ಗಾಂಧೀಜಿ ತತ್ವ ಆದರ್ಶ ಮೈಗೂಡಿಸಿಕೊಳ್ಳಲು ಕರೆ

ಗಾಂಧೀಜಿ ತತ್ವ ಆದರ್ಶ ಮೈಗೂಡಿಸಿಕೊಳ್ಳಲು ಕರೆ

ದಾವಣಗೆರೆ,ಅ.8- ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ   154 ನೇ ಗಾಂಧೀಜಿ ಜಯಂತಿ ಹಾಗೂ 199 ನೇ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಆಚರಿಸಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೊ. ಮಂಜಣ್ಣನವರು,   ಗಾಂಧೀಜಿಯವರ ಸರಳ ಜೀವನ, ಪ್ರಾಮಾಣಿಕತೆ,    ಸ್ವಚ್ಛತೆ ಮತ್ತು ನೈರ್ಮಲತೆಯ  ಬಗ್ಗೆ ತಿಳಿಸಿ, ಮಹಾತ್ಮರ  ಆದರ್ಶ ತತ್ವಗಳನ್ನು ಮೈಗೂಡಿಸಿಕೊಳ್ಳುವಂತೆ ತಿಳಿಸಿದರು. 

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿಯವರ ಪಾತ್ರದ ಕುರಿತು ಕಾಲೇಜಿನ ರೇಂಜರ್ ಲೀಡರ್  ಡಾ.ಸಿದ್ದಲಿಂಗಯ್ಯ ಬಿ.ಜೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾಲೇಜಿನ ಎಲ್ಲಾ ರೇಂಜರ್ ವಿದ್ಯಾರ್ಥಿನಿಯರು ಸರ್ವಧರ್ಮ ಪ್ರಾರ್ಥನೆ ಮಾಡಿದರು. ಸಾಕಮ್ಮ ನಿರೂಪಿಸಿದರು. ಕಾಲೇಜಿನ ಎನ್ಎಸ್ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಮಹಮ್ಮದ್ ಆಲಿ, ಸುನೀತಾ  ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಒಂದು ಗಂಟೆ ಕಾಲೇಜಿನ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಶ್ರಮದಾನ ಮಾಡಲಾಯಿತು. ಡಾ. ಕಾವ್ಯಶ್ರೀ,  ಡಾ ಪೂರ್ಣಿಮ, ಡಾ. ಭೀಮಣ್ಣ, ಡಾ. ಕರಿಬಸಪ್ಪ, ಚಮನ್ ಸಾಬ್ ಇಟಗಿ,  ರಾಮಚಂದ್ರಪ್ಪ,  ಶೇಷಪ್ಪ, ಡಾ. ಶಿವರಾಜ್,  ಶ್ರೀಮತಿ ಅನುರಾಧ ಇತರರಿದ್ದರು.

error: Content is protected !!