ಖೋಖೋ ಕ್ರೀಡೆ : ತುರ್ಚಘಟ್ಟ ಶಾಲಾ ಮಕ್ಕಳು ರಾಷ್ಟ್ರ ಮಟ್ಟಕ್ಕೆ

ಖೋಖೋ ಕ್ರೀಡೆ : ತುರ್ಚಘಟ್ಟ  ಶಾಲಾ ಮಕ್ಕಳು ರಾಷ್ಟ್ರ ಮಟ್ಟಕ್ಕೆ

ದಾವಣಗೆರೆ, ಅ. 15- ಬೆಂಗಳೂರಿನಲ್ಲಿ ನಡೆದ ಪ್ರೌಢಶಾಲೆಯ ಬೆಂಗಳೂರು ವಿಭಾಗ ಮತ್ತು ರಾಜ್ಯ ಮಟ್ಟದ ಬಾಲಕರ ಖೋ ಖೋ ಕ್ರೀಡಾಕೂಟದಲ್ಲಿ ದಾವಣಗೆರೆ ತಾಲ್ಲೂಕು ತುರ್ಚಘಟ್ಟ ಆಂಜನೇಯ ಸರ್ಕಾರಿ ಪ್ರೌಢಶಾಲೆಯ ಬಾಲಕರು ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಪಡೆದುಕೊಂಡು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ದಾವಣಗೆರೆ ಪಿ.ಜೆ.ಬಡಾವಣೆಯ ಈಶ್ವರಮ್ಮ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ದೈಹಿಕ ಶಿಕ್ಷಕ ರವಿ ಅವರು ಈ ಬಾಲಕರಿಗೆ ತರಬೇತಿ ನೀಡಿದ್ದರು.ಮಕ್ಕಳ ಸಾಧನೆಗೆ ದೈಹಿಕ ಶಿಕ್ಷಕ ಎಸ್.ಶ್ರೀನಿವಾಸ್ ಅಭಿನಂದನೆ ಸಲ್ಲಿಸಿದ್ದಾರೆ.

error: Content is protected !!