ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ನಡೆ ನುಡಿ ಎಲ್ಲರಿಗೂ ಆದರ್ಶನೀಯ: ಸುಮತಿ ಜಯಪ್ಪ

ಗಾಂಧೀಜಿ ಮತ್ತು ಶಾಸ್ತ್ರೀಜಿಯವರ ನಡೆ ನುಡಿ ಎಲ್ಲರಿಗೂ ಆದರ್ಶನೀಯ: ಸುಮತಿ ಜಯಪ್ಪ

ದಾವಣಗೆರೆ, ಅ. 5- ನಗರದ ತರಳಬಾಳು ಜಗದ್ಗುರು  ರೆಸಿಡೆನ್ಷಿಯಲ್ ಸ್ಕೂಲ್‌ನ ಅನುಭವ ಮಂಟಪ ಶಾಲಾ ಸಂಕೀರ್ಣದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಿಸಲಾಯಿತು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷರಾದ ಸುಮತಿ ಜಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ನಡೆ ನುಡಿ ಪ್ರಸ್ತುತ ದಿನ ಗಳಲ್ಲಿ ನಮ್ಮೆಲ್ಲರಿಗೂ ಆದರ್ಶನೀಯವಾ ದದ್ದು. ಗಾಂಧೀಜಿ ಅವರ ಚಿಂತನೆಗಳು ಅತ್ಯಂತ ಸ್ಪಷ್ಟವಾಗಿದ್ದವು. ದೀನ-ದಲಿತರ ಉದ್ಧಾರಕ್ಕಾಗಿ, ಬೆಳಕಿಗಾಗಿ ನಿರಂತರ ಶ್ರಮಿ ಸುತ್ತಿದ್ದರು. ಪ್ರಸ್ತುತ ದಿನಗಳಲ್ಲಿ ಗಾಂಧೀಜಿ ಯವರನ್ನು ನಾವು ಕೆಲವು ರೂಪಕಗಳಿಗೆ ಮಾತ್ರ ಅವರನ್ನು ಸೀಮಿತಗೊಳಿಸಿಕೊಂಡಿ ದ್ದೇವೆ. ಈ ರೀತಿ ನಾವು ನಡೆದುಕೊಳ್ಳದೇ ಅವರ ತತ್ವ, ಚಿಂತನೆಗಳನ್ನು ಪಾಲನೆ ಮಾಡದೆ ಅಧರ್ಮದಿಂದ ನಡೆದುಕೊಳ್ಳು ತ್ತಿರುವುದು ದುರಂತವಾಗಿದೆ. ಆದ್ದರಿಂದ ಇಂದು ನಾವುಗಳು ದೈಹಿಕ ಮತ್ತು ಮಾನಸಿಕ ಸ್ವಚ್ಛತೆಯ ಮೂಲಕ ಮಾನವೀಯತೆಯನ್ನು ಅಳವಡಿಸಿಕೊಳ್ಳಲು ತಿಳಿಸಿದರು.   

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಹೆಚ್.ಎನ್. ಪ್ರದೀಪ್ ಮಾತನಾಡಿ, ಇಂದು ನಾವೆಲ್ಲರೂ ನಮ್ಮ ಸುತ್ತಮುತ್ತಲಿನ ಸಾಮಾಜಿಕ ಪರಿಸರವನ್ನು ಅತ್ಯಂತ ಸ್ವಚ್ಛವಾಗಿ ಇಡುವುದರ ಮೂಲಕ ಸ್ವಚ್ಛ ಭಾರತ ಅಭಿಯಾನವನ್ನು ಶ್ರದ್ಧೆಯಿಂದ ಪಾಲನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಸಿ ಬಿ ಎಸ್ ಇ ಶಾಲೆಯ ಪ್ರಾಚಾರ್ಯ ಕೆ. ಸೋಮಶೇಖರಪ್ಪ, ಪ್ರೌಢಶಾಲಾ ಪ್ರಾಚಾರ್ಯ ಹೆಚ್.ಎಸ್. ರವಿಕುಮಾರ್ ಉಪಸ್ಥಿತರಿದ್ದರು. ಟಿ.ಡಿ. ಗಂಗಾ ಬಹುಮಾನ ವಿತರಿಸಿದರು. ಶ್ರೇಯ ಸಿ. ರಮಣಿ ಸ್ವಾಗ ತಿಸಿದರು. ಬಿ.ಜಿ. ನಿರೀಕ್ಷಾ ವಂದಿಸಿದರು. ಎಂ. ಲಲಿತಾ ಅತಿಥಿಗಳನ್ನು ಪರಿಚಯಿಸಿದರು. ಅನಘ ವಿ. ಉಪಾಧ್ಯಾಯ ನಿರೂಪಿಸಿದರು.

error: Content is protected !!