ಕರಾಟೆ ಜೊತೆಗೆ ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಗಮನಹರಿಸಿ

ಕರಾಟೆ ಜೊತೆಗೆ ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಗಮನಹರಿಸಿ

ಸುಲ್ತಾನ್ ಪ್ಯಾಲೇಸ್‌ನಲ್ಲಿನ ಕರಾಟೆ ಪಂದ್ಯಾವಳಿಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಕರೆ

 ದಾವಣಗೆರೆ, ಅ.5-    ಮಕ್ಕಳು ಕರಾಟೆ ಮತ್ತಿತರೆ ಕ್ರೀಡೆಗಳನ್ನು ಕಲಿತು ಸದೃಢರಾಗುವುದು ಒಳ್ಳೆಯ ವಿಚಾರ.  

ಇದರ ಜೊತೆ-ಜೊತೆಗೆ  ವಿದ್ಯಾಭ್ಯಾಸದ ಕಡೆಗೂ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಕರೆ ನೀಡಿದರು.

ನಗರದ ಅಲ್ಫತಾ ಕನ್ನಡ ಮತ್ತು ಉರ್ದು ಶಾಲೆ ಸುಲ್ತಾನ್ ಪ್ಯಾಲೇಸ್ ಇಲ್ಲಿ ಆಯೋಜಿಸಲಾಗಿದ್ದ 14ರಿಂದ 17 ವರ್ಷ ವಯೋಮಿತಿಯ ಜಿಲ್ಲಾ ಮಟ್ಟದ ಶಾಲಾ ಕರಾಟೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬುಡೋ ಮಾರ್ಷಲ್ ಆರ್ಟ್ಸ್‌ ಹಾಗೂ ನವಭಾರತ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್ ಅಧಿಕಾರಿಗಳು ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು. ಬಾಲಕರು ಮತ್ತು ಬಾಲಕಿಯರು ಸೇರಿ 43 ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನವನ್ನು ಪಡೆಯುವುದರ ಮೂಲಕ ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

 ಸ್ಪರ್ಧೆಗಳನ್ನು ನಡೆಸಲು ಸುಲ್ತಾನ್ ಪ್ಯಾಲೇಸ್‌ ನಲ್ಲಿ ಸ್ಥಳಾವಕಾಶ  ಕಲ್ಪಿಸಿ ಕೊಟ್ಟು ಮಕ್ಕಳಿಗೆ ಉಚಿತ ಊಟದ ವ್ಯವಸ್ಥೆಯನ್ನು ಅಲ್ಫತಾ ರೆಹಮಾನ್ ಸಾಬ್‌ ಮಾಡಿಕೊಟ್ಟು ಮಕ್ಕಳ ಪ್ರೀತಿಗೆ ಪಾತ್ರರಾದರು. 

ಮುಖ್ಯ ಅತಿಥಿಗಳಾಗಿ  ಶಾಲಾ ಪ್ರಾಂಶುಪಾಲರಾದ ಶ್ರೀಮತಿ ರುಮಿನಾಜ್, ಮುಖ್ಯ ತರಬೇತುದಾರ ಆರೀಫ್ ಖಾನ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎನ್.ಪಿ. ಮಂಜುಳ, ಶಿಕ್ಷಕರ ಸಂಘದ ಕಾರ್ಯದರ್ಶಿ ಸಂತೋಷಕುಮಾರ್, ಟಿ.ಪಿ.ಓ. ಹುಸೇನ್‌‌, ಆಸೀಫ್‌ ಅಲಿ, ಡಿ.ಜಿ, ಸೆನ್ಸಾಯ್ ಕೆ.ಪಿ. ಜೋಶ್, ಎಲ್. ಉಮ್ಮರ್ ಫಾರೂಖ್, ರಾಘವೇಂದ್ರ, ಮೊಹಮ್ಮದ್ ಗೌಸ್, ಅಬ್ದುಲ್ ಇಮ್ರಾನ್, ಡಿ. ಬಾಷಾಸಾಬ್, ಎನ್.ಕೆ. ಹಬೀಬ್, ಕೆ.ಸಿ.ಎಸ್. ಅಸಾದುಲ್ಲಾ, ಮಹಮ್ಮದ್ ಸುಹೇಲ್, ರಿತ್ತಿ ಆಸೀಫ್ ಸೇರಿದಂತೆ   ಕರಾಟೆ ಶಿಕ್ಷಕರು ಹಾಗೂ ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.

error: Content is protected !!