ಮಲೇಬೆನ್ನೂರು, ಅ.12- ಹೊಳೆಸಿರಿಗೆರೆ ಗ್ರಾಮದಲ್ಲಿ ರಥದ ಮೂಲಕ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಆರೋಗ್ಯ ಇಲಾಖೆಯಿಂದ ಸಿದ್ಧಪಡಿಸಿರುವ ಈ ಡೆಂಗ್ಯೂ ರಥವು ಹಳ್ಳಿ ಹಳ್ಳಿಗಳಿಗೆ ತೆರಳಿ ಜನರಲ್ಲಿ ಅರಿವು ಮೂಡಿಸಲಿದೆ. ಕಾರ್ಯಕ್ರಮದಲ್ಲಿ ಡೆಂಗ್ಯೂ, ಚಿಕುನ್ಗುನ್ಯ ಕಾಯಿಲೆ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಚೇತನ್ ಅವರು ಮಾಹಿತಿ ಶಿಕ್ಷಣ ನೀಡಿದರು. ಗ್ರಾ.ಪಂ. ಅಧ್ಯಕ್ಷ ಬಿ. ಶೇಖರಪ್ಪ ಹಾಗೂ ಇತರರು ಭಾಗವಹಿಸಿದ್ದರು.
ಹೊಳೆಸಿರಿಗೆರೆಯಲ್ಲಿ ರಥದ ಮೂಲಕ ಡೆಂಗ್ಯೂ ಜ್ವರದ ಜಾಗೃತಿ
