ದಾವಣಗೆರೆ, ಸೆ. 28- ಇಂದಿನ ಯುವಜನತೆ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವಂತೆ ಎಐವೈಎಫ್ ರಾಜ್ಯ ಉಪಾಧ್ಯಕ್ಷ ಆವರಗೆರೆ ವಾಸು ಕರೆ ನೀಡಿದರು.
ನಗರ ಸಮೀಪದ ಆವರಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳ ಲಾಗಿದ್ದ ಕ್ರಾಂತಿಕಾರಿ ಭಗತ್ ಸಿಂಗ್ ಅವರ 116 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಷ್ಟ್ರ ವಿಮೋಚನೆಯೊಂದೇ ನನ್ನ ಗುರಿ ಯಾವುದೇ ವ್ಯಕ್ತಿ ರಾಷ್ಟ್ರ ಧರ್ಮ ಅಥವಾ ಜನಾಂಗದ ಮೇಲೆ ದ್ವೇಷ ಸಾಧಿಸಲು ನಾನಾವುದನ್ನು ಮಾಡಿಲ್ಲ. ನನಗೆ ಬೇಕಾಗಿರುವುದೊಂದೇ ಸ್ವಾತಂತ್ರ್ಯ. ಅದೊಂದೇ ನನ್ನ ಕನಸು ಎಂಬುದು ಭಗತ್ ಸಿಂಗ್ ಅವರ ಆಶಯವಾಗಿತ್ತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಫೆಡರೇಷನ್ ಪದಾಧಿಕಾರಿಗಳಾದ ಎ. ತಿಪ್ಪೇಶಿ, ಮಳಲ್ಕೆರೆ ರುದ್ರೇಶ್, ಸಿ. ಗುರುಮೂರ್ತಿ, ಎ.ಕೆ.ಹನುಮಂತಪ್ಪ, ಹುಲಿಗೇಶ್, ಮಂಜಯ್ಯ, ರವಿ ಗೋಶಾಲೆ, ಸಂತೋಷ್ ಆರ್. ದೊಡ್ಮನಿ, ಭೀಮಣ್ಣ, ಪ್ರಭುದೇವ, ಸಲೀಂ, ಕರಿಬಸಪ್ಪ, ಗೋವಿಂದಪ್ಪ ಮತ್ತಿತರರು ಉಪಸ್ಥಿತರಿದ್ದರು.