ದಾವಣಗೆರೆ,ಅ.2- ಶಿಕ್ಷಣ ಇಲಾಖೆ ಹಾಗೂ ಸಪ್ತಗಿರಿ ಪಿಯು ಕಾಲೇಜ್ ಸಂಯುಕ್ತಾಶ್ರಯದಲ್ಲಿ ನಡೆದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿಗಳ ಕ್ರೀಡಾ ಕೂಟದಲ್ಲಿ ನಗರದ ಸಂತಪೌಲರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಾನ್ವೆಂಟ್ನ ಸ್ಥಳೀಯ ವ್ಯವಸ್ಥಾಪಕರಾದ ಸಿಸ್ಟರ್ ಮಾರ್ಜರಿ, ಆಡಳಿತಾಧಿಕಾರಿ ಸಿಸ್ಟರ್ ಅಲ್ಬಿನ, ಪ್ರಾಚಾರ್ಯ ಮೇಘನಾಥ್ ಕೆ.ಟಿ., ದೈಹಿಕ ಶಿಕ್ಷಕ ಸಿದ್ದೇಶ್ ಎ.ಬಿ ಹಾಗು ಬೋಧಕ ವೃಂದದವರು ಅಬಿನಂಧಿಸಿದ್ದಾರೆ.
January 16, 2025