ದಾವಣಗೆರೆ, ಸೆ. 29- ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಮಾಗನೂರು ಬಸಪ್ಪ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ, ವಿವಿಧ ಕ್ರೀಡೆಗಳಲ್ಲಿ ಜಯಶೀಲರಾಗುವುದರೊಂದಿಗೆ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕರ ಟೆನ್ನಿಕಾಯ್ಟ್ ತಂಡದ ಸಾಯಿರಾಜ್ ಉಮೇಶ್ ಎರಕಲ್, ಫರ್ಹಾನ್ ಖಾನ್, ವಿಕಾಸ್ ಆರ್.ಎನ್, ಮನ್ವಿತ್ ಆರ್.ಆರ್, ಶ್ರೇಯಸ್ ಹೆಚ್ ಯರೇಶೀಮಿ, ಇವರ ತಂಡ ಟೆನ್ನಿಕಾಯ್ಟ್ ಸ್ಫರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಕರಾಟೆಯಲ್ಲಿ 45 ಕೆ.ಜಿ ವಿಭಾಗದಿಂದ ಕು. ಶ್ರೇಯ ಪಿ, 50 ಕೆ.ಜಿ ವಿಭಾಗದಿಂದ ಕು.ಅಭಿಲಾಷ ಕೆ ನಾಯಕ್, 70ಕೆ.ಜಿ ವಿಭಾಗದಿಂದ ಕು.ಕವನ ಜಿ.ಜೆ ಮತ್ತು 58 ಕೆ.ಜಿ ವಿಭಾಗದಿಂದ ಸೋಮ ಶೇಖರ್ ಎಂ.ಯು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ತಾಲ್ಲೂಕು ಮಟ್ಟದ ವೈಯಕ್ತಿಕ ಆಟಗಳಲ್ಲಿ ಬಾಲಕಿಯರ ವಿಭಾಗದಿಂದ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಕು.ವಿದ್ಯಾ ಎಂ.ಆರ್ ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಗುಂಡು ಎಸೆತ ಸ್ಪರ್ಧೆಯಲ್ಲಿ ಕು.ಕವನ ಜಿ.ಜೆ ತೃತೀಯ ಸ್ಥಾನ ಪಡೆದಿರುತ್ತಾರೆ.
ವಿಜೇತ ವಿದ್ಯಾರ್ಥಿಗಳನ್ನು ಮಾಗನೂರು ಬಸಪ್ಪ ಪಬ್ಲಿಕ್ ಟ್ರಸ್ಟ್ನ ಗೌರವ ಕಾರ್ಯದರ್ಶಿ ಎಂ.ಬಿ.ಸಂಗಮೇಶ್ವರಗೌಡರು, ಕಾಲೇಜಿನ ನಿರ್ದೇಶಕರಾದ ಡಾ.ಜಿ.ಎನ್.ಹೆಚ್ ಕುಮಾರ್, ಪ್ರಾಚಾರ್ಯ ಡಾ. ಪ್ರಸಾದ್ ಬಂಗೇರಾ ಎಸ್., ಕ್ರೀಡಾ ಸಮಿತಿಯ ಉಪನ್ಯಾಸಕರಾದ ಚಂದನ್ ಬಿ, ಶಿವಪ್ರಸಾದ್ ಟಿ.ಎಸ್., ಪ್ರಹ್ಲಾದ್ ಎಂ.ಆರ್., ಸಂಪತ್ ಕುಮಾರ್ ಸಿ.ಎಂ., ಬಸವ ರಾಜ್ ಕುರುವತ್ತೇರ್, ಕು. ಬಿಂದು ಕೆ.ಆರ್., ಕು.ಕಾವ್ಯ ಕೊಪ್ಪದ್, ಶ್ರೀಮತಿ ಶ್ವೇತ ಕೆ.ಎಸ್. ಅಭಿನಂದಿಸಿರುತ್ತಾರೆ.