ಹರಪನಹಳ್ಳಿ ತಹಶೀಲ್ದಾರ್ ಗಿರೀಶ್ಬಾಬು
ಹರಪನಹಳ್ಳಿ, ಅ. 12- ಇದೇ ತಿಂಗಳು 23ರಂದು ಜರುಗುವ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ಪಟ್ಟಣದ ಸಮರ್ಥ ಸೌಧದಲ್ಲಿ ಆಯೋಜಿಸಲಾಗುವುದು. ಕಾರ್ಯ ಕ್ರಮಕ್ಕೆ ಸಂಘ-ಸಂಸ್ಥೆಯವರು ಹಾಗೂ ವಿವಿಧ ಸಮಾಜಗಳ ಮುಖಂಡರು ಆಗಮಿಸುವ ಮೂಲಕ ಮಹನೀಯರ ಜಯಂತಿಯನ್ನು ಯಶಸ್ವಿಗೊಳಿಸಬೇಕು ಎಂದು ತಹಶೀಲ್ದಾರ್ ಗಿರೀಶ್ಬಾಬು ಹೇಳಿದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ಆಯುಧ ಪೂಜೆ ಇರುವುದರಿಂದ ಕಾರ್ಯಕ್ರಮ ಮುಂದೂಡುವುದಿದ್ದರೆ ಸಭೆಗೆ ತಿಳಿಸಿ ಎಂದು ಕೇಳಿದಾಗ, ಸಮಾಜದ ಅಧ್ಯಕ್ಷ ಪಿ. ಬೆಟ್ಟನಗೌಡ್ರು, ನಾವು 23ರಂದು ತಾಲ್ಲೂಕು ಆಡಳಿತದ ಸಹಕಾರದೊಂದಿಗೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಆಚರಿಸುತ್ತೇವೆ ಎಂದು ಸಭೆಗೆ ತಿಳಿಸಿದರು.
ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷ ಪಿ. ಬೆಟ್ಟನಗೌಡ್ರು ಹಾಗೂ ಅಡವಿಹಳ್ಳಿ ಬಸವರಾಜ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ಭಾರತದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಯಾಗಿದ್ದು, ಅಂತಹ ದಿಟ್ಟ ಹೋರಾಟ ಗಾರ್ತಿಯ ಜಯಂತಿಯನ್ನು ಅತ್ಯಂತ ಅರ್ಥ ಪೂರ್ಣವಾಗಿ ಆಚರಿಸಬೇಕು ಎಂದ ಅವರು, ರಾಷ್ಟ್ರೀಯ ಹಬ್ಬಗಳಿಗೆ ಅಧಿಕಾರಿಗಳು ಗೈರಾ ಗುತ್ತಿದ್ದು, ಸಹಾಯಕರನ್ನು ಕಳುಹಿಸುತ್ತಿದ್ದಾರೆ. ಜಯಂತಿಗೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಈ ವೇಳೆ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ. ಉಚ್ಚಂಗೆಪ್ಪ, ವೀರಶೈವ ಪಂಚಮಸಾಲಿ ಸಮಾಜದ ರಾಜ್ಯ ಸದಸ್ಯರಾದ ಎಸ್. ಸಿದ್ದಲಿಂಗಪ್ಪ, ಕಾರ್ಯದರ್ಶಿ ಎ.ಜಿ. ಮಂಜುನಾಥ, ವೀರಶೈವ ಪಂಚಮಸಾಲಿ ನೌಕರರ ಘಟಕದ ಅಧ್ಯಕ್ಷ ಹೆಚ್. ನಾಗರಾಜ, ಉಪಾಧ್ಯಕ್ಷ ಬಿ.ಎಸ್. ಲಿಂಗರಾಜು, ನಾಗರಾಜ ಬಣಕಾರ್, ವೀರಶೈವ ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ, ಕಾರ್ಯದರ್ಶಿ ನೀಲಗುಂದ ಸುಮ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಪುಷ್ಪಾ ದಿವಾಕರ್, ಪಂಪಣ್ಣ ಅರಸಿಕೇರಿ, ರಾಜು ಬೇಲೂರು, ಬಿ. ಬಸವರಾಜಪ್ಪ ಮಾಸ್ತರ್, ಐ.ಜಿ. ಮಂಜುನಾಥ ಚಿಗಟೇರಿ, ಮಹೇಶ ಪೂಜಾರ್, ಬಸವನಗೌಡ ತೌಡೂರು ಸೇರಿದಂತೆ ಇತರರು ಇದ್ದರು.