ಹರಪನಹಳ್ಳಿ, ಅ.6- ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ವತಿಯಿಂದ ಬರುವ ನವೆಂಬರ್ 3ರಂದು ದೆಹಲಿ ಚಲೋ ನಿಮಿತ್ತ ಹರಪನಹಳ್ಳಿಯಲ್ಲಿ ವಿಜಯನಗರ ಜಿಲ್ಲಾ ಘಟಕದವರ ಉಪಸ್ಥಿತಿಯಲ್ಲಿ ನೌಕರರ ಅನೇಕ ಬೇಡಿಕೆಗಳ ಬಗ್ಗೆ ವಾಹನ ಜಾಥಾ ನೆಡಸಲಾಯಿತು.
ಈ ವೇಳೆ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎಂ. ಆಂಜನೇಯ ಮಾತನಾಡಿ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, 7 ನೇ ವೇತನ ಆಯೋಗ ಅನುಷ್ಠಾನ. 18 ತಿಂಗಳು ತುಟ್ಟಿ ಭತ್ಯೆ ಬಾಕಿ ಮಂಜೂರಾತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ನೌಕರರನ್ನು ಜಾಗೃತಿ ಗೊಳಿಸುವ ಕಾರ್ಯಕ್ರಮ ಇದಾಗಿದೆ ಎಂದರು.
ಈ ವೇಳೆ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ನಾಗರಾಜ ಪತ್ತಾರ್, ಬಳ್ಳಾರಿ ಜಿಲ್ಲಾ ಧ್ಯಕ್ಷ ಅಲ್ಲಾಂ ಭಾಷ, ತಾಲ್ಲೂಕು ಗೌರವ ಅಧ್ಯಕ್ಷ ಪಿ.ಬಸವರಾಜ, ತಾಯಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಎಂ.ಕೊಟ್ರಯ್ಯ, ಸಂಘಟನಾ ಕಾರ್ಯದರ್ಶಿ ಮಂಜಪ್ಪ ಪಿ, ಶಿಕ್ಷಕರಾದ ರೇವಣಸಿದ್ದಪ್ಪ, ಎಚ್.ಬಿ. ಚಂದ್ರಪ್ಪ, ಡಿ. ಮಲ್ಲಿಕಾರ್ಜುನ, ಎಚ್.ಪಿ. ಚಂದ್ರಪ್ಪ, ಸಂಗಯ್ಯ, ಅಸ್ಲಾಂ ಬಾಷ, ಅರುಣಕುಮಾರ್, ರಮೇಶ.ಎಚ್, ರೇಣುಕಾ, ಚಂದ್ರಮ್ಮ, ಆನಂದ ಎನ್, ಮಲ್ಲಿ ಕಾರ್ಜುನ ಪಿ, ಆರ್.ಎಸ್. ಮಂಜುನಾಥ, ಮೂರ್ತಿ ನಾಯ್ಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷರಾದ ಲತಾ ಸೇರಿದಂತೆ ಇತರರು ಇದ್ದರು.