ಹರಿಹರ, ಸೆ. 28 – ನಗರದಲ್ಲಿ ಮುಸ್ಲಿಂ ಸಮುದಾಯದ ವತಿಯಿಂದ ಈದ್ ಮಿಲಾದ್ ಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.
ಇಮಾಂ ಮೊಹಲ್ಲಾದ ಜಾಮಿಯಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆ ಜಾಮಿಯಾ ಮಸೀದಿಯಿಂದ ಪ್ರಾರಂಭಗೊಂಡು ಹಳ್ಳದಕೇರಿ, ಆಸ್ಪತ್ರೆ ರಸ್ತೆ, ಇಂದ್ರಾನಗರ, ಬೆಂಕಿನಗರ, ಕಾಳಿದಾಸ ನಗರ, ಹೈಸ್ಕೂಲ್ ಬಡಾವಣೆ, ಶಿವಮೊಗ್ಗ ರಸ್ತೆ, ರಾಣಿ ಚೆನ್ನಮ್ಮ ವೃತ್ತ, ಮುಖ್ಯ ರಸ್ತೆ, ಹರಪನಹಳ್ಳಿ ರಸ್ತೆ, ಗಾಂಧಿನಗರ, ಹಳೆ ಪಿ.ಬಿ.ರಸ್ತೆ, ಟಿ.ಬಿ.ರಸ್ತೆ, ತೆಗ್ಗಿನಕೇರಿ, ಶಿಬಾರ ಸರ್ಕಲ್, ದೇವಸ್ಥಾನ ರಸ್ತೆಯ ಮುಖಾಂತರ ಸಂಚರಿಸಿ ಪುನಃ ಜಾಮೀಯ ಮಸೀದಿ ಆವರಣದಲ್ಲಿ ಅಂತ್ಯಗೊಂಡಿತು.
ಮೆರವಣಿಗೆಯಲ್ಲಿ ಸಹಸ್ರಾರು
ಸಂಖ್ಯೆಯಲ್ಲಿ ಸೇರಿದ್ದ, ಮುಸ್ಲಿಂ ಸಮುದಾಯದವರು ಪ್ರಾರ್ಥನೆ ಹೇಳುವ ಮೂಲಕ ಡಿ.ಜಿ. ಸೌಂಡ್ ಸಿಸ್ಟಮ್ ಇಲ್ಲದೆ, ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾ ಮೆರವಣಿಗೆ ಮಾಡಿದರು.
ಈ ವೇಳೆ ಮುಸ್ಲಿಂ ಸಮುದಾಯದ ಧರ್ಮ ಗುರು ಗಳಾದ ಷಂಶುದ್ದಿನ್ ಸಾಬ್ ಬರಕಾತಿ, ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಹಾಗೂ ಜಿ.ಬಿ. ವಿನಯಕುಮಾರ್ ಮಾತ ನಾಡಿ, ಈದ್ ಮಿಲಾದ್ ಹಬ್ಬದ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್. ರಾಮಪ್ಪ, ಕಾಂಗ್ರೆಸ್ ಪಕ್ಷದ ಮುಖಂಡ ನಿಖಿಲ್ ಕೊಂಡಜ್ಜಿ, ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕಾರ್, ಎಂ. ಎಸ್ . ಬಾಬುಲಾಲ್, ಆರ್.ಸಿ. ಜಾವೇದ್, ಮುಜಾಮಿಲ್ಲ್ ಬಿಲ್ಲು, ದಾದಾ ಖಲಂದರ್, ಇಬ್ರಾಹಿಂ, ಬಿ ಅಲ್ತಾಫ್, ಸೈಯದ್ ಅಲಿಂ, ಮುಖಂಡರಾದ ದಾದಾಪೀರ್ ಭಾನುವಳ್ಳಿ, ಬಿ.ಕೆ. ಸೈಯದ್ ರೆಹಮಾನ್, ಜಾಕೀರ್ ಹುಸೇನ್, ಸೈಯದ್ ಸನಾವುಲ್ಲಾ, ಮನ್ಸೂರು ಮದ್ದಿ, ಮಹಮ್ಮದ್ ಫೈರೋಜ್, ಸಿಗ್ಬತ್ ಉಲ್ಲಾ, ಹಾಜಿ ಹಾಲಿಖಾನ್, ಹೆಚ್. ಶಬ್ಬಿರ್ ಖಾನ್, ಮಹಮ್ಮದ್ ಅತಾವುಲ್ಲಾ, ಸೈಯದ್ ಏಜಾಜ್, ಸೈಯದ್ ರೆಹಮಾನ್, ಮುನಿರ್ ಆಹ್ಮದ್, ಮಹಮ್ಮದ್ ಅಶ್ಪಕ್, ಸೈಯದ್ ಇಮ್ತಿಯಾಜ್, ಆಸೀಫ್ ಅಲಿ ಖಾನ್, ಅಫ್ರೋಜ್ ಖಾನ್, ಸಿಕಂದರ್ ದರವೇಶ್, ಕನವಳ್ಳಿ ಕೆ ಆಸೀಫ್, ಆಸೀಫ್ ಜುನೆದಿ, ಆಶ್ರಫ್ ಆಲಿ, ನಜೀರ್ ಸಾಬ್, ಮನಸೂರ್, ನಜೀರ್ ಹುಸೇನ್, ಮುಬಷಿರ್ ಬಾಷಾ, ಬಿ.ಕೆ. ಬಾಷಾ ಮತ್ತಿತರರು ಉಪಸ್ಥಿತರಿದ್ದರು.