ಕರಾಟೆ ಸ್ಪರ್ಧೆಯಲ್ಲಿ ಪೃಥ್ವಿಗೆ ಪ್ರಥಮ ಸ್ಥಾನ

ಕರಾಟೆ ಸ್ಪರ್ಧೆಯಲ್ಲಿ ಪೃಥ್ವಿಗೆ ಪ್ರಥಮ ಸ್ಥಾನ

ದಾವಣಗೆರೆ, ಅ.6 – ಗೋಲ್ಡನ್ ಕರಾಟೆ ಸ್ಫೋರ್ಟ್ಸ್ ಅಸೋಸಿಯೇಷನ್ (ಧಾರವಾಡ) ಇವರ ಆಶ್ರಯದಲ್ಲಿ ಗದಗ ನಗರದಲ್ಲಿ ನಡೆದ ವಿಭಾಗ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ (ಕಾಟ ಮತ್ತು ಕಮಿಟ್ ವಿಭಾಗ) ದಾವಣಗೆರೆ ಹಳೆಪೇಟೆಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇಯ ತರಗತಿ ವಿದ್ಯಾರ್ಥಿ ಪೃಥ್ವಿ ಆರ್. ಪ್ರಥಮ ಬಹುಮಾನ ಪಡೆದು ಶತಮಾನದ ಶಾಲೆಗೆ ಕೀರ್ತಿ ತಂದಿದ್ದಾರೆ. 

ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕಣ್ಣ ಮಾಗೋಡ್, ಇಂಗ್ಲಿಷ್ ಶಿಕ್ಷಕಿ ನಮಿತಾ ಎಂ.ಎನ್, ಜಿಲ್ಲಾ ಶಾಲಾಭಿವೃದ್ದಿ ಮತ್ತು ಉಸ್ತುವಾರಿ ಸಮಿತಿಗಳ ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ರಮೇಶ್ ಸಿ. ದಾಸರ್ ಅವರು ಪಾರಿತೋಷಕ ಪದಕ ಪ್ರಶಸ್ತಿ ಪತ್ರ ನೀಡಿ, ಅಭಿನಂದನೆ ಸಲ್ಲಿಸಿದರು.  

ದೈಹಿಕ ಶಿಕ್ಷಕಿ ಸುಜಾತ, ಶಿಕ್ಷಕಿಯರಾದ ಕಲ್ಪನ, ಸಂಪತ್ ಕುಮಾರಿ, ವಿಜಯಕುಮಾರಿ, ಜಯಶ್ರೀ, ಎಸ್.ಡಿ.ಎಂ.ಸಿ. ಸದಸ್ಯ ರಂಗನಾಥ ಸಿ. ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!