ಮಕ್ಕಳು ವ್ಯಕ್ತಿಗಳಾಗಿ ರೂಪುಗೊಳ್ಳಲು ಉತ್ತಮ ಪರಿಸರ ಅಗತ್ಯ

ಮಕ್ಕಳು ವ್ಯಕ್ತಿಗಳಾಗಿ ರೂಪುಗೊಳ್ಳಲು ಉತ್ತಮ ಪರಿಸರ ಅಗತ್ಯ

ದಾವಣಗೆರೆ, ಅ. 15- ಪ್ರತಿಯೊಬ್ಬರ ಜೀವನದಲ್ಲಿ ಬಾಲ್ಯಾವಸ್ಥೆಯು ಮಹತ್ವದ ಅವಧಿಯಾಗಿದ್ದು, ಪ್ರತಿಯೊಂದು ಮಗುವು ವ್ಯಕ್ತಿಯಾಗಿ ರೂಪುಗೊಳ್ಳಲು ಆರೈಕೆ ಹಾಗೂ ಹಿತಕರವಾದ ಉತ್ತಮ ಪರಿಸರದ ಅಗತ್ಯವಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣಕುಮಾರ್ ತಿಳಿಸಿದರು.
ಆಕ್ಷನ್ ಇನಿಷಿಯೇಟಿವ್ ಫಾರ್ ಡೆವಲ ಪ್‍ಮೆಂಟ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಧಾರ-ಸಮುದಾಯ ಮಾನಸಿಕ ಆರೋಗ್ಯ ಕೇಂದ್ರ ವತಿಯಿಂದ ಡಾನ್‍ಬಾಸ್ಕೋ ಟ್ರೈನಿಂಗ್ ಹಾಲ್‍ನಲ್ಲಿ ಹಮ್ಮಿಕೊಂಡಿದ್ದ ಯುವಕ-ಯುವತಿಯರಿಗೆ ಮನೋಸಾಮಾಜಿಕ ಆರೈಕೆ ತರಬೇತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರಪಂಚದಾದ್ಯಂತ ನಡೆಸಿದ ಸಮೀಕ್ಷೆಯಿಂದ ವಿಶಾಲ ಸಂಖ್ಯೆಯ ಮಕ್ಕಳು ಅನಾರೋಗ್ಯಕರ ಹಾಗೂ ಅಹಿತಕರ ವಾತಾವರಣದಲ್ಲಿ ಇದ್ದು, ಜೈವಿಕ ಮತ್ತು ಮಾನಸಿಕ ಎರಡು ಕ್ಷೇತ್ರಗಳಲ್ಲಿನ ಸಮಸ್ಯೆ ಅವರ ವಿಕಾಸದ ಮೇಲೆ ಪ್ರಭಾವ ಬೀರುತ್ತಿದೆ ಎಂದು ತಿಳಿದು ಬಂದಿದೆ. ಕಷ್ಟದ ಸನ್ನಿವೇಶಗಳಲ್ಲಿ ರುವ ಮಕ್ಕಳು ಬಾಲ ಕಾರ್ಮಿಕರು, ಬೀದಿ ಮಕ್ಕಳು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸುವ ಮತ್ತು ಅವರಿಗೆ ಮನೋಸಾಮಾಜಿಕ ಆರೈಕೆ ನೀಡುವ ಅಗತ್ಯವಿದ್ದು, ಮಕ್ಕಳ ಹಕ್ಕುಗಳು ಮತ್ತು ಸಂವಿಧಾನದ ಸೌಲಭ್ಯಗಳು ಮಕ್ಕಳಿಗೆ ತಲುಪಿಸಲು ಯೋಜನೆಗಳ ಸಮರ್ಪಕ ಅನುಷ್ಠಾನ ಅಗತ್ಯವಿದೆ ಎಂದು ಹೇಳಿದರು.
ಡಾನ್ ಬಾಸ್ಕೋ ಸಂಸ್ಥೆಯ ನಿದೇರ್ಶಕ ಫಾದರ್ ರೆಜಿ ಜೇಕಬ್ ಮಾತನಾಡಿ, ಭಾರತವು ಸುಮಾರು ನಾನೂರ ನಲವತ್ತು ದಶಲಕ್ಷದಷ್ಟು ಮಕ್ಕಳ ಜನ ಸಂಖ್ಯೆ ಹೊಂದಿದ್ದು, ಭಾರತದಲ್ಲಿ ಮಕ್ಕಳನ್ನು ದುರ್ಬಲಗೊಳಿಸುತ್ತಿರುವ ಮತ್ತು ಅವರ ರಕ್ಷಣೆ ಹಕ್ಕುಗಳನ್ನು ಉಲ್ಲಂಘಿಸುತ್ತಿರುವುದು ವಿಷಾಧನೀಯ ಸಂಗತಿ ಎಂದರು.
ಪ್ರಾಸ್ತವಿಕವಾಗಿ ಎಐಡಿ ಸಂಸ್ಥೆಯ ಕಾರ್ಯ ದರ್ಶಿ ಡಿ.ಎಸ್.ಬಾಬಣ್ಣ ಮಾತನಾಡಿ, ಮಕ್ಕಳ ಜೀವನವನ್ನು ಸುಧಾರಿಸಿ, ಸಮಾಜದ ಮುಖ್ಯವಾಹಿ ನಿಗೆ ತರಲು ಸರ್ಕಾರೇತರ ಸಂಘಟನೆಗಳು ನಡೆಸು ತ್ತಿರುವ ಪ್ರಯತ್ನವು ಪ್ರಶಂಸನೀಯ ಎಂದು ತಿಳಿಸಿದರು.
ನಿಮ್ಹಾನ್ಸ್ ಆಸ್ಪತ್ರೆಯ ಡಾ.ಸಂಜೀವ್‍ ಕುಮಾರ್, ಸಂತೋಷ್‍ಕುಮಾರ್ ಎಂ., ಮನಶಾಸ್ತ್ರಜ್ಞ ಎಸ್.ವಿಜಯ್‍ಕುಮಾರ್ ಮಾತನಾಡಿದರು.

error: Content is protected !!