ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಹೆಚ್ಚು ಅವಕಾಶ

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಹೆಚ್ಚು ಅವಕಾಶ

ಹರಪನಹಳ್ಳಿ: `ಕನ್ನಡ ರತ್ನ’ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕಿ ಎಂ.ಪಿ. ಲತಾ

ಹರಪನಹಳ್ಳಿ, ಅ.4- ದೇಶದಲ್ಲಿಯೇ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆ ಹೆಚ್ಚು ಶ್ರೀಮಂತವಾಗಿದೆ ಎಂದು ಶಾಸಕರಾದ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.

ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ನವಜ್ಯೋತಿ ಸಾಂಸ್ಕೃತಿಕ ಸೇವಾ ಸಂಸ್ಥೆಯಿಂದ ನಿನ್ನೆ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಕನ್ನಡ ಭಾಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ `ಕನ್ನಡ ರತ್ನ’ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಹೆಚ್ಚು ಅವಕಾಶಗಳಿವೆ. ಪಠ್ಯದ ಜೊತೆಗೆ ಕನ್ನಡ ಕಾವ್ಯ, ಕಥೆ, ಕಾದಂಬರಿ ಓದುವ ಹವ್ಯಾಸ ಬೆಳೆಸಿಕೊಳ್ಳಿ. ಪ್ರತಿವರ್ಷ ನವಜ್ಯೋತಿ ಸಾಂಸ್ಕೃತಿಕ ಸಂಸ್ಥೆ `ಕನ್ನಡ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆ ಅರಳಲು ಮಾಡುತ್ತಿರುವ ಕೆಲಸ ಹಾಗೂ ಮಲ್ಲಿಕಾರ್ಜುನ್‌ ದಂಪತಿ ಅನೇಕ ವರ್ಷಗಳಿಂದ ಸಾಹಿತ್ಯ, ಸಂಗೀತ, ಕಲೆ, ನೃತ್ಯ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಮಾಜ ಸೇವೆ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು. 

ಎಸ್.ಯು.ಜೆ.ಎಂ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಹೆಚ್. ಮಲ್ಲಿಕಾರ್ಜುನ್ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಉದ್ಯೋಗ ಪಡೆದು ಸಮಾಜ ಸೇವೆ ಮಾಡಬೇಕು. ಜಗತ್ತಿನಲ್ಲಿಯೇ ಸರಳ ಮತ್ತು ಸುಂದರವಾದ ಭಾಷೆ ಮತ್ತೊಂದಿಲ್ಲ. ವಿದ್ಯಾರ್ಥಿಗಳು ಕನ್ನಡ ಭಾಷೆ ಉಳಿಸಿ, ಬೆಳೆಸುವ ಜವಾಬ್ದಾರಿ ನಿಮ್ಮದಾಗಿದೆ. 

ತಂದೆ-ತಾಯಿ, ಗುರುಗಳಿಗೆ ವಿಧೇಯರಾಗಿ ನಡೆದುಕೊಳ್ಳಬೇಕು. ಪರೀಕ್ಷೆಯಲ್ಲಿ ರಾಂಕ್ ಪಡೆಯುವುದರ ಜೊತೆಗೆ ಮುಖ್ಯವಾಗಿ ಅತ್ಯು ತ್ತಮ ಗುಣಗಳೊಂದಿಗೆ  ಉತ್ತಮ ವ್ಯಕ್ತಿ ಎಂದು ಬದುಕಿನಲ್ಲಿ ರಾಂಕ್  ಪಡೆಯಬೇಕು ಎಂದರು. 

ಪುಷ್ಪಾ ದಿವಾಕರ್, ಪ್ರಾಚಾರ್ಯರಾದ ಕೆ.ಶಶಿಧರ್, ವಕೀಲರ ಸಂಘದ ಅಧ್ಯಕ್ಷ ಮತ್ತಿಹಳ್ಳಿ ಅಜ್ಜಣ್ಣ, ಡಾ. ಸೀಮಾ ಅಧಿಕಾರ್, ಮುಖ್ಯಶಿಕ್ಷಕ ಸುರೇಶ್‌ ಅಂಗಡಿ, ಸಮಾಜ ಸೇವಕರಾದ ಎಚ್.ಟಿ.ವನಜಾಕ್ಷಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. 

ಡಾ. ಎಸ್.ಎನ್. ಮಹೇಶ್, ನಾಗಲಿಂಗಪ್ಪ ಬಣಕಾರ್, ಗುತ್ತಿಗೆದಾರ ಆರ್. ಲೋಕೇಶ್, ವರ್ತಕ ಉತ್ತಮ್ ಚಂದ್ ಜೈನ್, ಮಹಾವೀರ ಭಂಡಾರಿ, ಶಿಕ್ಷಕರಾದ ಶೋಭಾ ಆರ್. ಹುಲ್ಲುಮನಿ, ವಕೀಲರಾದ ಮನೋಜ್ ತಳವಾರ್, ಸಾಯಿ ಮೋಟರ್‌ ಚಂದ್ರು, ಹೆಚ್.ಸಣ್ಣಪ್ಪ ಜೈನ್, ಗುತ್ತಿಗೆದಾರ ಡಿ.ಮಹಮ್ಮದ್ ಯೂಸೂಫ್, ಪುರಸಭಾ ಮಾಜಿ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಬಿ.ಕೆ.ಪ್ರಕಾಶ್, ಪುರಸಭಾ ಸದಸ್ಯರಾದ ಟಿ.ವೆಂಕಟೇಶ್, ಪೈಲ್ವಾನ್ ಗಣೇಶ, ಲಾಠಿ ದಾದಾಪೀರ್, ಆರ್ಯವೈಶ್ಯ ಸಮಾಜದ ಅಧ್ಯಕ್ಷ ಮುದುಗಲ್ ನಾಗರಾಜ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಿದರು. ಸಂಸ್ಥೆಯ ಸಪ್ನ ಮಲ್ಲಿಕಾರ್ಜುನ್‌ ಅಧ್ಯಕ್ಷತೆ ವಹಿಸಿದ್ದರು. 

ಲಿಕ್ವಿಡ್ ತಂಡದ ಚನ್ನವೀರ ಎಂ.ಎಂ. ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಪಿಯುಸಿಯಲ್ಲಿ ರಾಂಕ್ ಪಡೆದ ಕುಶ್‍ನಾಯ್ಕ ಜಿ.ಎಲ್, ಎಂ.ಮಲ್ಲಮ್ಮ, ದಡ್ಡಿ ಕರಿಬಸಮ್ಮ, ಕೆ.ಕೃಷ್ಣ, ಎ.ನಿಸರ್ಗ ಇವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಎಸ್. ಮಕ್ಖೂಲ್ ಬಾಷಾ, ಕೊಟ್ರಸ್ವಾಮಿ, ಗಿರೀಶ್ ಕಾರ್ಯಕ್ರಮ ನಿರ್ವಹಿಸಿದರು.  

error: Content is protected !!