ಜಗಳೂರು ತಾ.ನಲ್ಲಿ 5 ಕಡೆ ವಿದ್ಯುತ್ ಉಪಕೇಂದ್ರಗಳಿಗೆ ಪ್ರಸ್ತಾವನೆ

ಜಗಳೂರು ತಾ.ನಲ್ಲಿ 5 ಕಡೆ ವಿದ್ಯುತ್ ಉಪಕೇಂದ್ರಗಳಿಗೆ ಪ್ರಸ್ತಾವನೆ

ಜಗಳೂರು, ಅ. 9- ರೈತರ ಅನುಕೂಲಕ್ಕಾಗಿ ತಾಲ್ಲೂಕಿನ 5 ಕಡೆ ವಿದ್ಯುತ್ ಉಪಕೇಂದ್ರಗಳನ್ನು ತೆರೆಯಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ಬಯಲು ರಂಗಮಂದಿರದಲ್ಲಿ ಬೆಸ್ಕಾಂ ಇಲಾಖೆ ನೂತನ  ಸ್ಥಳಾಂತರ ಕಟ್ಟ ಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್  ವೃತ್ತದಲ್ಲಿ ಇರುವ ಬೆಸ್ಕಾಂ‌ ಇಲಾಖೆಯ ಹಳೇ ಕಟ್ಟಡ ತೆರವುಗೊಳಿಸಿ 1 ಕೋಟಿ  ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ. ತಾತ್ಕಾಲಿಕವಾಗಿ 3.5 ಕೋಟಿ ರೂ. ವೆಚ್ಚದ ಸುಸಜ್ಜಿತ ಬಯಲು ರಂಗಮಂದಿರದ ನೆಲಮಾಳಿಗೆಗೆ ಸ್ಥಳಾಂತರಿಸಲಾಗಿದೆ ಎಂದರು.

ದಿನದ 24 ಗಂಟೆಗಳ ಕಾಲ ಚಳಿ, ಗಾಳಿ, ಮಳೆ ಲೆಕ್ಕಿಸದೆ ಕಂಬದ ಮೇಲೆ ನಿಂತು ಜೀವನ್ಮರಣದ ಮಧ್ಯೆ ಕೆಲಸ ಮಾಡುವ  ಬೆಸ್ಕಾಂ ಇಲಾಖೆಯ ನೌಕರರ ಸೇವೆ ಶ್ಲ್ಯಾಘನೀಯ ಎಂದರು. ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳನ್ನು ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿರ್ದೇಶನದಂತೆ ಖಾಸಗಿ ಒಡೆತನದ ಬಾಡಿಗೆ ಕಟ್ಟಡಗಳ ಅನಗತ್ಯ ವ್ಯಯಕ್ಕೆ ಕಡಿವಾಣ ಹಾಕಿ, ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಕೈಜೋಡಿಸಲಾಗುವುದು. ಆದ್ದರಿಂದ ಪಟ್ಟಣದಲ್ಲಿನ ಖಾಲಿ ಇರುವ  ಪಟ್ಟಣ ಪಂಚಾಯಿತಿ ಕಾರ್ಯಾಲಯ ಸೇರಿದಂತೆ ಸರ್ಕಾರಿ ಕಟ್ಟಡಗಳನ್ನು ಸದುಪಯೋಗ ಪಡೆದುಕೊಳ್ಳ ಲಾಗುವುದು ಎಂದು ಶಾಸಕರು ತಿಳಿಸಿದರು.

