ಇಸ್ರೇಲ್ ಯುದ್ಧದ ಸಂದರ್ಭದಲ್ಲೂ ನಿರ್ಭಯವಾಗಿ  ಸೇವೆ ಗೈಯುತ್ತಿರುವ ದೊಣ್ಣೆಹಳ್ಳಿ ನರ್ಸ್ ಪ್ರಿಯದರ್ಶಿನಿ

ಇಸ್ರೇಲ್ ಯುದ್ಧದ ಸಂದರ್ಭದಲ್ಲೂ ನಿರ್ಭಯವಾಗಿ  ಸೇವೆ ಗೈಯುತ್ತಿರುವ ದೊಣ್ಣೆಹಳ್ಳಿ ನರ್ಸ್ ಪ್ರಿಯದರ್ಶಿನಿ

ಜಗಳೂರು, ಅ. 14 – ಇಸ್ರೇಲ್ ಮತ್ತು ಪ್ಯಾಲಿಸ್ಟೀನ್ ನ ಹಮಾಸ್ ಉಗ್ರರ ವಾಯುದಾಳಿಯ ಸಂಘರ್ಷ ದಿನದಿಂದ ದಿನಕ್ಕೆ ಉದ್ವಿಗ್ನ ಪರಿಸ್ಥಿತಿ‌ ನಿರ್ಮಾಣವಾಗುತ್ತಿದೆ. ಈ ಮಧ್ಯೆಯೂ ನಿರ್ಭಯದಿಂದ ತಾಲ್ಲೂಕಿನ ದೊಣ್ಣೆಹಳ್ಳಿ ಗ್ರಾಮದ ಪ್ರಿಯದರ್ಶಿನಿ (33) ಸ್ಟಾಫ್ ನರ್ಸ್ ವೃತ್ತಿಯಲ್ಲಿ ವಯೋವೃದ್ದ ದಂಪತಿಗಳ ಸೇವೆ ಸಲ್ಲಿಸುತ್ತಿದ್ದಾರೆ.
ದೊಣ್ಣೆಹಳ್ಳಿ ಗ್ರಾಮದಲ್ಲಿ ಜನಿಸಿ ಶಿವಮೊಗ್ಗದಲ್ಲಿ ಜಿಎನ್‌ಎಂ ಮತ್ತು ಬಿಎಸ್ ಸಿ ನರ್ಸಿಂಗ್ ಕೋರ್ಸ್‌ನ ವ್ಯಾಸಂಗ ಮುಗಿಸಿ  ತಾಲ್ಲೂಕಿನ ಮುಗ್ಗಿದ ರಾಗಿಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿಶಾಲೆಯಲ್ಲಿ ಎರಡು ವರ್ಷಗಳ ಕಾಲ ವೃತ್ತಿ ಆರಂಭಿಸಿದ ಇವರು ನಂತರ ಬೆಂಗಳೂರು,ಉಡುಪಿ ಖಾಸಗಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿದರು. ಇಸ್ರೇಲ್ ದೇಶದಲ್ಲಿ ಕಳೆದ 5 ವರ್ಷಗಳಿಂದ ವಯೋವೃದ್ಧ ದಂಪತಿಗಳ ಆರೋಗ್ಯ ಸೇವೆಯಲ್ಲಿ ತೊಡಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸ್ವಗ್ರಾಮಕ್ಕೆ ಕರೆದರೂ ಬಾರದ ಮಗಳು : ನನಗೆ 4 ಜನ ಹೆಣ್ಣುಮಕ್ಕಳಿದ್ದು ಅದರಲ್ಲಿ ಪ್ರಿಯದರ್ಶಿನಿಯೊಬ್ಬಳು ಇಸ್ರೇಲ್‌ನಲ್ಲಿ ಕೆಲಸಕ್ಕೆ ಹೋಗಿದ್ದು. ಅಲ್ಲಿ ಉತ್ತಮ ವೇತನ‌ ಪಡೆದು ದೊಣ್ಣೆಹಳ್ಳಿ ಕಳೆದ 2 ವರ್ಷಗಳ ಹಿಂದೆ ಹೊಸ ಮನೆ ನಿರ್ಮಿಸಲು ಸಂಪೂರ್ಣ ಹಣ ಭರಿಸಿದ್ದಾಳೆ. ಕುಟುಂಬದ ನಿರ್ವಹಣೆಗೆ ನೆರವಾಗಿ ದ್ದಾರೆ. ಇದೀಗ ಇಸ್ರೇಲ್‌ನಲ್ಲಿ ಯುದ್ದ ನಡೆಯುತ್ತಿರುವ ಪರಿಣಾಮ ಸಾವು ನೋವುಗಳು ನಮಗೆ ಆತಂಕ ಎದುರಾಗಿದೆ. ಕೆಲಸ ತೊರೆದು ಭಾರತ ದೇಶಕ್ಕೆ ಮರಳಿ ಬಾರಮ್ಮ  ಎಂದರೆ ಕೇಳುತ್ತಿಲ್ಲ. ವಯೋವೃದ್ದರ ಆರೋಗ್ಯ ಸೇವೆ ತೃಪ್ತಿ ತಂದಿದೆ. ಇನ್ನು 2024 ರ ಫೆ. ತಿಂಗಳಿಗೆ ಪಾಸ್ ಪೋರ್ಟ್  ಅವಧಿ ಮುಕ್ತಾಯವಾಗುತ್ತದೆ. ಆ ನಂತರ ಬರುವೆ ಎನ್ನುತ್ತಾಳೆ‌ ಎಂದು ಪ್ರಿಯ ದರ್ಶಿನಿ ತಾಯಿ ಮಂಜುಳಾ‌ ಅವರು ತಿಳಿಸಿದ್ದಾರೆ.

error: Content is protected !!