ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆಯಲ್ಲಿ ಮಹಾತ್ಮರ ಜಯಂತಿ ಆಚರಣೆ
ಎಲೆಬೇತೂರು, ಅ. 4- ಇಲ್ಲಿನ ಶ್ರೀ ಕೊಂಡಜ್ಜಿ ಬಸಪ್ಪ ಪ್ರೌಢಶಾಲೆ ಮತ್ತು ತರಳಬಾಳು ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಯುಕ್ತಾಶ್ರಯದಲ್ಲಿ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಂ. ಬಸವರಾಜಪ್ಪ ಮಾತ ನಾಡಿ, ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಸಾವಿರಾರು ಜನ ತನು-ಮನ-ಧನ ಅರ್ಪಿಸಿದ್ದಾರೆ. ಅವರಲ್ಲಿ ರಾಷ್ಟ್ರಪಿತ ಮಹತ್ಮಾ ಗಾಂಧೀಜಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರೀಜಿಯ ವರು ಸದಾ ಸ್ಮರಣೀಯರು. ಅವರ ಬದುಕು-ಬರಹಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಪ್ರಾಥಮಿಕ ಶಾಲೆಯ ಸ್ಥಳೀಯ ಸಲಹಾ ಸಮಿತಿಯ ಅಧ್ಯಕ್ಷ ಹೆಚ್. ಬಸವರಾಜಪ್ಪ ಮಾತನಾಡಿ, ಇನ್ನೊಬ್ಬರಿಗಾಗಿ, ಸಮಾಜಕ್ಕಾಗಿ, ದೇಶಕ್ಕಾಗಿ ಯಾರು ತ್ಯಾಗ ಮಾಡುತ್ತಾರೋ ಅವರು ಸತ್ತೂ ಬದುಕಿರುತ್ತಾರೆ. ಅಂಥವರಲ್ಲಿ ಎಲೆಬೇ ತೂರಿನ ಮಾಳಿಗೇರ ಕುರುವೆತ್ತಪ್ಪ ಮತ್ತು ಮಾಗೋಡರ ಹನುಮಂತಪ್ಪ ಪ್ರಮುಖರು ಎಂದರು.
ಮುಖ್ಯ ಅತಿಥಿಗಳಾದ ಮರುಳ ಸಿದ್ದಪ್ಪ ಜೀವನದಲ್ಲಿ ಬದಲಾವಣೆ ಯಾಗಲು ಈ ಇಬ್ಬರ ವ್ಯಕ್ತಿತ್ವ ರೂಢಿಸಿಕೊಳ್ಳಬೇಕು. ಸತ್ಯಹರಿಶ್ಚಂದ್ರ ನಾಟಕ ಗಾಂಧೀಜಿಯವರ ಬದುಕಿಗೆ ಬದಲಾವಣೆ ತಂದಿತು. ಸತ್ಯ ಪರಮನಿಷ್ಠವಾದುದು. ಸತ್ಯದ ಹಾದಿ ಎಂದೂ ಕಠಿಣ. ಆದರೆ ಅದರ ಫಲ ಮಾತ್ರ ಮಧುರವಾದುದು. ಗಾಂಧೀಜಿಯಂತೆ ತಪ್ಪುಗಳನ್ನು ತಿದ್ದಿಕೊಳ್ಳುವ ಪ್ರಾಮಾಣಿಕತೆಯನ್ನು ರೂಢಿಸಿಕೊಳ್ಳಬೇಕು. ಅವರು ಶಾಂತಿಯಿಂದ ಸ್ವಾತಂತ್ರ್ಯ ತಂದುಕೊಟ್ಟ ಮಾರ್ಗ ವಿನೂತನವಾದುದು. ಶಾಸ್ತ್ರಿ ಅವರ ಪ್ರಾಮಾಣಿಕತೆ ಇಂದಿನ ರಾಜಕಾರಣದಲ್ಲಿ ಕಾಣುವುದು ವಿರಳ. ಅಂದಿನ ಬಡತನ ಇಂದಿಲ್ಲ. ಮಕ್ಕಳು ಹೆಚ್ಚು ಹೆಚ್ಚು ಓದುಬೇಕು ಎಂದರು.
ಮುಖ್ಯ ಅತಿಥಿಗಳಾಗಿದ್ದ ಎಂ ಷಡಕ್ಷರಪ್ಪ, ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಬಿ. ಎಂ. ಶಶಿಕಲಾ, ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ರಾದ ಎಂ.ಬಿ. ಪ್ರೇಮಾ, ವಿದ್ಯಾರ್ಥಿ ಭಾಷಣಕಾರರಾದ ಡಿ. ಎಸ್. ಸುಪ್ರಭೆ, ಚಿನ್ಮಯಿ, ಎಂ. ವಿನುತ, ಅಂಕಿತ ಮತ್ತು ವಿದ್ಯಾ ಮಾತನಾಡಿದರು.
ವೇದಿಕೆಯ ಮೇಲೆ ಕಾರ್ಯ ದರ್ಶಿ ಸ್ಥಳೀಯ ಸಲಹಾ ಸಮಿತಿಯ ಸದಸ್ಯರಾದ ವಿರೂಪಾಕ್ಷಪ್ಪ ಮತ್ತು ರಾಜಪ್ಪ ಉಪಸ್ಥಿತರಿದ್ದರು. ಪುಟಾಣಿ ದೃಷ್ಟಿ `ಗಾಂಧೀಜಿ’ ಕುರಿತು ಮಾತನಾಡಿದರು. ಬಾಲಗೀತೆ ಹಾಡಿದುದು ಮತ್ತು ಶಿಕ್ಷಕಿ ಪಿ.ಎಂ. ಉಷಾ ಗಾಂಧೀಜಿಯವರ ನೆಚ್ಚಿನ ಪ್ರಾರ್ಥನಾ ಗೀತೆ `ರಘುಪತಿ ರಾಘವ ರಾಜಾ ರಾಮ್’ ಹೇಳಿಕೊಟ್ಟದ್ದು ಎಲ್ಲರ ಗಮನ ಸೆಳೆಯಿತು.
ವರ್ಷಿಣಿ ಮತ್ತು ಸಂಗಡಿಗರು ಪ್ರಾರ್ಥಿಸಿದರೆ, ಶಿಕ್ಷಕ ಎಸ್.ಓ. ಷಣ್ಮುಖಪ್ಪ ಸ್ವಾಗತಿಸಿದರು. ಶಿಕ್ಷಕಿ ಎಲ್.ಎಸ್. ವಸಂತ ವಂದಿಸಿದರು. ಜಿ. ಆರ್. ಸುನಿತಾ ಕಾರ್ಯಕ್ರಮ ನಿರ್ವಹಿಸಿದರು.