ಬರ ಛಾಯೆಗೆ ಸಿಲುಕಿ‌ ನಲುಗುತ್ತಿರುವ ರೈತರ ಪರಿಸ್ಥಿತಿ  ಚಿಂತಾಜನಕವಾಗಿದೆ. ಸೆಪ್ಟೆಂ ಬರ್ ಅಂತ್ಯಕ್ಕೆ ತಾಲ್ಲೂಕಿನಲ್ಲಿ ಪೈರುಗಳು ಫಸಲಿನ ಹಂತಕ್ಕೆ ತಲುಪಬೇಕಿತ್ತು. ಆದರೆ ಮುಂಗಾರು ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿ ಜಮೀನುಗಳು ಬರಿದಾಗಿ ರೈತನ ಕಣ್ಣಂಚಲ್ಲಿ ನೀರು ತುಂಬಿವೆ ಎಂದರು.

ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ನೀರಾವರಿ ಮೂಲಗಳಿಲ್ಲದೆ ಬೋರ್ ವೆಲ್ ಗಳನ್ನೇ ಅವಲಂಬಿಸಿ ರೈತರು ಅಡಿಕೆ ಹಾಗೂ ತೋಟಗಾರಿಕೆ ಬೆಳೆಗಳಿಗೆ ಮುಂದಾಗಿದ್ದಾರೆ.  ವಿದ್ಯುತ್ ಲೋಡ್ ಶೆಡ್ಡಿಂಗ್ ನಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬೆಸ್ಕಾಂ‌ ಇಲಾಖೆಯವರು ರೈತರೊಂದಿಗೆ ಸೌಜನ್ಯದಿಂದ ವರ್ತಿಸುತ್ತಾ ಸಮರ್ಪಕ ವಿದ್ಯುತ್ ಪೂರೈಸಬೇಕು. ರಾಜ್ಯದಲ್ಲಿಯೇ ವಿದ್ಯುತ್ ಸಮಸ್ಯೆಯಿದ್ದು ರೈತರೂ ಕೂಡ ಇಲಾಖೆಯೊಂದಿಗೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಬೆಸ್ಕಾಂ ಇಲಾಖೆ ಸಹಾಯಕ ಅಭಿಯಂತರರಾದ ಸುಧಾಮಣಿ ಮಾತ ನಾಡಿ, ನಮ್ಮ ಇಲಾಖೆಯ ಸಿಬ್ಬಂದಿಗಳು ಮುಂಚೂಣಿಯಲ್ಲಿರುವ ಸೈನಿಕರಂತೆ ಕೆಲಸ ಮಾಡುತ್ತಾರೆ. ಕೆಲ ತುರ್ತು ಪರಿಸ್ಥಿತಿಗಳಲ್ಲಿ ಕಂಬಗಳ ಮೇಲೆ  ಕೆಲಸನಿರತ ವೇಳೆ ಸಿಬ್ಬಂದಿಗಳು ಫೋನ್ ಕರೆ ಸ್ವೀಕರಿಸಿಲ್ಲ ಎಂದು ದೂರದೆ, ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಮಾರಂಭದಲ್ಲಿ ಬ್ಲಾಕ್‌‌ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಸಮಾಜ ಕಲ್ಯಾಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಪಿಎಸ್‌ಐ ಸಾಗರ್, ಪ.ಪಂ ಸದಸ್ಯ ರಮೇಶ್ ರೆಡ್ಡಿ, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಪ್ರಕಾಶ್ ರೆಡ್ಡಿ, ಸಿ.ಲಕ್ಷ್ಮಣ, ಎ. ವೆಂಕಟೇಶ್, ಓಬಣ್ಣ, ಸುಭಾಷ್, ಇಕ್ಬಾಲ್ ಅಹಮ್ಮದ್, ಬೆಸ್ಕಾಂ ಇಲಾಖೆ‌ ನಿವೃತ್ತ ನೌಕರ ಮಹಬೂಬ್ ಸಾಬ್, ಕುಮಾರನಾಯ್ಕ, ಬೆಸ್ಕಾಂ ಇಲಾಖೆಯ ಲೋಕೇಶ್, ಲಕ್ಷ್ಮಿ ನಾರಾಯಣ್ ಸೇರಿದಂತೆ ಇದ್ದರು.

error: Content is protected !!