ದಾವಣಗೆರೆ, ಅ. 2- ಬಸಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾತೃಶ್ರೀ ನಗರ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಗಾಂಧೀಜಿ ಜಯಂತಿ ಅಂಗವಾಗಿ `ಪರಿಸರ ಸ್ನೇಹಿ ಜೀವನ ಶೈಲಿ’ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪರಿಸರದ ಬಗ್ಗೆ ಮರ ಗಿಡ ರಕ್ಷಣೆ ಹಾಗೂ ಪಾಲನೆ ಕುರಿತು ಶಾಲೆಯ ಮಕ್ಕಳಲ್ಲಿ ಹಾಗೂ ಗ್ರಾಮಸ್ಥರಲ್ಲಿ ಅರಿವು ಮೂಡಿಸಲಾಯಿತು. ಮಾತೃಶ್ರೀ ಸಂಸ್ಥೆಯ ಅಧ್ಯಕ್ಷ ಕಿರಣ್, ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
January 16, 2025