ರಾಣೇಬೆನ್ನೂರು ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಅರುಣಕುಮಾರ ಪೂಜಾರ
ರಾಣೇಬೆನ್ನೂರು, ಅ.6- ನಮ್ಮ ದೇಶದ ಧರ್ಮ, ಆಚಾರ-ವಿಚಾರಗಳು ಹಾಗೂ ಸಂಸ್ಕೃತಿ ಉಳಿಯಬೇಕಾದರೆ, ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ಇಲ್ಲಿಯ ಬಸವನಗುಡಿ ನಗರದ ಶ್ರೀ ಪಾಂಡುರಂಗ ರುಕುಮಾಯಿ ಮಂದಿರದ ಸಭಾಭವನದಲ್ಲಿ ಶುಕ್ರವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮಾರುತಿ ನಗರದ ವಲಯದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮನೆಯೇ ಮೊದಲ ಪಾಠಶಾಲೆಯಾಗಿ ದ್ದು, ತಾಯಂದಿರಿಂದ ನಮ್ಮ ದೇಶದ ಧರ್ಮದ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಕಾರ್ಯವಾಗಬೇಕು. ಇದರಿಂದಾಗಿ ಧರ್ಮದ ತಳಹದಿಯಲ್ಲಿ ನಮ್ಮ ಮುಂದಿನ ಪೀಳಿಗೆ ಜೀವನ ಸಾಗಿಸುವಂತಾಗುತ್ತದೆ ಎಂದರು.
ಸಂಘ, ಸಂಸ್ಥೆಗಳು ಮಹಿಳೆಯರ ಆರ್ಥಿ ಕಾಭಿವೃದ್ಧಿಗೆ ಪೂರಕವಾಗಿದೆ. ಇದರ ಜೊತೆಗೆ ಮಹಿಳೆಯರು ಏಳಿಗೆಯ ಜೊತೆಗೆ ನಮ್ಮ ದೇಶದ ಸಂಸ್ಕೃತಿ ಬಿಂಬಿಸುವ ಕೆಲಸವನ್ನು ಧರ್ಮಸ್ಥಳ ಸಂಘ ಮಾಡುತ್ತಿರುವುದು ಶ್ಲ್ಯಾಘನೀಯವಾಗಿದೆ ಎಂದರು.
ನಗರಸಭೆ ಸದಸ್ಯ ಪ್ರಕಾಶ್ ಬುರಡಿಕಟ್ಟಿ ಮಾತನಾಡಿ, ಮಹಿಳೆ ಮನೆಗೆ ಮಾತ್ರ ಸೀಮಿತವಲ್ಲ, ಸಮಾಜದ ಎಲ್ಲಾ ವರ್ಗಗಳಲ್ಲಿ ಮಹಿಳೆಯರು ತಮ್ಮ ಛಾಪು ಮೂಡಿಸಬಹುದೆಂದು ಸಹಕಾರಿ ಸಂಘಗಳು ತೋರಿಸಿ ಕೊಟ್ಟಿವೆ ಎಂದರು.
ಶಹರ ಠಾಣೆ ಪಿಎಸ್‍ಐ ಗಡೆಪ್ಪ ಗುಂಜಟಗಿ ಮಾತನಾಡಿ, ಶೈಕ್ಣಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದ ಲು ಸಂಘ-ಸಂಸ್ಥೆಗಳು ಸಹಕಾರಿಯಾಗಲಿವೆ. ಮಹಿಳೆಯರು ತಮ್ಮ ಮಕ್ಕಳಿಗೆ ನಮ್ಮ ದೇಶದ ಸಂಸ್ಕೃತಿ ಹಾಗೂ ಇತಿಹಾಸ ತಿಳಿಸುವ ಕಾರ್ಯ ಮಾಡಬೇಕು, ಸಂಸ್ಕೃತಿ ಹಾಗೂ ಧಾರ್ಮಿಕತೆ ಯನ್ನು ಮಕ್ಕಳಲ್ಲಿ ಬೆಳೆಸುವ ಕಾರ್ಯ ಮಾಡಿ ದಾಗ ಮಾತ್ರ, ಸಮಾಜದಲ್ಲಿ ಶಾಂತಿ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದರು.
ಶ್ರೀ ಬಸವಶ್ರೀ ಗ್ರಾಮೀಣ ಸಂಘದ ಅಧ್ಯಕ್ಷೆ ಭಾರತಿ ಜಂಬಗಿ, ಸಂಸ್ಥೆ ಯೋಜನಾ ಧಿಕಾರಿ ಮಂಜುನಾಥ ಗೌಡ, ಯೋಗ ಶಿಕ್ಷಕ ಪಾಂಡುರಂಗ ಪೂಜಾರಿ ಮಾತನಾಡಿದರು,
ಸ್ಥಳೀಯ ಹಿರೇಮಠದ ಶನೈಶ್ಚರ ಮಂದಿರದ ಶ್ರೀ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸ್ವಾಭಿಮಾನಿ ಕರವೇ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ಶಶಿಕಲಾ ಗೌಡಶಿವಣ್ಣನವರ, ಮಂಜುನಾಥ ಹೊಸಪೇಟೆ, ವೀರೇಶ ಹೆದ್ದೇರಿ, ಸಂಯೋಜಕಿ ಲಕ್ಷ್ಮಿ ವೆಂಕಟೇಶ, ರಮೇಶ, ಸೇವಾ ಪ್ರತಿನಿಧಿ ತಾರಾ ಹಿರೇಮಠ, ಸಮನ್ವಯ ಅಧಿಕಾರಿ ಶೋಭಾ, ಉಮಾ, ಉಮಾ ಗೌಡಶಿವಣ್ಣನವರ, ಶಿವಲೀಲಾ, ಭೂಮಿಕಾ, ವೀಣಮ್ಮ ಮತ್ತಿತರರು ಉಪಸ್ಥಿತರಿದ್ದರು.