ರಾಣೇಬೆನ್ನೂರು `ವಂದೇ ಮಾತರಂ’ ಸಂಘಟನೆಯಿಂದ ಅತಿ ಹೆಚ್ಚು ರಕ್ತದಾನ

ರಾಣೇಬೆನ್ನೂರು `ವಂದೇ ಮಾತರಂ’ ಸಂಘಟನೆಯಿಂದ  ಅತಿ ಹೆಚ್ಚು ರಕ್ತದಾನ

ರಾಣೇಬೆನ್ನೂರು, ಅ.11- `ರಾಣೇಬೆನ್ನೂರು ಕಾ ರಾಜಾ’ ಗಣೇಶ ಪ್ರತಿಷ್ಟಾಪಿಸಿರುವ ವಂದೇ ಮಾತರಂ ಸ್ವಯಂ ಸೇವಾ ಸಂಸ್ಥೆ ಹಾಗೂ ಜಿಲ್ಲಾ ರಕ್ತ ಕೇಂದ್ರ ಹಾಗೂ ದಾವಣಗೆರೆಯ ಚಿಗಟೇರಿ ಸಾರ್ವಜನಿಕ ಆಸ್ಪತ್ರೆಯ ರಕ್ತ ಕೇಂದ್ರದವರು ಸಂಯುಕ್ತವಾಗಿ ನಡೆಸಿದ ರಕ್ತದಾನ ಶಿಬಿರದಲ್ಲಿ ಸಂಘಟನೆಯ ಅಧ್ಯಕ್ಷ ಪ್ರಕಾಶ ಬುರಡಿಕಟ್ಟಿ, ವೀರೇಶ ಹೆದ್ದೇರಿ, ಪ್ರಮೋದ ಸೇರಿದಂತೆ ನೂರಾರು ಯುವಕರು  ರಕ್ತದಾನ ಮಾಡಿದರು.  ಹಾವೇರಿ ಜಿಲ್ಲೆಯಾದ್ಯಂತ ನಡೆಯುವ ಎಲ್ಲ ಶಿಬಿರಗಳಲ್ಲಿ ಸಂಗ್ರಹವಾಗುವುದಕ್ಕಿಂತ ಹೆಚ್ಚು ಅಂದರೆ 168 ಯೂನಿಟ್ ರಕ್ತವನ್ನು ಕಳೆದ ವರ್ಷದ ಶಿಬಿರದಲ್ಲಿ ಸಂಗ್ರಹಿಸಿ ದಾನ ಮಾಡಲಾಗಿತ್ತು. ಈಗ ಅದಕ್ಕಿಂತಲೂ ಹೆಚ್ಚು ಅಂದರೆ 240 ಯೂನಿಟ್ ಕೊಡಲಾಯಿತು. ಇದರ ಸದುಪಯೋಗ ಬಡವರಿಗೆ ಆಗಲಿದ್ದು, ವಂದೇಮಾತರಂ ಸಂಸ್ಥೆಯ ಈ ಸಮಾಜಮುಖಿ ಕಾರ್ಯ ಶ್ಲ್ಯಾಘನೀಯವಾಗಿದೆ.

ಇಲ್ಲಿನ  ಸಾರ್ವಜನಿಕ ಆಸ್ಪತ್ರೆಯ ಡಾ. ಬಸವರಾಜ ತಳವಾರ, ಬಸವರಾಜ ಕಮತರ, ಹರೀಶ ಸಣ್ಣಬೊಮ್ಮಜಿ, ಸುಮಾ ಲಮಾಣಿ, ಶ್ರೀ ನಿವಾಸ ಸುರಹೊನ್ನೆ, ಅಕ್ಕಮ್ಮ ಅಮಾಸಿ, ದಾವಣಗೆರೆಯ ಶಿಲ್ಪಾ, ರಶ್ಮಿ, ಡಿ.ಎಸ್. ದೇವೇಂದ್ರಪ್ಪ ಮತ್ತು  ಹಾವೇರಿ ರಕ್ತ ಕೇಂದ್ರದ ಸಿಬ್ಬಂದಿ ರಕ್ತ ಸಂಗ್ರಹಿಸಿಕೊಂಡರು.

error: Content is protected !!