ಮಲೇಬೆನ್ನೂರಿನಲ್ಲಿ `ಪಿಂಚಣಿ’ ದಿನ ಆಚರಣೆ

ಮಲೇಬೆನ್ನೂರಿನಲ್ಲಿ `ಪಿಂಚಣಿ’ ದಿನ ಆಚರಣೆ

ಮಲೇಬೆನ್ನೂರು, ಅ. 4- ಇಲ್ಲಿನ ನಾಡಕಛೇರಿ ವತಿಯಿಂದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ `ಪಿಂಚಣಿ’ ದಿನ ಕಾರ್ಯಕ್ರಮ ಆಚರಿಸಲಾಯಿತು. ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆಗಳಿಗೆ ಸಂಬಂಧಿಸಿದಂತೆ  ಪಿಂಚಣಿದಾರರು ತಮ್ಮ ಕುಂದು-ಕೊರತೆಗಳನ್ನು ನೋಂದಾಯಿಸಲು ಮತ್ತು ಪಿಂಚಣಿ ಕುರಿತಾದ ಮಾಹಿತಿ ಪಡೆಯಲು ಹಾಗೂ ಹಂಚಿಕೊಳ್ಳಲು ಪರಸ್ಪರ ಭೇಟಿಯಾಗುವ ಉದ್ದೇಶದಿಂದ ಕಂದಾಯ ಇಲಾಖೆ ಪ್ರತಿ ತ್ರೈಮಾಸಿಕದಲ್ಲಿ ಒಂದು ಬಾರಿ `ಪಿಂಚಣಿ’ ದಿನವನ್ನು ನಗರ, ಪಟ್ಟಣ ಹಾಗೂ ಗ್ರಾ.ಪಂ. ಮಟ್ಟದಲ್ಲಿ ಆಯೋಜಿಸಲು ತಿಳಿಸಿದೆ ಎಂದು ಉಪ ತಹಶೀಲ್ದಾರ್ ಆರ್. ರವಿ ತಿಳಿಸಿದರು.

ಈ ವೇಳೆ ಫಲಾನುಭವಿಗಳಿಗೆ `ಪಿಂಚಣಿ’ ಆದೇಶ ಪ್ರತಿಗಳನ್ನು ವಿತರಿಸಲಾಯಿತು. ಪುರಸಭೆ ಮುಖ್ಯಾಧಿ ಕಾರಿ ಎ. ಸುರೇಶ್, ಕಂದಾಯ ನಿರೀಕ್ಷಕ ಆನಂದ್, ಗ್ರಾಮ ಲೆಕ್ಕಾಧಿಕಾರಿ ಅಣ್ಣಪ್ಪ, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಷಾ ಅಬ್ರಾರ್, ಬೆಣ್ಣೆಹಳ್ಳಿ ಸಿದ್ದೇಶ್, ದಾದಾಪೀರ್, ನಯಾಜ್, ಸಾಬೀರ್ ಅಲಿ, ಎಂ.ಬಿ. ರುಸ್ತುಂ, ಟಿ. ಹನುಮಂತಪ್ಪ, ಕೆ.ಪಿ. ಗಂಗಾಧರ್, ಬಿ. ಸುರೇಶ್, ಯುಸೂಫ್, ಜಿಗಳೇರ ಹಾಲೇಶಪ್ಪ, ಎ. ಆರೀಫ್ ಅಲಿ, ಓ.ಜಿ. ಕುಮಾರ್ ಮತ್ತು ರೈತ ಮುಖಂಡ ಮುದೇಗೌಡ್ರ ತಿಪ್ಪೇಶ್, ದೇವಸ್ಥಾನ ಕಮಿಟಿಯ ಕೆ.ಜಿ. ಪರಮೇಶ್ವರಪ್ಪ, ಅಂಗವಿಕಲರ ಸಂಘದ ಪೂಜಾರ್ ಗಂಗಾಧರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

error: Content is protected !!