ವಿಕಲಚೇತನರ ಸೌಲಭ್ಯಗಳಿಗೆ ಅನುದಾನದ ಭರವಸೆ

ವಿಕಲಚೇತನರ ಸೌಲಭ್ಯಗಳಿಗೆ ಅನುದಾನದ ಭರವಸೆ

ಹೊನ್ನಾಳಿ `ಜೀವ’ ಪುನಶ್ಚೇತನ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಶಾಂತನಗೌಡ

ಹೊನ್ನಾಳಿ, ಅ.10- ಶಾಸಕರ ನಿಧಿಯಿಂದ ಬರುವ ಹಣದಲ್ಲಿ ವಿಕಲಚೇತನರ ಸೌಲಭ್ಯಗ ಳಿಗೆ ಅನುದಾನ ಒದಗಿಸಿಕೊಡಲಾಗುವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಭರವಸೆ ನೀಡಿದರು.

ಪಟ್ಟಣದ ಸರ್ವರ್‍ ಕೇರಿಯಲ್ಲಿ ಸ್ಫೂರ್ತಿ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿ ವೃದ್ಧಿ ಸಂಸ್ಥೆಯ ವತಿಯಿಂದ ಆಯೋಜಿ ಸಲಾಗಿದ್ದ `ಜೀವ’ ಪುನಶ್ಚೇತನ   ಕೇಂದ್ರ ಉದ್ಘಾಟಿಸಿ  ಅವರು ಮಾತನಾಡಿದರು.

ಜೀರೋದಿಂದ 6 ವರ್ಷದ ನಿಧಾನಗತಿ  ಬೆಳವಣಿಗೆಯ ವಿಕಲಚೇತನ ಮಕ್ಕಳ ತಾಯಂ ದಿರುಗಳು ಈ ಥೆರಫಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

2002ರಲ್ಲಿ ನಾನು ಶಾಸಕನಾದಾಗ, ಸ್ಫೂರ್ತಿ ಸಂಸ್ಥೆಯ ಕಾರ್ಯನಿರ್ವಹಣಾಧಿ ಕಾರಿ ರೂಪ್ಲಾನಾಯ್ಕ ಮನವಿ ಮೇರೆಗೆ ಕಮ್ಮಾರಗಟ್ಟೆ ಬಳಿ ಇರುವ ನೀರಾವರಿ ಕಟ್ಟಡ  ತೆರವುಗೊಳಿಸಿ,  ಜೇನುಗೂಡು ಶಾಲೆ, ದುಂಬಿ ಶಾಲೆ, ನಕ್ಷತ್ರ ಶಾಲೆಗಳನ್ನು ಆರಂಭಿಸಿ ಸುಮಾರು ಎರಡು ಸಾವಿರ ಮಕ್ಕಳಿಗೆ ಶಿಕ್ಷಣ ನೀಡಿದ್ದರಿಂದ ಅನೇಕ ವಿದ್ಯಾರ್ಥಿಗಳು ಉದ್ಯೋಗಸ್ಥರಾಗಿ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂದರು. 

ಸ್ಫೂರ್ತಿ ಸಂಸ್ಥೆಯ ಕಾರ್ಯನಿರ್ವಹಣಾಧಿ ಕಾರಿ ರೂಪ್ಲಾನಾಯ್ಕ ಮಾತನಾಡಿ, ಅಂಗವಿಕಲರಿಗೆ ಅಗತ್ಯ ಉಪಕರಣಗಳ ಬಳಕೆಯ ವಿಧಾನ ಹಾಗೂ ವಸ್ತುಗಳ ಸೌಲಭ್ಯ ಅದರ ಬಳಕೆ ವಿಧಾನದ ಮೂಲಕ ಸಮಾಜದ ಮುಖ್ಯವಾಹಿನಿಗೆ ತರುವುದು ಥೆರಪಿ ಕೇಂದ್ರದ ಸದುದ್ಧೇಶವಾಗಿದೆ, ಎರಡು ತಿಂಗಳಿಂದ ಎರಡು ಪಂಚಾಯ್ತಿಗಳಿಂದ 27 ಮಕ್ಕಳನ್ನು ವಿಕಲ ಚೇತನ ಮಕ್ಕಳನ್ನು ಗುರುತಿಸಲು ಸಾಧ್ಯವಾಗಿದೆ. ವಿವಿಧ ತರಬೇತಿ ನೀಡಿ ಸ್ವಯಂ ಉದ್ಯೋಗ ಹಾಗೂ ಕಂಪನಿಗಳಲ್ಲಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡಲಾಗಿದೆ. ಮಹಿಳೆಯರಿಗೆ 125 ಡಿಜಿಟಲ್ ಡ್ರೈವಿಂಗ್ ಲೈಸನ್ಸ್‌ ನೀಡಲಾಗಿದೆ ಮತ್ತು ಮಹಿಳಾ ಸಾಂತ್ವನ ಕೇಂದ್ರಗಳ ಸಹಾಯದಿಂದ ಮಹಿಳೆಯರ ಸಬಲೀಕರಣಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ ಎಂದರು.

ಜಿಲ್ಲಾ ವಿಕಲಚೇತನ ಕಲ್ಯಾಣಾಧಿಕಾರಿ ಕೆ.ಕೆ.ಪ್ರಕಾಶ್, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವ ಣಾಧಿಕಾರಿ ರಾಘವೇಂದ್ರ, ಸಮಾಜ ಕಲ್ಯಾಣಾಧಿ ಕಾರಿ ಹೆಚ್.ಎಲ್.ಉಮಾ, ಶಿಶು ಅಭಿವೃದ್ದಿ ಯೋಜನಾಧಿಕಾರಿ  ಮಹಾಂತೇಶ್ ಪೂಜಾರ್, ಕಾಂಗ್ರೆಸ್ ಓಬಿಸಿ ಸಮಿತಿ ರಾಜ್ಯ ಉಪಾಧ್ಯಕ್ಷ ಹೆಚ್.ಎ.ಉಮಾಪತಿ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಹಕಾರ ಸಂಘದ ನಿರ್ದೇಶಕ ಕರಿಬಸಪ್ಪ, ಪುರಸಭೆ ಸದಸ್ಯೆ ಉಷಾ ಗಿರೀಶ್, ಸ್ಫೂರ್ತಿ ಸಂಸ್ಥೆ  ನಿರ್ದೇಶಕಿ ಎಂ.ರೇಣುಕಾ, ನಿರ್ದೇಶಕ ಕೃಷ್ಣ, ಹಿರಿಯ ಸಂಯೋಜಕಿ ಸುಧಾ, ಸುಪ್ರೀತ ರಾಜೇಶ್ವರಿ, ಕೊಡತಾಳ ರುದ್ರೇಶ್, ನೇತ್ರಾವತಿ, ರೇಷ್ಮಾ, ಭಾರತಿ, ಭವ್ಯ, ವಿಕಲಚೇತನ ಸಂಪ ನ್ಮೂಲಾಧಿಕಾರಿ ವಿನಯ್‍ಕುಮಾರ್ ಇದ್ದರು.

error: Content is protected !!