ರಾಸಾಯನಿಕ ಬಳಕೆಯಿಂದ ಆರೋಗ್ಯಕ್ಕೆ ಹಾನಿ

ರಾಸಾಯನಿಕ ಬಳಕೆಯಿಂದ ಆರೋಗ್ಯಕ್ಕೆ ಹಾನಿ

ಜಗಳೂರು, ಅ. 1- ತರಕಾರಿ ಬೆಳೆಗಳಲ್ಲಿ ಅತಿಯಾದ ರಾಸಾಯನಿಕ  ಬಳಕೆಯಿಂದ ಇಂದು ನಮ್ಮ ಆರೋಗ್ಯದಲ್ಲಿ ಏರುಪೇರುಗಳನ್ನು ಗಮನ ಸುತ್ತಿದ್ದೇವೆ ಎಂದು ದಾವಣಗೆರೆಯ ಐಸಿಆರ್ ತರ ಳಬಾಳು ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಹೇಳಿದರು.

ಐಸಿಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಜಗಳೂರು ತಾಲ್ಲೂಕು ಹಿರೇಅರಕೆರೆ ಗ್ರಾಮದಲ್ಲಿ ಮೊನ್ನೆ ಹಮ್ಮಿಕೊಂಡಿದ್ದ ಮೆಣಶಿನಕಾಯಿಯಲ್ಲಿ ಸಮಗ್ರ ಬೆಳೆ ನಿರ್ವಹಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇಂದು ಪ್ರಕೃತಿ ವಿಕೋಪದಿಂದ ತರಕಾರಿ ಬೆಳೆಗಳಲ್ಲಿ ಅಕಾಲಿಕ ರೋಗ, ಕೀಟಗಳ ಬಾಧೆ ಹೆಚ್ಚಾಗುತ್ತಿದೆ. ಇದರ ನಿಯಂತ್ರಣಕ್ಕೆ ರೈತರು ಬರೀ ರಾಸಾಯನಿಕಗಳ ಬಳಕೆಗೆ ಮಾರು ಹೋಗದೇ ಜೈವಿಕ ಹಾಗೂ ನೈಸರ್ಗಿಕ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕೆಂದು ತಿಳಿಸಿದರು.

ತರಕಾರಿ ಸ್ಪೆಷಲ್ ಲಘು ಪೋಷಕಾಂಶದ ಬಳಕೆ ಹಾಗೂ ಹಳದಿ ಮತ್ತು ನೀಲಿ ಅಂಟುಪಟ್ಟಿ ಬಳಕೆಯಿಂದ ಉತ್ತಮ ಹೂ ಮತ್ತು ಕಾಯಿಗಳನ್ನು ಪಡೆಯುವುದಲ್ಲದೇ, ಕೀಟಗಳ ಹಾನಿಯ ಮಟ್ಟವನ್ನು ನಿಖರತೆಯಿಂದ ನಿರ್ಧರಿಸಲು ಸಹಾಯವಾಗುತ್ತದೆ ಎಂದು ಹೇಳಿದರು.

ಮಣ್ಣು ವಿಜ್ಞಾನಿಗಳಾದ ಹೆಚ್.ಎಂ. ಸಣ್ಣಗೌಡ್ರು ಮಾತನಾಡಿ, ತರಕಾರಿ ಬೆಳೆಗಳಲ್ಲಿ ಬೆಳೆ ಪರಿವರ್ತನೆ, ಮಣ್ಣು ಪರೀಕ್ಷೆಯ ಆಧಾರದಲ್ಲಿ ಪೋಷಕಾಂಶಗಳ ಬಳಕೆ, ಜೈವಿಕ ರೋಗಗಳ ಬಳಕೆಯಿಂದ ನಾವು ಗುಣಮಟ್ಟದ ಫಸಲನ್ನು ಪಡೆಯಲು ಸಾಧ್ಯ ಎಂದರು.

ರೈತರಾದ ನಾಗೇಂದ್ರಪ್ಪ, ಬಸವರಾಜ್, ಲೋಹಿತ್ ಕುಮಾರ್ ಮತ್ತಿತರರಿದ್ದರು. 

error: Content is protected !!