ಹರಿಹರ ಮನೆಗಳ್ಳನ ಬಂಧನ 4.8 ಲಕ್ಷ ರೂ ಮೌಲ್ಯದ ಆಭರಣ ವಶ

ಹರಿಹರ ಮನೆಗಳ್ಳನ ಬಂಧನ  4.8 ಲಕ್ಷ ರೂ ಮೌಲ್ಯದ ಆಭರಣ ವಶ

ಹರಿಹರ, ಅ.10- ನಗರದ ಜೆ.ಸಿ.ಬಡಾವಣೆಯಲ್ಲಿ  ಜರುಗಿದ್ದ  ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ   ನಗರ ಪೆೋಲೀಸರು ತುರುವೇಕೆರೆ ವೆಂಕಟೇಶ  ಎಂಬಾತನ್ನು ದಸ್ತಗಿರಿ ಮಾಡಿದ್ದು, ಆರೋಪಿತನಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ 4,80,000 ರೂ. ಬೆಲೆಯ 80 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ.

ಸದರಿ ಪ್ರಕರಣದ  ಪತ್ತೆ ಕಾರ್ಯಕ್ಕೆ ಗ್ರಾಮಾಂತರ ಉಪ-ವಿಭಾಗದ   ಪೆೊಲೀಸ್ ಉಪಾಧೀಕ್ಷಕ ಬಸವರಾಜ ಬಿ.ಎಸ್. ಅವರ ಮಾರ್ಗದರ್ಶನದಲ್ಲಿ      ಹರಿಹರ ನಗರ ಠಾಣೆ  ಪೊಲೀಸ್ ನಿರೀಕ್ಷಕ  ಬಿ. ದೇವಾನಂದ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.

ಮನೆಗಳ್ಳತನ ಪ್ರಕರಣದಲ್ಲಿ ಆರೋಪಿತನ ಪತ್ತೆ ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದ ಅಧಿಕಾರಿಗಳಾದ   ಬಿ. ದೇವಾನಂದ,     ಪ್ರವೀಣ್‌ ಕುಮಾರ,   ಶ್ರೀಪತಿ ಗಿನ್ನಿ,  ಮಂಜುನಾಥ ಕಲ್ಲೇದೇವರು (ಬೆರಳು ಮುದ್ರೆ ಘಟಕ) ಹಾಗೂ ಸಿಬ್ಬಂದಿಯವರಾದ ಮಂಜುನಾಥ ಬಿ.ವಿ, ದೇವರಾಜ್ ಸುರ್ವೆ, ಮಂಜುನಾಥ ಕ್ಯಾತಮ್ಮನವರ, ಹನುಮಂತ ಗೋಪನಾಳ, ಹೇಮಾನಾಯ್ಕ್, ರುದ್ರಸ್ವಾಮಿ, ಸಿದ್ದರಾಜು, ರಾಘವೇಂದ್ರ, ಶಾಂತರಾಜ್, ನಾಗರಾಜ ಕುಂಬಾರ, ಅಖ್ತರ್, ವೀರೇಶ, ಅಡಿವೆಪ್ಪನವರ್ ಮಾರುತಿ ಇವರುಗಳನ್ನೊಳಗೊಂಡ ತಂಡವು ಆರೋಪಿತರನ್ನು ಪತ್ತೆ ಮಾಡಿ ಮಾಲನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸದರಿ ತಂಡಕ್ಕೆ  ಪೆೊಲೀಸ್ ಅಧೀಕ್ಷಕ ಶ್ರೀಮತಿ ಉಮಾ ಪ್ರಶಾಂತ್ ಮತ್ತು  ಹೆಚ್ಚುವರಿ ಪೆೊಲೀಸ್ ಅಧೀಕ್ಷಕ    ರಾಮಗೊಂಡ ಬಿ. ಬಸರಗಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

error: Content is protected !!