ಇಂದು ಸಿದ್ಧಗಂಗಾ ಸಂಸ್ಥೆಯ ಪರಿಸರ ಸ್ನೇಹಿ ಪೇಪರ್‌ ಗಣಪನ ವಿಸರ್ಜನೆ

ಇಂದು ಸಿದ್ಧಗಂಗಾ ಸಂಸ್ಥೆಯ ಪರಿಸರ ಸ್ನೇಹಿ ಪೇಪರ್‌ ಗಣಪನ ವಿಸರ್ಜನೆ

ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಗಣೇಶ ಚತುರ್ಥಿಯಂದು ಭವ್ಯ ಮೆರವಣಿಗೆಯ ಮೂಲಕ ಸಾಂಪ್ರದಾಯಿಕವಾಗಿ ಪ್ರತಿಷ್ಠಾಪಿಸಿದ್ದ ಪರಿಸರ ಸ್ನೇಹಿ ಪೇಪರ್‌ ಗಣಪನ ವಿಸರ್ಜನೆ ಇಂದು ಮಧ್ಯಾಹ್ನ ನಡೆಯಲಿದೆ. 

12 ಅಡಿ ಎತ್ತರದ ಹಳೆಯ ನ್ಯೂಸ್‌ ಪೇಪರ್‌ ಮತ್ತು ಮೈದಾ ಹಿಟ್ಟಿನ ಅಂಟು ಬಳಸಿ ಇದ್ದಿಲು ಪುಡಿಯ ಬಣ್ಣದಿಂದ ಲೇಪಿತ ಆಕರ್ಷಕ ಹಗುರ ಗಣೇಶ ಎಲ್ಲರ ಗಮನ ಸೆಳೆದಿದ್ದಾನೆ.  ಶಾಲೆಯ ಚಿತ್ರಕಲಾ ಶಿಕ್ಷಕರಾದ ಹೀನಾ ಕೌಸರ್‌, ಸ್ವಾತಿ, ನಟರಾಜ್‌, ಪ್ರಿಯಾಂಕ ಮತ್ತು ಸಹನ, ಜೊತೆಗೆ ಹೈಸ್ಕೂಲ್‌ನ ವಿದ್ಯಾರ್ಥಿ – ವಿದ್ಯಾರ್ಥಿನಿಯರ ಕರ ಕೌಶಲ್ಯದಿಂದ ಅರಳಿ ನಿಂತ ಈ ಸುಂದರ ಗಣೇಶನನ್ನು ಪ್ರತಿ ದಿನ ಒಂದೊಂದು ತರಗತಿ ಮಕ್ಕಳು ಪೂಜಿಸಿ, ಭಾವೈಕ್ಯತೆ ಮೆರೆದಿದ್ದಾರೆ.

ತಾವೇ ರೂಪಿಸಿದ ಗಜಮುಖನನ್ನು ಮಕ್ಕಳು ಭಾರವಾದ ಹೃದಯದಿಂದ ಬೀಳ್ಕೊಡ ಲಿದ್ದಾರೆ. ಶಾಲೆಯ ಮಂಟಪದಲ್ಲಿ ಬೃಹದಾಕಾರದ ವಿದ್ಯಾ ಗಣಪತಿ ಮಕ್ಕಳ ಭಕ್ತಿ ಮತ್ತು ಶ್ರದ್ಧೆಯ ಕೇಂದ್ರವಾಗಿತ್ತು. ಪ್ರಥಮ ಪೂಜಿತ, ವಿಘ್ನ ನಿವಾರಕನ ದರ್ಶನವನ್ನು ಕಳೆದ 12 ದಿನಗಳಿಂದ ಅನೇಕ ಪಾಲಕರು, ಸಾರ್ವಜನಿಕರು ದರ್ಶಿಸಿ ಪುನೀತರಾಗಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಡಾ|| ಜಯಂತ್‌, ಕಾರ್ಯದರ್ಶಿ ಹೇಮಂತ್‌  ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಜಸ್ಟಿನ್‌ ಡಿಸೌಜ ತಿಳಿಸಿದ್ದಾರೆ.

ಪೂಜೆ, ಪ್ರಸಾದ ವಿನಿಯೋಗದ ನಂತರ ಮೆರವಣಿಗೆ ಮೂಲಕ ಶನಿವಾರ ತುಂ ಗಭದ್ರೆಯಲ್ಲಿ ವಿಲೀನಗೊಳಿಸಲಾಗುವುದು.  

error: Content is protected !!