ಜನತಾ ದರ್ಶನ ಹೋಬಳಿ ಮಟ್ಟಕ್ಕೂ ವಿಸ್ತರಣೆ

ಜನತಾ ದರ್ಶನ ಹೋಬಳಿ ಮಟ್ಟಕ್ಕೂ ವಿಸ್ತರಣೆ

ಹರಪನಹಳ್ಳಿ ಜನತಾ ದರ್ಶನದಲ್ಲಿ ವಿವಿಧ ಇಲಾಖೆಗಳ 413 ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವಿಕಾರಿಸಿದ ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್

ಹರಪನಹಳ್ಳಿ, ಅ. 10 – ಸಾರ್ವಜನಿಕರ ಅನುಕೂಲಕ್ಕಾಗಿ ಆರಂಭವಾಗಿರುವ ಜನತಾ ದರ್ಶನ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟಕ್ಕೂ ವಿಸ್ತರಣೆ ಮಾಡಲಾಗುವುದು ಎಂದು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್‌ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿ ರುವ ಜನತಾ ದರ್ಶನ ಕಾರ್ಯಕ್ರಮ ರಾಜ್ಯದಿಂದ, ಜಿಲ್ಲೆಯಿಂದ ಇದೀಗ ತಾಲ್ಲೂಕು ಮಟ್ಟಕ್ಕೂ ಆರಂಭವಾಗಿರುವುದರಿಂದ ಬಡವರಿಗೂ, ಕೂಲಿಕಾರರಿಗೆ ಹಾಗೂ ರೈತರಿಗೆ ಅನುಕೂಲವಾಗಿದೆ ಎಂದರು.

ತಾಲ್ಲೂಕಿನ ಸಮಸ್ಯೆಗಳನ್ನು ಬಗೆಹರಿಸಲು ಜಿಲ್ಲಾಡಳಿತವನ್ನು ಕರೆ ತರಲಾಗಿದೆ. ಆದರೂ ಸಹ ಹರಪನಹಳ್ಳಿ ತಾಲ್ಲೂಕಿನ ಕೊನೆಯ ಗ್ರಾಮವಾದ ಗರ್ಭಗುಡಿ, ಹಲುವಾಗಲು ಜಿಲ್ಲಾ ಕೇಂದ್ರ ಹೊಸಪೇಟೆಗೆ ಹೋಗಲು 120 ಕಿ.ಮಿ. ದೂರವಾಗಲಿದೆ. 

ಜನರಿಗೆ ಹೋಗಿ ಬರಲು ಸಮಸ್ಯೆಗಳಾಗು ತ್ತಿದ್ದವು. ಆದರೆ ಇಂತಹ ಜನತಾ ದರ್ಶನದಿಂದ ಇಲ್ಲಿಯೇ ಸಾಧ್ಯವಾದಷ್ಟು ಪರಿಹಾರ ಸಿಗಲಿದೆ. ಇಂತಹ ಕಾರ್ಯಕ್ರಮವನ್ನು ಮುಂದಿನ ದಿನ ಗಳಲ್ಲಿ ಹೋಬಳಿ ಮಟ್ಟದಲ್ಲಿ ಆಯೋಜಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಜನತಾ ದರ್ಶನದಲ್ಲಿ ಸಾರ್ವಜನಿಕರಿಂದ ಕಂದಾಯ-7, ಶಿಕ್ಷಣ-3, ಸಮಾಜ ಕಲ್ಯಾಣ -1, ಮಹಿಳಾ ಮತ್ತು ಮಕ್ಕಳ ಕಲ್ಯಾಣ- 2, ಬೆಸ್ಕಾಂ -2, ವಸತಿ ಇಲಾಖೆ 13, ಪಂಚಾ ಯತ್ ರಾಜ್ – 11, ಗ್ರಾಮೀಣಾಭಿವೃದ್ಧಿ ಇಲಾಖೆ 28, ಪ್ರವಾಸ-2, ಸಾರಿಗೆ -7, ಕೌಶಲ್ಯಭಿವೃದ್ಧಿ-1, ಕಾರ್ಮಿಕ 2, ಸೇರಿದಂತೆ ಇತರೆ ಇಲಾಖೆಗಳಿಂದ ಒಟ್ಟು 413ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ, ಜಿ.ಪಂ. ಸಿಇಓ ಸದಾಶಿವಪ್ರಭು, ಜಿಲ್ಲಾ ಉಪ ಅರಣ್ಯಾ ಸಂರಕ್ಷಣಾಧಿಕಾರಿ ಅರ್ಸಾಲಾನ್, ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್, ಡಿವೈಎಸ್‍ಪಿ ವೆಂಕಟಪ್ಪನಾಯಕ, ತಹಶೀಲ್ದಾರ ಗಿರೀಶಬಾಬು, ಸಿಪಿಐ ಎಂ. ನಾಗರಾಜ ಕಮ್ಮಾರ, ಡಿಡಿಪಿಐ ಯುವರಾಜನಾಯ್ಕ, ಜಿಲ್ಲಾ ಆರೋಗ್ಯಾಧಿಕಾರಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಮಂಜುನಾಥ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಶಾಶು ಷಂಶುದ್ದಿನ್, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ರೇಣುಕಾದೇವಿ, ಪುರಸಭೆ ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ, ಎಇಇ ನಾಗಪ್ಪ, ಎಡಿಎಲ್‍ಆರ್ ಬಳ್ಳಾರಪ್ಪ ಸೇರಿದಂತೆ ಇತರರು ಇದ್ದರು.

error: Content is protected !!