ಯುವಕನ ಮೇಲೆ ಕರಡಿ ದಾಳಿ, ಕ್ರಮಕ್ಕೆ ಮನವಿ

ಯುವಕನ ಮೇಲೆ ಕರಡಿ ದಾಳಿ, ಕ್ರಮಕ್ಕೆ ಮನವಿ

ಹರಪನಹಳ್ಳಿ, ಅ.15- ಜಮೀನಿಗೆ ಹೋಗಿ ವಾಪಸ್‌ ಮನೆಗೆ ಬರುತ್ತಿದ್ದ ಯುವಕನ ಮೇಲೆ ಕರಡಿ ದಾಳಿ ನಡೆಸಿ ಗಂಭೀರ ಗಾಯಗೊಳಿಸಿರುವ ಘಟನೆ ತಾಲ್ಲೂಕಿನ ಕೆ.ಕಲ್ಲಹಳ್ಳಿ ಗ್ರಾಮದ ಹೊರವಲಯದಲ್ಲಿ ಶನಿವಾರ ನಡೆದಿದೆ.

ಕೆ.ಆನಂದ (28) ರಂಗಾಪುರ ಗ್ರಾಮದ ಯುವಕ, ಕೆ.ಕಲ್ಲಹಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದು, ಶನಿವಾರ ಬೆಳಿಗ್ಗೆ ಗ್ರಾಮದ ಹೊರವಲಯದಲ್ಲಿರುವ ಜಮೀನಿಗೆ ನೀರು ಹಾಯಿಸಲು ಹೋಗಿ, ವಾಪಸ್ಸು ಮನೆಗೆ ಬರುವ ವೇಳೆ ದಾರಿ ಮಧ್ಯೆ ಹಳ್ಳದಲ್ಲಿ ಅವಿತು ಕುಳಿತ್ತಿದ್ದ ಎರಡು ಕರಡಿಗಳು ಯುವಕನ ಮೇಲೆ ಏಕಾಏಕಿ ದಾಳಿ ನಡೆಸಿ ಮುಖ ಹಾಗೂ ತಲೆಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿವೆ.

ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಯುವಕ ಚೀರಾಡಿದ್ದಾನೆ. ಇದನ್ನು ಗಮನಿಸಿದ ಅಕ್ಕ-ಪಕ್ಕದ ರೈತರು ಸ್ಥಳಕ್ಕೆ ಧಾವಿಸಿ ಕರಡಿಗಳನ್ನು ಓಡಿಸಿದ್ದಾರೆ.

ಕರಡಿ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಯುವಕನನ್ನು ರೈತರು ಹಾಗೂ ಗ್ರಾಮಸ್ಥರು ಹರಪನ ಹಳ್ಳಿ ಸಾರ್ವಜನಿಕರ ಆಸ್ಪತ್ರೆಗೆ ಕರೆದ್ಯೊಯ್ದು ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳುಹಿಸಲಾಗಿದೆ.

ಕೂಡಲೇ ಕರಡಿಗಳನ್ನು ಅಲ್ಲಿಂದ ಅರಣ್ಯ ಪ್ರದೇಶಕ್ಕೆ ಓಡಿಸಲು 12 ಜನ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಗ್ರಾಮದ ಜನತೆಗೆ ತೊಂದರೆಯಾಗದಂತೆ ರಕ್ಷಣೆ ನೀಡಲು ಕ್ರಮವಹಿಸಲಾಗುವುದು. ಯುವಕನ ಮೇಲೆ ನಡೆದಿರುವ ಕರಡಿ ದಾಳಿಗೆ ಕೂಡಲೇ ಅವರಿಂದ ಚಿಕಿತ್ಸೆ ಕುರಿತು ವರದಿ ತರಿಸಿಕೊಂಡು ಮೇಲಾಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇವೆ.

ಯುವಕನ ಮೇಲೆ ನಡೆದಿರುವ ಈ ಕರಡಿ ದಾಳಿಯಿಂದ ನಮಗೆ ಆತಂಕ ಶುರುವಾಗಿದೆ. ಕೆ.ಕಲ್ಲಹಳ್ಳಿ ಗ್ರಾಮವು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವುದರಿಂದ ಕಾಡು ಪ್ರಾಣಿಗಳ ಕಾಟ ಹೆಚ್ಚಾಗಿದೆ. ಅರಣ್ಯ ಸಮೀಪದಲ್ಲಿಯೇ ರೈತರ ಜಮೀನುಗಳು ಹೆಚ್ಚಿದ್ದು, ಜಮೀನಿನ ಕೆಲಸಗಳಿಗೆ ಹೋಗಿ ಬರಲು ಭಯಪಡುವಂತಾಗಿದೆ.  ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕರಡಿಗಳನ್ನು ಹಿಡಿದು ಅರಣ್ಯಪ್ರದೇಶಕ್ಕೆ ಬೀಡಬೇಕು ಹಾಗೂ ರೈತರಿಗೆ ಸೂಕ್ತ ರಕ್ಷಣೆಯನ್ನು ನೀಡುವಂತೆ ಕ್ರಮವಹಿಸಬೇಕು ಎಂದು ಆ ಭಾಗದ ರೈತರು ಆಗ್ರಹಿಸಿದ್ದಾರೆ.

error: Content is protected !!