ನಿರ್ಲಕ್ಷ್ಯದಿಂದಾಗಿ ಕಾಯಿಲೆಗಳಿಗೆ ತುತ್ತಾಗುತ್ತಿರುವ ಜನರು : ಬಸವರಾಜ್

ನಿರ್ಲಕ್ಷ್ಯದಿಂದಾಗಿ ಕಾಯಿಲೆಗಳಿಗೆ ತುತ್ತಾಗುತ್ತಿರುವ ಜನರು : ಬಸವರಾಜ್

ಮಲೇಬೆನ್ನೂರು, ಅ. 10- ಮುಖದ ಸೌಂದರ್ಯ ಹೆಚ್ಚಿಸುವ ಹಲ್ಲುಗಳನ್ನು ಸ್ವಚ್ಛವಾಗಿ ಮತ್ತು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂದು ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಡಾ. ಕಾವ್ಯ ಹೇಳಿದರು.

ಜಿಗಳಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆಯಲ್ಲಿ ಮಲೇಬೆನ್ನೂರು ಲಯನ್ಸ್ ಕ್ಲಬ್ ಮತ್ತು ದಾವಣಗೆರೆಯ ಬಾಪೂಜಿ ದಂತ ವೈದ್ಯ ಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಲ್ಲಿನ ಜೊತೆಗೆ ದವಡೆ ಕೂಡಾ ಅಷ್ಟೇ ಮುಖ್ಯವಾಗಿದ್ದು, ಗುಟ್ಕಾ, ತಂಬಾಕು ಸೇರಿದಂತೆ ಇತ್ಯಾದಿಗಳನ್ನು ದುಶ್ಚಟಗಳನ್ನು ತಿಂದಾಗ ಬಾಯಿಯನ್ನು ನೀರಿನಿಂದ ಚೆನ್ನಾಗಿ ಮುಕ್ಕಳಿಸಿ ಎಂದು ತಿಳಿಸಿದ ಡಾ. ಕಾವ್ಯ ಅವರು, ಹಲ್ಲನ್ನು ಬ್ರಶ್‌ನಿಂದ ಯಾವ ರೀತಿ ಉಜ್ಜಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.

ಡಾ. ಮಹಾಲಕ್ಷ್ಮಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಜೊತೆಗೆ ಹಲ್ಲುಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಮಕ್ಕಳು ಈಗಿನಿಂದಲೇ ದಿನಕ್ಕೆ 2 ಬಾರಿ  ಬ್ರಷ್ ಮಾಡಿ ಹಲ್ಲು ಹಾಗೂ ಬಾಯಿಯನ್ನು ಚೆನ್ನಾಗಿ ಇಟ್ಟುಕೊಳ್ಳಿ ಎಂದರು.

ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಲಯನ್ಸ್ ಮಾಜಿ ಗೌರ್ನರ್ ಡಾ. ಟಿ. ಬಸವರಾಜ್ ಮಾತನಾಡಿ, ಇತ್ತೀಚೆಗೆ ಜನರು ನಿರ್ಲಕ್ಷ್ಯದಿಂದಾಗಿ ಕಾಯಿಲೆಗಳಿಗೆ ಹೆಚ್ಚು  ತುತ್ತಾಗುತ್ತಿದ್ದು, ಈ ಬಗ್ಗೆ ಪ್ರತಿಯೊಬ್ಬರೂ ಜಾಗ್ರತೆ ವಹಿಸಿ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಎಂದು ಕರೆ ನೀಡಿದರು.

ಡಿಸಿಸಿ ಬ್ಯಾಂಕಿನ ಮಾಜಿ ಉಪಾಧ್ಯಕ್ಷ ಜಿ. ಆನಂದಪ್ಪ ಮಾತನಾಡಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಚಿಟ್ಟಕ್ಕಿ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು.

ಎಸ್‌ಡಿಎಂಸಿ ಅಧ್ಯಕ್ಷ ಬಿ. ಪ್ರಭಾಕರ್, ಲಯನ್ಸ್ ಕ್ಲಬ್ ಕಾರ್ಯದರ್ಶಿ ಸಿರಿಗೆರೆ ಸಿದ್ದಪ್ಪ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರಾದ ಓ.ಜಿ. ರುದ್ರಗೌಡ್ರು, ಎನ್.ಜಿ. ಶಿವಾಜಿ ಪಾಟೀಲ್, ಎನ್. ಶಿವನಗೌಡ್ರು, ಗೌಡ್ರ ಬಸವರಾಜಪ್ಪ, ಲಯನ್ಸ್ ಸದಸ್ಯ ಕೆ.ಹೆಚ್. ಚನ್ನಬಸವಣ್ಣ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಓ.ಜಿ. ರುದ್ರಗೌಡ್ರು, ಎನ್.ಜಿ. ಶಿವಾಜಿ ಪಾಟೀಲ್, ಎನ್. ಶಿವನಗೌಡ್ರು, ಗೌಡ್ರ ಬಸವರಾಜಪ್ಪ, ಲಯನ್ಸ್ ಸದಸ್ಯ ಕೆ.ಹೆಚ್. ಚನ್ನಬಸವಣ್ಣ, ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಜಿ.ಪಿ. ಹನುಮಗೌಡ, ಜಿ.ಆರ್. ಚಂದ್ರಪ್ಪ, ಗ್ರಾ.ಪಂ. ಸದಸ್ಯ ಡಿ.ಎಂ. ಹರೀಶ್, ಪತ್ರಕರ್ತ ಪ್ರಕಾಶ್, ಎಸ್‌ಡಿಎಂಸಿ ಸದಸ್ಯರಾದ ವಿಜಯ ಭಾಸ್ಕರ್, ತೆಲಗಿ ನಾಗರಾಜ್, ಶ್ರೀಮತಿ ಸುನೀತಾ ನಾಗರಾಜ್, ಶಾಲಾ ಮುಖ್ಯ ಶಿಕ್ಷಕ ನಾಗೇಶ್, ಶಿಕ್ಷಕರಾದ ಲೋಕೇಶ್, ಶ್ರೀನಿವಾಸ್‌ ರೆಡ್ಡಿ, ಕರಿಬಸಮ್ಮ, ಜಯಶ್ರೀ, ಬಾಲ ಕೇಂದ್ರದ ಸಂಗೀತ, ಸುಮಾ ಮತ್ತು ಇತರರು ಭಾಗವಹಿಸಿದ್ದರು.

error: Content is protected !!