ದಾವಣಗೆರೆ, ಅ. 6- ಸರ್ಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ, ದಾವಣಗೆರೆ ಹಾಗೂ ಭಾರ ತೀಯ ರೆಡ್ ಕ್ರಾಸ್ ಸಂಸ್ಥೆ, ದಾವಣಗೆರೆ ಸಹಯೋಗ ದಲ್ಲಿ ನಗರದ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪ್ರಸಿದ್ಧ ರಾಷ್ಟ್ರೀಯ ತರಬೇತುದಾರ ಡಾ. ಕುಮಾರ್ ವಿ.ಎಲ್.ಎಸ್ ರವರು ಪ್ರಥಮ ಚಿಕಿತ್ಸೆ ಕುರಿತು ಆಸ್ಪತ್ರೆಯ ಸಿಬ್ಬಂದಿ ವರ್ಗ ದವರಿಗೆ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ ಕುರಿತು ತರಬೇತಿ ನೀಡಿದರು. ಮಹಿಳೆ ಯರ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಎಸ್.ಪಿ. ಮಧು, ಹಿರಿಯ ತಜ್ಞ ಡಾ.ಬಸವರಾಜ್, ಡಾ. ಭಾರತಿ, ಡಾ. ಸುಧಾ ಪಾಟೀಲ್, ಡಾ.ಸಂಜಯ್, ಡಾ. ಪ್ರವೀಣ, ಡಾ. ಮಹೇಶ್ ಹಾಗೂ ಸಿಬ್ಬಂದಿಗಳು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಯೋಜಕ ಎನ್.ಜಿ. ಶಿವಕುಮಾರ್ ಹಾಗು ಇತರರು ಇದ್ದರು.