ಹರಿಹರದಲ್ಲಿ ಬಡವರಿಗೆ ಮನೆ ನಿರ್ಮಿಸಲು ಕರುನಾಡ ಕದಂಬ ರಕ್ಷಣಾ ವೇದಿಕೆ ಮನವಿ

ಹರಿಹರದಲ್ಲಿ ಬಡವರಿಗೆ ಮನೆ ನಿರ್ಮಿಸಲು ಕರುನಾಡ ಕದಂಬ ರಕ್ಷಣಾ ವೇದಿಕೆ ಮನವಿ

ಹರಿಹರ, ಅ. 8- ನಗರದಲ್ಲಿ ಕನ್ನಡ ನಾಡಿನ ಪ್ರಥಮ ರಾಜ ಮಯೂರ ವರ್ಮನ ಪ್ರತಿಮೆ, ಕನ್ನಡ ಭವನ ನಿರ್ಮಾಣ, ನಗರ ನಿವಾಸಿಗಳಿಗೆ ಕಳೆದ 25 ವರ್ಷಗಳಿಂದ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಾಣ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರುನಾಡ ಕದಂಬ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರಸಭೆ ಅಧ್ಯಕ್ಷರು ಮತ್ತು ಆಯುಕ್ತರಿಗೆ  ಮನವಿ ಸಲ್ಲಿಸಿದರು.

ಹೊರ ಗುತ್ತಿಗೆ ಆಧಾರದ ಮೇಲೆ ನೂರು ಕಾರ್ಮಿಕರನ್ನು ನೇಮಿಸದಿದ್ದರೆ ಇಲಾಖೆ ಮುಂದೆ ಮೌನ ಪ್ರತಿಭಟನೆ ನಡೆಸಲಾಗುವುದು. ಹರಿಹರದ ಸಮಗ್ರ ಮಾಹಿತಿಯುಳ್ಳ ನಾಮಫಲಕವನ್ನು ನಗರದ ನಾಲ್ಕೂ ದಿಕ್ಕುಗಳಲ್ಲಿ ಅಳವಡಿಸಬೇಕು. ಒತ್ತುವರಿ ಜಾಗವನ್ನು ನಗರಸಭೆ ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು. ನಗರಸಭೆ ವತಿಯಿಂದ ಶೀಘ್ರವೇ ಶೌಚಾಲಯ ನಿರ್ಮಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಾಗರಾಜ್ ಸಾರಥಿ, ಮಹಮದ್, ಪರಶುರಾಮ್, ಮಾರುತಿ, ತರುಣ್, ಕಿರಣ್ ವಿ. ನಾಯಕ್, ತಾಲ್ಲೂಕು ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಜಯ್, ಮರಿಯಜ್ಜ, ಗಣೇಶ್ ಮತ್ತಿತರರು ಹಾಜರಿದ್ದರು.

error: Content is protected !!