ದಾವಣಗೆರೆ, ಅ. 2- ಮಹಾತ್ಮ ಗಾಂಧೀಜಿ ರವರ 154 ನೇ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ರವರ 119ನೇ ಜಯಂತಿಯನ್ನು ಯುನೈಟೆಡ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಸ್ಥ ಬಿ.ದಾದಾಪೀರ್ ಗಾಂಧೀಜಿ ಮತ್ತು ಶಾಸ್ತ್ರೀಯವರ ಆದರ್ಶ ಮತ್ತು ತತ್ವಗಳ ಕುರಿತು ಮಾತನಾಡಿದರು.
ಶಾಲೆಯ ಪ್ರಾಂಶುಪಾಲ ಎಂ. ವಾಸೀಂ ಪಾಷ, ಗಾಂಧೀಜಿಯವರು ಭಾರತದ ಸ್ವಾತಂತ್ರ್ಯಕ್ಕಾಗಿ ನಡೆಸಿದ ಹೋರಾಟಗಳ ಬಗ್ಗೆ ಮಾತನಾಡಿದರು.
ಮಕ್ಕಳಿಂದ ಗಾಂಧೀಜಿಯವರ ಜೀವನದ ಬಗ್ಗೆ ಕಿರುನಾಟಕವನ್ನು ಪ್ರದರ್ಶಿಸಲಾಯಿತು. ಶಿಕ್ಷಕರಾದ ಇಬ್ರಾಹಿಂ ಮತ್ತು ಕು. ಗಂಗಮ್ಮ ಗಾಂಧೀಜಿ ಮತ್ತು ಶಾಸ್ತ್ರೀಜಿರವರ ಜೀವನದ ಆದರ್ಶಗಳ ಬಗ್ಗೆ ಮಾತನಾಡಿದರು.