ಧೂಳೆಹೊಳೆ ಶಾಲೆಗೆ ಶೂ, ಸಾಕ್ಸ್‌ ವಿತರಣೆ

ಧೂಳೆಹೊಳೆ ಶಾಲೆಗೆ ಶೂ, ಸಾಕ್ಸ್‌ ವಿತರಣೆ

ಮಲೇಬೆನ್ನೂರು ಸೆ 27 – ಧೂಳೆಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 192 ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ನೀಡುವ ಶೂ ಮತ್ತು ಸಾಕ್ಸ್‌ಗಳನ್ನು ಸೋಮವಾರ ವಿತರಿಸಲಾಯಿತು.  

ಡಾ. ಎ.ಎಸ್.  ಪ್ರಶಾಂತ್  ಅವರು ಸರ್ಕಾರಿ ಶಾಲೆಗಳಲ್ಲಿ ಗುಣಾತ್ಮಕ ಶಿಕ್ಷಣ ಸಿಗುತ್ತಿದ್ದು, ಖಾಸಗಿ ಶಾಲೆಗಳಿಗಿಂತ ಇಲ್ಲಿ ಉತ್ತಮ ಕಲಿಕೆ, ಸಂಸ್ಕಾರ ಕಲಿಸುವ ಶಿಕ್ಷಕರಿದ್ದಾರೆ. ಸರ್ಕಾರ ಮಕ್ಕಳಿಗೆ ಬಿಸಿ ಊಟ, ಕ್ಷೀರ ಭಾಗ್ಯ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ಒದಗಿಸುತ್ತಿದ್ದು, ಇದರ ಪ್ರಯೋಜನ ಪಡೆಯುವ ಮೂಲಕ ಸಾಧಕರಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

ಎಸ್.ಡಿ.ಎಂ.ಸಿ ಅಧ್ಯಕ್ಷ ನಿಜಲಿಂಗಪ್ಪ ಮಾತನಾಡಿದರು. ಆರೋಗ್ಯ ಇಲಾಖೆಯ ಎಂ. ಉಮಣ್ಣ, ಶಾಲಾ ಮುಖ್ಯ ಶಿಕ್ಷಕ ಶರಣ ಕುಮಾರ್ ಹೆಗಡೆ, ಗ್ರಾಮದ ಹಿರಿಯರಾದ ಕೆ. ಜಿ. ಶಿವಣ್ಣ, ಗ್ರಾಮ ಪಂಚಾಯತಿ ಸದಸ್ಯ ಉಚ್ಚಂಗೆಪ್ಪ, ಕೆ. ಜಿ. ಶಿವನಗೌಡ, ಶಾಲಾ ಶಿಕ್ಷಕರಾದ ಕೆ ಮಂಗಳ, ಯಶೋಧ, ರಶ್ಮಿ ಲೇಖಬಾನು, ಹೇಮಾ, ಸೌಮ್ಯ, ಅಂಜನಪ್ಪ, ಆರೋಗ್ಯ ಇಲಾಖೆಯ ಸುಧಾ, ದಾದಾಪೀರ್ ಹಾಗೂ  ಇತರರು ಈ ವೇಳೆ ಹಾಜರಿದ್ದರು.

error: Content is protected !!