ಆರೋಗ್ಯಕರ ಭಾರತ ನಿರ್ಮಾಣ ಪ್ರತಿಜ್ಞೆ ಸ್ವೀಕರಿಸಿದ ಸೇಂಟ್ ಜಾನ್ಸ್ ವಿದ್ಯಾರ್ಥಿಗಳು

ಆರೋಗ್ಯಕರ ಭಾರತ ನಿರ್ಮಾಣ ಪ್ರತಿಜ್ಞೆ  ಸ್ವೀಕರಿಸಿದ ಸೇಂಟ್ ಜಾನ್ಸ್ ವಿದ್ಯಾರ್ಥಿಗಳು

ದಾವಣಗೆರೆ, ಅ. 2- ಭಾರತದ ಸ್ವಾತಂತ್ರ್ಯ ಹೋರಾಟದ ಪ್ರವರ್ತಕ ಮಹಾತ್ಮ ಗಾಂಧಿ ಹಾಗೂ ಭಾರತ ಕಂಡ ಶ್ರೇಷ್ಟ ಮುತ್ಸದ್ಧಿ, ಸಜ್ಜನ ನೇತಾರ  ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನವನ್ನು  ಆಚರಿಸಲಾಯಿತು. 

ಈ ವಿಶೇಷ ದಿನದ ಅಂಗವಾಗಿ ಸರ್ವಧರ್ಮಗಳಲ್ಲಿನ ಐಕ್ಯತಾ ಮನೋಭಾವವನ್ನು ಸಾರುವ ಉದ್ದೇಶದಿಂದ ಭಗವದ್ಗೀತೆ, ಬೈಬಲ್, ಖುರಾನ್ ಧಾರ್ಮಿಕ ಗ್ರಂಥಗಳ ಪಠಣವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ  ಟಿ.ಎಂ ಉಮಾಪತಯ್ಯ ಮಾತನಾಡುತ್ತಾ ಎಲ್ಲರೂ ‘ಗಾಂಧೀಜಿ ಹಾಗೂ ಶಾಸ್ತ್ರೀಜಿ ಯವರ ಜೀವನ ಹಾಗೂ ಆದರ್ಶಗಳನ್ನು ನಿಮ್ಮ ಜೀವ ನದಲ್ಲಿ ಅಳವಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.  

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ  ಹೆಚ್. ಅನಿಲ್ ಕುಮಾರ್‍ರವರು, ಕಾರ್ಯದರ್ಶಿ ಖಜಾಂಚಿ ಪ್ರವೀಣ್ ಹುಲ್ಲುಮನೆ ಹಾಗೂ ಸಂಸ್ಥೆಯ ಪ್ರಾಂಶುಪಾಲರಾದ ಸೈಯ್ಯದ್ ಆರಿಫ್ ಆರ್ ಹಾಗೂ ಶ್ರೀಮತಿ ಪ್ರೀತಾ ಟಿ. ರೈ, ಉಪಪ್ರಾಂಶುಪಾಲರಾದ ಶ್ರೀಮತಿ ನೇತ್ರಾವತಿ ಹಾಗು ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

ಕಾರ್ಯಕ್ರಮದ ಕೊನೆಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿ ವೃಂದದವರೆಲ್ಲರೂ ಸೇರಿ ಗಾಂಧೀಜಿಯವರಿಗೆ ಪ್ರಿಯವಾದ ‘ ರಘುಪತಿ ರಾಘವ ರಾಜಾರಾಂ’ ಭಜನಾ ಗೀತೆಯನ್ನು ಹಾಡಿದ ನಂತರ ಶ್ರಮದಾನ ಮಾಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

error: Content is protected !!