ಗಾಂಧೀಜಿ ದೇಶದ ಸ್ವಾತಂತ್ರ್ಯ ಪ್ರಜ್ಞೆ

ಗಾಂಧೀಜಿ ದೇಶದ ಸ್ವಾತಂತ್ರ್ಯ ಪ್ರಜ್ಞೆ

ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜುನಾಥ ರಂಗರಾಜು

ದಾವಣಗೆರೆ, ಅ. 5- ಗಾಂಧೀಜಿ ನಮ್ಮ ದೇಶದ ಸ್ವಾತಂತ್ರ್ಯ ಪ್ರಜ್ಞೆಯಾದರೆ, ಲಾಲ್ ಬಹದ್ದೂರ್ ಶಾಸ್ತ್ರಿಗಳು ಈ ದೇಶದ ಏಳಿಗೆಯ ಪ್ರಜ್ಞೆಯಾಗಿದ್ದರು ಎಂದು ಮಂಜುನಾಥ ರಂಗರಾಜು ತಿಳಿಸಿದರು.

ಅವರು ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಿದ್ದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಪ್ರಾಚಾರ್ಯರಾದ ಶ್ರೀಮತಿ ಜೆ.ಎಸ್. ವನಿತಾ ಮಾತನಾಡಿ, ದಂತ ಕಥೆಗಳು ಎಂದೂ ಸಾಯುವುದಿಲ್ಲ, ಎಂದೆಂದಿಗೂ ಜನಮಾನಸದಲ್ಲಿ ಜೀವಿಸುತ್ತಿರುತ್ತಾರೆ ಎಂದು ಗಾಂಧೀಜಿ ಅವರ ಕುರಿತು ಹೇಳಿದರು. ಸಂಗೀತ ಶಿಕ್ಷಕ ಚೇತನ್ ಅವರು ಭಜನೆ ಹಾಡಿದರು.  ಪ್ರಭುಶಂಕರ್ ಪ್ರಾರ್ಥಿಸಿದರು. ಶಾಲೆಯ ಸಮಾಜ ಶಿಕ್ಷಕ ಶ್ರೀಶರ್ಮಾ  ಗಾಂಧೀಜಿಯವರ ಹಾಗೂ ಶಾಸ್ತ್ರೀಜಿಯವರ ಕೆಲವು ವಿಚಾರ ಗಳನ್ನು ಹೇಳಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸಹ ಹಾಜರಾಗಿದ್ದರು.

error: Content is protected !!