ವಿಜೃಂಭಣೆಯಿಂದ ಗಾಂಧಿ ಮೈದಾನದ ಗಣೇಶ ವಿಸರ್ಜನೆ

ವಿಜೃಂಭಣೆಯಿಂದ ಗಾಂಧಿ ಮೈದಾನದ ಗಣೇಶ ವಿಸರ್ಜನೆ

ಹರಿಹರ, ಅ.4- ನಗರದ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ವಿನಾಯಕ ಮಹೋತ್ಸವ ಸಮಿತಿ ವತಿಯಿಂದ ಪ್ರತಿಷ್ಟಾಪನೆ ಮಾಡಿದ್ದ ವಿನಾಯಕನನ್ನು  ಅದ್ಧೂರಿ ಮೆರವಣಿಗೆಯೊಂದಿಗೆ ಇಂದು ವಿಸರ್ಜನೆ ಮಾಡಲಾಯಿತು. 

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮೆರವಣಿಗೆಗೆ ಚಾಲನೆ ನೀಡಿದರು. ನೂತನವಾಗಿ ಮಂಜು ಸೌಂಡ್ ಸಿಸ್ಟಮ್ ನವರು ತರಿಸಿದ್ದ ಟಗರು ಸೌಂಡ್ ಸಿಸ್ಟಮ್, ಡೊಳ್ಳು, ನಂದಿಕೋಲು, ಸಮಾಳ ಸೇರಿದಂತೆ ವಿವಿಧ ಕಲಾ ಮೇಳಗಳು ಮೆರವಣಿಗೆಗೆ ಮೆರಗನ್ನು ನೀಡಿದವು. 

ಡಿ.ಜೆ.ಸೌಂಡ್ ಸಿಸ್ಟಮ್ ತಾಳಕ್ಕೆ ತಕ್ಕಂತೆ ಯುವಕರು, ಮಕ್ಕಳು ಕುಣಿದರು. ನಂದಿಗಾವಿ ಶ್ರೀನಿವಾಸ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ ಡೊಳ್ಳು ಭಾರಿಸುತ್ತ ಯುವಕರನ್ನು ಹುರಿದುಂಬಿಸಿದರು.  

 ಮೆರವಣಿಗೆ ನಗರದ ಗಾಂಧಿ ಮೈದಾನದಿಂದ ಪ್ರಾರಂಭಗೊಂಡು ಹಳೆ ಪಿ.ಬಿ. ರಸ್ತೆ, ಗಾಂಧಿ ವೃತ್ತ, ಮುಖ್ಯ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ದೇವಸ್ಥಾನ ರಸ್ತೆ, ಶಿಬಾರ ವೃತ್ತ, ದರ್ಗಾ ಮುಂಭಾಗದ ರಸ್ತೆ ಮುಖಾಂತರ ಸಂಚರಿಸಿ ತದನಂತರ ರಾಜನಹಳ್ಳಿ ಬಳಿ ಇರುವ ಸೇತುವೆಯಲ್ಲಿ ಗಣೇಶ ವಿಸರ್ಜನೆ ಮಾಡಿದರು. 

ತುಂಗಭದ್ರಾ ನದಿಯ ದಂಡೆಯಲ್ಲಿ ಶ್ರೀ ವಿನಾಯಕನಿಗೆ ಪಂಡಿತ ಚಿದಂಬರ ಜೋಯಿಸರು ಮತ್ತು ಲಕ್ಷ್ಮೀ ಕಾಂತ ಜೋಯಿಸರು ವಿಶೇಷ ಪೂಜೆ, ಅಲಂಕಾರ ಮಹಾಮಂಗಳಾರತಿ ನೆರವೇರಿಸಿದ ನಂತರ ತುಂಗಭದ್ರಾ ನದಿಯಲ್ಲಿ ಗಣೇಶನನ್ನು ವಿಸರ್ಜನೆ ಮಾಡಲಾಯಿತು. 

ಮೆರವಣಿಗೆಯಲ್ಲಿ  ಉತ್ಸವ ಸಮಿತಿಯ ಅಧ್ಯಕ್ಷ ಕೆ.ಜಿ. ಸಿದ್ದೇಶ್, ಕಾಂಗ್ರೆಸ್
ಮುಖಂಡ ಜಿ.ಬಿ. ವಿನಯಕುಮಾರ್,
ತಾ.ಪಂ. ಮಾಜಿ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಎಪಿಎಂಸಿ ಮಾಜಿ
ಅಧ್ಯಕ್ಷ ಮಂಜುನಾಥ್ ಪಾಟೀಲ್, ಕೆ.ಪಿ. ಗಂಗಾಧರ,  ನಗರಸಭೆ ಸದಸ್ಯ ಎಂ. ಎಸ್. ಬಾಬುಲಾಲ್, ದಾದಾಪೀರ್ ಭಾನುವಳ್ಳಿ, ನಜ್ರುಲ್, ವಾಸುದೇವ ಕುಂಬಳೂರು,  ಸಂತೋಷ ನೋಟದರ್, ಮಲ್ಲೇಶ್ ಕಮಲಾಪುರ, ತಿಪ್ಪೇಸ್ವಾಮಿ, ಪ್ರವೀಣ್, ನಿಧಿ ನಾರಾಯಣ, ಅರುಣ್ ಕುಮಾರ್, ಭಾಗಮ್ಮ, ನಾಗಮ್ಮ, ಅರುಣ್‌ ಬೊಂಗಾಳೆ, ಇತರರು ಹಾಜರಿದ್ದರು.

ಸಿಪಿಐ ಸುರೇಶ್ ಸಗರಗಿ, ಪಿಎಸ್ಐ ದೇವಾನಂದ್, ಚಿದಾನಂದ, ಪ್ರಸನ್ನ, ಮಲೇಬೆನ್ನೂರು ಪಿಎಸ್ಐ ಪ್ರಭು ಕೆಳಗಿನ ಮನೆ, ಎಎಸ್ಐ ಶಿವಪ್ಪ,  ಪೊಲೀಸ್ ಸಿಬ್ಬಂದಿಗಳಾದ ಶ್ರೀನಿವಾಸ್ ಡಿ.ಟಿ. ರವಿಕುಮಾರ್, ರಾಘವೇಂದ್ರ, ಮಂಜುನಾಥ್, ಮಂಜುನಾಥ್ ಕೆ, ದೇವರಾಜ್ ಇತರರು ಹಾಜರಿದ್ದರು. 

error: Content is protected !!