ಬಿಡಿಸಿಸಿ ಬ್ಯಾಂಕ್ ಚುನಾವಣೆ ಪರಮೇಶ್ವರನಾಯ್ಕ್‌ ಸ್ಪರ್ಧೆ

ಬಿಡಿಸಿಸಿ ಬ್ಯಾಂಕ್ ಚುನಾವಣೆ ಪರಮೇಶ್ವರನಾಯ್ಕ್‌ ಸ್ಪರ್ಧೆ

ಹೂವಿನಹಡಗಲಿ, ಅ. 6- ಬಳ್ಳಾರಿ-ವಿಜಯನಗರ ಜಿಲ್ಲೆಗಳ ಪ್ರತಿಷ್ಠಿತ ಹಣಕಾಸು ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಳ್ಳಾರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕ ಮಂಡಳಿ ಚುನಾವಣೆಗೆ ಕಳೆದೆರಡು ತಿಂಗಳಿನಿಂದ ಇನ್ನಿಲ್ಲದ ಪೈಪೋಟಿ ಕಂಡು ಬರುತ್ತಿದೆ. 

ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ಇದೇ ದಿನಾಂಕ 15 ರಂದು ನಡೆಯುವ ಈ ಚುನಾವಣೆಗೆ ಎರಡೂ ಜಿಲ್ಲೆಗಳಲ್ಲಿ ಅಷ್ಟೊಂದು ಬಿರುಸು ಕಂಡು ಬರದಿದ್ದರೂ, ಹಡಗಲಿ ತಾಲ್ಲೂಕಿನಿಂದ ತೀವ್ರ ಸ್ಪರ್ಧೆ ಗೋಚರಿಸುತ್ತಿದೆ.

ಬ್ಯಾಂಕಿನ ನಿರ್ದೇಶಕ ಮಂಡಳಿ ಚುನಾವಣೆಯ ಮೇಲೆ ಕಣ್ಣಿಟ್ಟವರೆಲ್ಲರೂ ಮಾಜಿ ಉಪ ಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್ ಹಾಗೂ ಅವರ ಪುತ್ರ ದಿ.ಎಂ.ಪಿ. ರವೀಂದ್ರ ಅವರ ಬೆಂಬಲಿಗರೇ ಆಗಿದ್ದಾರೆ.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಚುನಾಯಿತರಾಗಿರುವ 19 ಪ್ರತಿನಿಧಿಗಳೇ ಮತದಾರರು. ಅದೇ ರೀತಿ ಪತ್ತಿನ ಸಹಕಾರ ಸಂಘಗಳ ಪ್ರತಿನಿಧಿ ಮತದಾರರು ಮತ ಚಲಾಯಿಸಲಿದ್ದಾರೆ.

ಈಗಾಗಲೇ ನಿರ್ದೇಶಕ ಸ್ಥಾನ ಬಯಸಿ ಸಿ.ಮೋಹನ್ ರೆಡ್ಡಿ, ಐ. ಚಿದಾನಂದ್, ಪಿ.ಟಿ. ಪರಮೇಶ್ವರನಾಯ್ಕ, ವಿಜಯ್ ಕುಮಾರ್, ಜೆ. ಮಂಜುನಾಥ್ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

ಈ ಪೈಕಿ ಯಾರು ನಾಮಪತ್ರ ವಾಪಾಸ್ ಪಡೆಯುತ್ತಾರೆಂದು ಕಾದು ನೋಡಬೇಕಿದೆ. ಚುನಾವಣೆ ಪ್ರಕಟವಾಗಿ ದಾಗಿನಿಂದ ಐಗೋಳ್ ಚಿದಾನಂದ ಮತ್ತು ಪಿ.ಟಿ. ಪರಮೇಶ್ವರನಾಯ್ಕ ಅವರ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಕಂಡು ಬರುತ್ತಿದೆ.

ಬಿಡಿಸಿಸಿ  ಬ್ಯಾಂಕ್ ನಿರ್ದೇಶಕರಾದರೆ ಅಧ್ಯಕ್ಷರಾಗುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಈ ಹಿಂದೆ ಹಡಗಲಿ ವಿಎಸ್‌ಎಸ್‌ಎನ್ ನಿಂದ ಪ್ರತಿನಿಧಿಯಾಗಿ ನಿರ್ದೇಶಕರಾಗಿದ್ದ ರವೀಂದ್ರ ಮೂರು ಬಾರಿ ಬಿಡಿಸಿಸಿ ಅಧ್ಯಕ್ಷರಾಗಿದ್ದರು. ಅವರು ಸಹಕಾರ ಮತ್ತು ರಾಜಕೀಯ ರಂಗದಲ್ಲಿದ್ದರು. ರಾಜಕೀಯವಾಗಿ ರವೀಂದ್ರ ಅವರ ಜೊತೆ ವಿರಸ ಹೊಂದಿದ್ದ ಪರಮೇಶ್ವರನಾಯ್ಕ ಅವರು ಇದೀಗ ತಮ್ಮದಾಗಿಸಿಕೊಳ್ಳುವ ನಿಟ್ಟಿನಲ್ಲಿ ಸಫಲರಾಗುವ ಸಾಧ್ಯತೆ ಇರುವುದರಿಂದ ಅವರ ಗೆಲುವು ಸುಲಭವಾಗಿದೆ.

ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ್ ಕೂಡ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗುವ ವಿಶ್ವಾಸದಲ್ಲಿದ್ದಾರೆ. ಕಾರಣ ಅವರ ವಿರುದ್ಧ ಯಾರೂ ನಾಮ ಪತ್ರ ಸಲ್ಲಿಸಿಲ್ಲವಾದ್ದರಿಂದ ಹಾದಿ ಸುಗಮ ವಾಗಿದೆ. ಸಹೋದರ ಎಂ.ಪಿ. ರವೀಂದ್ರ ಅವರಂತೆ ತಾವು ಅಧ್ಯಕ್ಷರಾಗಬೇಕೆಂಬ ಬಯಕೆ ಹೊಂದಿದ್ದಾರೆ.

ಪರಮೇಶ್ವರ ನಾಯ್ಕ್‌ ಬೆಂಬಲಕ್ಕೆ ಕಾಂಗ್ರೆಸ್ ಪಕ್ಷವಿದ್ದರೆ. ವಿಜಯ್ ಕುಮಾರ್ ಬೆಂಬಲಕ್ಕೆ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಸೇರಿದಂತೆ ಬಿಜೆಪಿ ಸಹಕರಿಸುತ್ತಿದೆ. ಚಿದಾನಂದ ಅವರ ವೈಯಕ್ತಿಕ ವರ್ಚಸ್ಸು ಎಷ್ಟರಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದು ಗೊತ್ತಿಲ್ಲ. ಯಾಕೆಂದರೆ ಕಾಂಗ್ರೆಸ್ ಪಕ್ಷದ ಉಚ್ಛಾಟದ ಮುಖಂಡರಾಗಿದ್ದು, ಅಧಿಕೃತವಾಗಿ ಬಿಜೆಪಿ ಸೇರಿಲ್ಲ. ತ್ರಿಕೋನ ಸ್ಪರ್ಧೆ ಇದ್ದು, ಅಕ್ಟೋಬರ್ 16 ರಂದು ಫಲಿತಾಂಶ ಪ್ರಕಟವಾಗಲಿದೆ. 

error: Content is protected !!