ಲೂಕಿನ ಬೆಳ್ಳೂಡಿ, ಹನಗವಾಡಿ, ಭಾನುವಳ್ಳಿ ಮತ್ತು ಸಾರಥಿಯಲ್ಲಿ ಕಲೆ ಹಾಗೂ ಕಲಾವಿದರು ಇರುವುದರಿಂದಲೇ ಇಂತಹ ದೊಡ್ಡ ಕಾರ್ಯಕ್ರಮ ನಡೆಯಲು ಸಾಧ್ಯವಾಗಿದೆ ಎಂದು ರಾಮಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ಸವವನ್ನು ಉದ್ಘಾಟಿಸಿದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಬೆಳ್ಳೂಡಿಯ ಡೊಳ್ಳು ಕುಣಿತ ಮತ್ತು ಹನಗವಾಡಿಯ ವೀರಗಾಸೆ ತಂಡದವರು ನಮ್ಮ ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಗೂ ತೆರಳಿ ತಮ್ಮ ಪ್ರತಿಭೆ ಪ್ರದರ್ಶಿಸಿ, ಹರಿಹರ ತಾಲ್ಲೂಕಿಗೆ ಕೀರ್ತಿ ತಂದಿದ್ದಾರೆ. ಅವರಿಂದಾಗಿ ಇಲ್ಲಿ ಈ ರಾಷ್ಟ್ರೀಯ ಕಾರ್ಯಕ್ರಮಗಳು ನಡೆಯುವಂತಾಗಿದ್ದು, ಯಾವುದೇ ಕಲೆಯಲ್ಲಿ ಆಸಕ್ತಿ ಇರುವವರು ಮುಂದೆ ಬಂದರೆ ಅವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡಲು ಸಿದ್ದ ನಿದ್ದೇನೆ ಎಂದು ಹರೀಶ್ ಪ್ರಕಟಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶದಲ್ಲಿ ಅನೇಕ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಇದ್ದು, ಇವೆಲ್ಲವುದರ ಮೂಲವಾಗಿ ಜಾನಪದ ಕಲೆ ಬೆಳೆದಿದೆ. ಅಂತಹ ಜಾನಪದ ಉತ್ಸವದ ರಾಷ್ಟ್ರೀಯ ಕಾರ್ಯಕ್ರಮಗಳನ್ನು ಬೆಳ್ಳೂಡಿ, ಹನಗವಾಡಿ ಗ್ರಾಮಗಳ ಯುವಕರು ಸಂಘಟಿಸುವ ಮೂಲಕ ಮಾದರಿಯಾಗಿದ್ದಾರೆ ಎಂದರು.
ಹನಗವಾಡಿ ಗ್ರಾ.ಪಂ. ಅಧ್ಯಕ್ಷ ಬಿ.ಎನ್.ತಿಪ್ಪೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್, ಪ್ರೊ.ಬಿ.ಕೃಷ್ಣಪ್ಪ, ಸಾಂಸ್ಕೃತಿಕ ಭನದ ಟ್ರಸ್ಟಿ ಹನಗವಾಡಿ ರುದ್ರಪ್ಪ, ಶಿಮುಲ್ ಮಾಜಿ ಅಧ್ಯಕ್ಷ ಬಣಕಾರ ಜಗದೀಶಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ತಾ.ಪಂ. ಮಾಜಿ ಸದಸ್ಯ ಡಿ.ಕುಮಾರ್, ಹರಿಹರ ನಗರಸಭೆ ಸದಸ್ಯೆ ಅಶ್ವಿನಿ ಕೃಷ್ಣ, ನಾಗಪುರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಅಧಿಕಾರಿ ಗೋಪಾಲ್, ಉತ್ಸವದ ಮೇಲ್ವೆಚಾರಕ ಮಾಗಾನಹಳ್ಳಿ ಮಂಜುನಾಥ್, ಗ್ರಾಮದ ಪಿಎಸಿಎಸ್ ಅಧ್ಯಕ್ಷ ಡಿ.ಗಿರೀಶ್, ಗ್ರಾ.ಪಂ. ಉಪಾಧ್ಯಕ್ಷೆ ದಾಕ್ಷಾಯಣಮ್ಮ, ಗ್ರಾ.ಪಂ. ಸದಸ್ಯರಾದ ಆರ್.ಬಿ.ಪ್ರವೀಣ್, ಸವಿತಾ ಶೇಖರಪ್ಪ, ಸುಜಾತ ಹನುಮಂತಪ್ಪ, ಶಾರದಮ್ಮ, ದೊಗ್ಗಳ್ಳಿಯ ಹನುಮಂತಪ್ಪ, ಪುಷ್ಪಾ ನಾಗರಾಜ್, ಲಕ್ಷ್ಮಮ್ಮ ವಾಮದೇವಪ್ಪ, ಪಿಡಿಓ ರೇಣುಕ, ರೇವಣಸಿದ್ದೇಶ್ವರ ಯುವಕ ಸಂಘದ ಅಧ್ಯಕ್ಷ ಸಾರಥಿ ಶಂಭುಲಿಂಗಪ್ಪ, ಉಪನ್ಯಾಸಕರಾದ ಶ್ರೀಮತಿ ಸುಮತಿ ಜಯಪ್ಪ ಮತ್ತಿತರರು ಭಾಗವಹಿಸಿದ್ದರು.
ವಕೀಲ ಮಂಜುನಾಥ್ ದೊಡ್ಡಮನಿ ಸ್ವಾಗತಿಸಿ ದರು. ಸಾರಥಿ ಉಮೇಶ್ ಕಾರ್ಯಕ್ರಮ ನಿರೂಪಿ ಸಿದರೆ, ಎಂ.ಬಿ.ಮಂಜುನಾಥ್ ವಂದಿಸಿದರು.

error: Content is protected !!