ರೈಲ್ವೆ ನಿಲ್ದಾಣಕ್ಕೆ ಮೆಣಸಿನಾಳ ತಿಮ್ಮನಗೌಡರ ಹೆಸರಿಡಿ

ರೈಲ್ವೆ ನಿಲ್ದಾಣಕ್ಕೆ ಮೆಣಸಿನಾಳ ತಿಮ್ಮನಗೌಡರ ಹೆಸರಿಡಿ

ಶ್ರೀ ನೊಳಂಬ ವೀರಶೈವ ಲಿಂಗಾಯತ ಸಮ್ಮೇಳನದಲ್ಲಿ ಮಾಜಿ ಶಾಸಕ ಪೂಜಾರ  

ರಾಣೇಬೆನ್ನೂರು,ಅ.4-  ನಗರದ ಬಿಎಜಿಎಸ್ಎಸ್ ಕಾಲೇಜಿನಲ್ಲಿ ಶ್ರೀ ನೊಳಂಬ ವೀರಶೈವ ಲಿಂಗಾಯತ ಸಮಾಜದ ಪ್ರತಿಭಾ ಪುರಸ್ಕಾರ ಹಾಗೂ ತಾಲ್ಲೂಕು ಮಟ್ಟದ  ವಾರ್ಷಿಕ ಸಮ್ಮೇಳನ  ನಡೆಯಿತು.

ನೊಳಂಬ ಸಮಾಜದ ರಾಜ್ಯಾಧ್ಯಕ್ಷ  ಎಸ್. ಆರ್. ಪಾಟೀಲ ಸಮ್ಮೇಳನ ಉದ್ಘಾಟಿಸಿ, ಸಮಾಜದ ಏಳಿಗೆಗೆ ಎಲ್ಲರೂ ಕೈ ಜೋಡಿಸಲು ಕರೆ ನೀಡಿದರು.

ಬಿಎಜಿಎಸ್ಎಸ್ ಕಾಲೇಜಿನ ಆಡಳಿತಾಧಿಕಾರಿ ಡಾ. ಆರ್. ಎಂ.ಕುಬೇರಪ್ಪ ಮಾತನಾಡಿ, ಸಮಾಜದ ಸಂಘಟ ನೆಯಿಂದ ಮಾತ್ರ ಏನನ್ನಾದರೂ ಪಡೆಯಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶಾಸಕ ಪ್ರಕಾಶ ಕೋಳಿವಾಡ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಈ ಸಮಾಜದ ವ್ಯಕ್ತಿ ಮೆಣಸಿನಹಾಳ ತಿಮ್ಮನಗೌಡರ ಸಾಹಸಗಳನ್ನು ದೇಶ ಪ್ರೇಮವನ್ನೂ ಮೆಲುಕು ಹಾಕಿದರು. 

ಇನ್ನೊಬ್ಬ ಅತಿಥಿ ಮಾಜಿ ಶಾಸಕ ಅರುಣಕುಮಾರ ಪೂಜಾರಿ ಮಾತನಾಡಿ, ಈ ಸಮಾಜ ಸಣ್ಣದಾಗಿದ್ದರೂ ಅದರ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು. ರಾಣೇಬೆನ್ನೂರು ರೈಲ್ವೆ ನಿಲ್ದಾಣಕ್ಕೆ ಮೆಣಸಿನಾಳ ತಿಮ್ಮನ ಗೌಡರ ಹೆಸರಿಡಲು ಶಾಸಕರಲ್ಲಿ ಮನವಿ ಮಾಡಿದರು.

ನಂದಿಗುಡಿ ಶ್ರೀಗಳಾದ   ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ವೇದಿಕೆಯಲ್ಲಿ ಸಮಾಜದ ಹಂಗಾಮಿ ಅಧ್ಯಕ್ಷ  ಕುಮಾರ ಸ್ವಾಮಿ. ಸಲಹಾ ಸಮಿತಿ ಅಧ್ಯಕ್ಷ  ಎಂ. ಎನ್. ಕೆಂಪಗೌಡ್ರು, ಉಪಾಧ್ಯಕ್ಷ  ಆರ್. ಜೆ. ಪಾಟೀಲ, ಕಾರ್ಯದರ್ಶಿ ಆನಂದ ದೇವರಮನಿ, ಕೇಂದ್ರ ಸಮಿತಿ ಸದಸ್ಯ ಪ್ರಭು ದೊಡ್ಡಮನಿ ಮುದಿಗೌಡ್ರ, ಗೌರವ ಕಾರ್ಯದರ್ಶಿ ಎಸ್. ಬಿ. ಮೂಲೇರ, ಇನ್ನೂ ಹಲವರು ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಅಗಲಿದ ಮಹಾ ಚೇತನರಾದ ವಿ.ಎನ್. ಶಾಂತನವರ, ಶಿವಮೂರ್ತೆಪ್ಪ ಮಡ್ಲೂರ, ಚನ್ನೇಶ ಉಪನ್ಯಾಸಕರು, ಚನ್ನಬಸಪ್ಪ ಕ್ಯಾತನಕೇರಿ ಇವರಿಗೆ ಭಾವಪೂರ್ಣ ಶ್ರದ್ದಾಂಜಲಿ ಅರ್ಪಿಸಲಾಯಿತು.

error: Content is protected !!