ದಾವಣಗೆರೆ ಪಿ ಎಲ್ ಡಿ ಬ್ಯಾಂಕ್ : 10 ಲಕ್ಷ ರೂ. ಲಾಭ

ದಾವಣಗೆರೆ ಪಿ ಎಲ್ ಡಿ ಬ್ಯಾಂಕ್ : 10 ಲಕ್ಷ ರೂ. ಲಾಭ

ದಾವಣಗೆರೆ, ಸೆ. 26 – ದಾವಣಗೆರೆ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 2022 – 23 ನೇ ಸಾಲಿನಲ್ಲಿ 10 . 32 ಲಕ್ಷ ರೂ ಗಳ ಲಾಭವನ್ನು ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಎ.ಎಂ. ಮಂಜುನಾಥ್ ತಿಳಿಸಿದರು.

ಬ್ಯಾಂಕಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 86 ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್ ನಡೆದು ಬಂದ ದಾರಿಯನ್ನು ವಿವರಿಸಿದರು. 

ವರದಿ ಸಾಲಿನಲ್ಲಿ ಬ್ಯಾಂಕ್ ಸದಸ್ಯರಿಂದ 12 , 87 , 058 ರೂ ಗಳ ಷೇರು ಮೊತ್ತವನ್ನು ಸಂಗ್ರಹಿಸಿದೆ. ಸಾಲಾಖೈರಿಗೆ 98 , 66 , 499 ರೂ ಗಳ ಪಾಲು ಬಂಡವಾಳವನ್ನು ಹೊಂದಿದೆ.  ಸದಸ್ಯರಿಗೆ 2 , 72 , 71 , 290 . 85 ರೂ ಗಳ ಸಾಲವನ್ನು ನೀಡಿದೆ. ಸಾಲ ವಸೂಲಾತಿ  ಪ್ರಮಾಣ ಶೇ 71 . 65 ರಷ್ಟು ಇದೆ ಎಂದು ಹೇಳಿದರು. 

ಬ್ಯಾಂಕಿಗೆ ಸರ್ಕಾರದಿಂದ 0 – 05 ಗುಂಟೆ ಜಮೀನು ಮಂಜೂರಾಗಿದ್ದು, ಬ್ಯಾಂಕ್ ಕಟ್ಟಡ ನಿರ್ಮಾಣ ಕಾರ್ಯ ಶೀಘ್ರವೇ ಆರಂಭವಾಗಲಿದ್ದು, ಸದಸ್ಯರು ಹೆಚ್ಚಿನ ಸಹಕಾರ ನೀಡಬೇಕೆಂದು ವಿನಂತಿಸಿದರು. 

ಮಂಜುಳ ಪ್ರಾರ್ಥಿಸಿದರು. ರಮೇಶ್ ಸ್ವಾಗತಿಸಿದರು. ಕಾರ್ಯಕ್ರಮವನ್ನು ಒಡ್ಡಿನಹಳ್ಳಿ ಸಿದ್ದೇಶ್ ನಿರೂಪಿಸಿದರು.  ಬಸವರಾಜಪ್ಪ ವಂದಿಸಿದರು. 

ಬ್ಯಾಂಕಿನ ನಿರ್ದೇಶಕರಾದ ಆರ್.ಜಿ.  ಕುಬೇಂದ್ರಪ್ಪ, ಕೆ.ಎಂ.  ರೇವಣಸಿದ್ದಪ್ಪ , ಜಿ.ಎ.  ಮಂಜುನಾಥ್, ಕೆ. ಬಸವರಾಜಪ್ಪ , ಬಿ.ಎಸ್ . ರಮೇಶ್ , ವೈ.ಬಿ. ನಾಗರಾಜ, ರಾಜಪ್ಪ, ಎಂ.ಪಿ. ದೇವೇಂದಪ್ಪ, ಶ್ರೀಮತಿ ಸಿ.ಯು. ಜ್ಯೋತಿ, ಶ್ರೀಮತಿ ಟಿ.ಎಂ. ಸವಿತ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶ್ರೀಮತಿ ಸರ್ವಮಂಗಳ ಮಳಿಮಠ್ ಉಪಸ್ಥಿತರಿದ್ದರು.

error: Content is protected !!