ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು-ಕದಳಿ ಮಹಿಳಾ ವೇದಿಕೆಯಿಂದ ದತ್ತಿ ಉಪನ್ಯಾಸ

ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು-ಕದಳಿ   ಮಹಿಳಾ ವೇದಿಕೆಯಿಂದ ದತ್ತಿ ಉಪನ್ಯಾಸ

ದಾವಣಗೆರೆ, ಅ.11- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ಮಹಿಳಾ ವೇದಿಕೆ ಜಿಲ್ಲಾ ಘಟಕದ ವತಿಯಿಂದ ನಗರದ  ಎಂ.ಸಿ.ಕಾಲೋನಿ ಯಲ್ಲಿರುವ  ಬಸವ ಮಂಟಪದಲ್ಲಿ ಜರುಗಿದ 147ನೇ ಕಮ್ಮಟದಲ್ಲಿ ದತ್ತಿ ಉಪನ್ಯಾಸ,  ಗಾಂಧಿ ಜಯಂತಿ, ಚೆನ್ನಬಸವಣ್ಣ ಮತ್ತು ಕಲ್ಯಾಣ ಸ್ಮರಣೆ ಕಾರ್ಯ   ಕ್ರಮ ಆಯೋಜಿಸಲಾಗಿತ್ತು.

 ಲಿಂಗೈಕ್ಯ ಪ್ರೊ. ಬಿ.ಕೆ.ಸಿದ್ದಪ್ಪ, ಲಿಂಗೈಕ್ಯ ಕೆ.ಜಿ.ಕಲ್ಲಪ್ಪ ಹಾಗೂ ಲಿಂಗೈಕ್ಯ ಕೆ.ಜಿ.ಲೋಕೇಶ್ವರಮ್ಮ  ದತ್ತಿ    ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. `ಆನು ಒಲಿದಂತೆ ಹಾಡುವೆನು’ ವಿಷಯ ಕುರಿತಂತೆ ಅನುಶ್ರೀ ಸಂಗೀತ ಶಾಲೆಯ ವೀಣಾ ಹೆಗಡೆ ದತ್ತಿ ಉಪನ್ಯಾಸ ನೀಡಿದರು. ದತ್ತಿ ದಾನಿಗಳಾದ ಸಾವಿತ್ರಮ್ಮ ಸಿದ್ದಪ್ಪ   ಮತ್ತು ಕೆ.ಜಿ. ಸದಾನಂದ ಸಹೋದರರು, ಪಲ್ಲವಿ ಪಾಟೀಲ್ ಉಪಸ್ಥಿತರಿದ್ದರು. ಕದಳಿ ವೇದಿಕೆ ಜಿಲ್ಲಾಧ್ಯಕ್ಷರಾದ ವಿನೋದ ಅಜಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು. 

 ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ,  ಕದಳಿ ವೇದಿಕೆ ತಾಲ್ಲೂಕು ಅಧ್ಯಕ್ಷೆ ಗಾಯತ್ರಿ ವಸ್ತ್ರದ್, ನಿಕಟ ಪೂರ್ವ ಅಧ್ಯಕ್ಷರಾದ ಕುಸುಮಾ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

ಅತಿಥಿಗಳ  ಪರಿಚಯವನ್ನು  ಮಮತಾ ನಾಗರಾಜ್  ಮಾಡಿದರು. ಸೌಮ್ಯ ಸತೀಶ್ ಸ್ವಾಗತಿಸಿದರು. ವಾಣಿ ರಾಜ್ ವಂದಿಸಿದರು.  

ವಿನೂತನ ಮಹಿಳಾ ಸಮಾಜದ ಅಧ್ಯಕ್ಷರಾದ ಚಂದ್ರಿಕಾ ಮಂಜುನಾಥ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ  ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

error: Content is protected !!