ದಾವಣಗೆರೆ, ಅ. 12 – ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಅಧ್ಯಕ್ಷ ಇಸ್ಮಾಯಿಲ್ ಜಬಿಉಲ್ಲಾ ಅಧ್ಯಕ್ಷತೆ ಯಲ್ಲಿ, ಕಾಂತರಾಜ್ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು. ಮುಸ್ಲಿಮರ 2 ಬಿ ಮೀಸಲಾತಿ ಪ್ರಮಾಣವನ್ನು ಶೇಕಡ 8ಕ್ಕೆ ಏರಿಸಲು ಆಗ್ರಹಿಸಿ ಪಾಲಿಕೆ ಮುಂಭಾಗ ಧರಣಿ ನಡೆಸಲಾಯಿತು.
ಬಿಹಾರ ಸರ್ಕಾರ ಜಾತಿ ಗಣತಿಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸಿ, ಅದನ್ನು ಅಂಗೀ ಕರಿಸಿ ಸಾರ್ವಜನಿಕ ಗೊಳಿಸಿದೆ. ಅದೇ ಮಾದರಿ ಯಲ್ಲಿ ಕಾಂತರಾಜ್ ಆಯೋಗದ ವರದಿಯನ್ನು ತಕ್ಷಣವೇ ಅಂಗೀಕರಿಸಿ ಸಾರ್ವಜನಿಕ ಗೊಳಿಸ ಬೇಕು ಎಂದು ಒತ್ತಾಯಿಸಲಾಯಿತು. ಇದರ ಜೊತೆಗೆ ಹಿಂದಿನ ಬಿಜೆಪಿ ಸರ್ಕಾರ ಸಚಿವ ಸಂಪುಟದ ಮೂಲಕ ಮುಸ್ಲಿಮರ ಮೇಲಿನ ದ್ವೇಷದ ಕಾರಣಕ್ಕೆ 2ಬಿ ಮೂಲಕ ಮುಸ್ಲಿಮರಿಗೆ ಒದಗಿಸಲಾಗಿದ್ದ ಮೀಸಲಾತಿಯನ್ನು ರದ್ದು ಮಾಡುವ ಕಾರ್ಯಕ್ಕೆ ಕೈ ಹಾಕಿತ್ತು. ಇದು ಸದ್ಯ ಕೋರ್ಟ್ ನಲ್ಲಿದೆ. ತಾವು ಕೂಡ ಸಚಿವ ಸಂಪುಟ ಸಭೆಯ ಮೂಲಕ ನಿರ್ಣಯ ಕೈಗೊಂಡು ಅಂದಿನ ಬಿಜೆಪಿ ಸರ್ಕಾರದ ನಿರ್ಣಯವನ್ನು ಹಿಂಪಡೆಯ ಬೇಕು ಎಂದು ಆಗ್ರಹಿಸಲಾಯಿತು.
ಧರಣಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೈಯದ್ ಅಶ್ಫಾಕ್, ಜಿಲ್ಲಾ ಉಪಾಧ್ಯಕ್ಷ ರಜ್ವಿ ರಿಯಾಜ್ ಅಹಮದ್, ಮುಸ್ಲಿಂ ಒಕ್ಕೂಟದ ಸಂಚಾಲಕ ಟಿ. ಅಜ್ಘರ್, ಜೆಡಿಎಸ್ ಮುಖಂಡ ಜೆ. ಅಮಾನುಲ್ಲಾ ಖಾನ್ ಹಾಗೂ ಇತರರು ಉಪಸ್ಥಿತರಿದ್ದರು.