ಕುಡಿಯುವುದನ್ನು ಬಿಡಿ : ಪೌರ ಕಾರ್ಮಿಕರಿಗೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಆಣತಿ

ಕುಡಿಯುವುದನ್ನು ಬಿಡಿ : ಪೌರ ಕಾರ್ಮಿಕರಿಗೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಆಣತಿ

ರಾಣೇಬೆನ್ನೂರು, ಸೆ. 27 – ನಿಮ್ಮ ತಂದೆ- ತಾಯಿ ಕುಡಿದು-ಕುಡಿದೇ ಸತ್ತ ಹೋದರು, ತಂದೆ-ತಾಯಿ ಪ್ರೀತಿ, ಮಮತೆ ನೀವು ಕಾಣಲಿಲ್ಲ. ಮಕ್ಕಳನ್ನು ನೋಡಿ ಅವರು ಸುಖ ಕಾಣಲಿಲ್ಲ. 

ಹಾಗಾಗಿ ನೀವು ಬೇಡಿ ಕುಡಿಯುವುದನ್ನು ಬಿಡಿ ಎಂದು ಪೌರ ಕಾರ್ಮಿಕರಿಗೆ ಸೂಚಿಸಿದ ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಅವರು ತಮ್ಮ ಅಂತರಾಳದ ನೋವನ್ನು ಧ್ವನಿಯಾಗಿಸಿದರು.

ಅವರು ವರ್ತಕರ ಸಮುದಾಯ ಭವನದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದರು.

ವರ್ಷಕ್ಕೆ ಎರಡು ಬಾರಿ ಆರೋಗ್ಯ ತಪಾಸಣೆ ಮಾಡಿಸಿ, ಕಾಯಿಲೆಗಳಿದ್ದರೆ ಗುರುತಿಸಿ ಸೂಕ್ತ ಚಿಕಿತ್ಸೆಗೆ ಕ್ರಮ, ಗುಣಮಟ್ಟದ ಸೌಲಭ್ಯಗಳ ಕೊಡುಗೆ, ನಿವೃತ್ತಿ ವೇತನದ ಬಗ್ಗೆ ಸೂಕ್ತ ಕ್ರಮ ಜಾರಿಗೆ ಪ್ರಯತ್ನ ಮುಂತಾದವುಗಳ ಬಗ್ಗೆ ನಾವು ಜವಾಬ್ದಾರಿ ನಿರ್ವಹಿಸುತ್ತೇವೆ. 

ಸರ್ಕಾರಿ ನೌಕರ ರಾಗಿರುವ ನೀವು ನಿಮ್ಮ ಕಾಯಕದ ಬಗ್ಗೆ ಬದ್ದತೆ ಇಟ್ಟುಕೊಳ್ಳಿರಿ ಎಂದು ಪುಟ್ಟಪ್ಪ ಹೇಳಿದರು.

ಕೋವಿಡ್ ಸಂದರ್ಭ ದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದರು. ರಾಷ್ಟ್ರ ಮಟ್ಟದಲ್ಲಿ ನಗರದ ಸ್ಥಾನ- ಮಾನವನ್ನು ರಕ್ಷಿಸುವ ಕೆಲಸ ಪೌರ ಕಾರ್ಮಿಕರಿಂದಾಗಲಿದೆ. 

ಹೆಚ್ಚು ಅನಾರೋಗ್ಯಕರ ವಾತಾವರಣದಲ್ಲಿಯೇ ಕಾಯಕ ನಿರ್ವಹಿಸುವ ನೀವು ನಿಮ್ಮ ಆರೋಗ್ಯದ ಕಡೆ ತೀವ್ರ ಗಮನ ಹರಿಸುವಂತೆ ಅಧ್ಯಕ್ಷತೆ ವಹಿಸಿದ್ದ ಪೌರಾಯುಕ್ತ ಕುಮ್ಮಣ್ಣನವರ, ಸದಸ್ಯರುಗಳಾದ ಪ್ರಕಾಶ ಪೂಜಾರ, ಪ್ರಭಾವತಿ ತಿಳವಳ್ಳಿ, ಗಂಗಮ್ಮ ಹಾವನೂರ, ಜಯಶ್ರೀ ಪಿಸೆ, ಮಂಜುಳಾ ಹತ್ತಿ, ಶೇಖಪ್ಪ ಹೊಸಗೌಡ್ರ, ರಮೇಶ ಕರೆಡಣ್ಣನವರ, ಮಲ್ಲಣ್ಣ ಅಂಗಡಿ, ಮಧು ಕೋಳಿವಾಡ, ಮಾಜಿ ನೌಕರ ಕರಿಬಸಪ್ಪ ಹೇಳಿ ಶುಭ ಕೋರಿದರು.

ಮಧು ಕಂಬಳಿ, ಮಾರುತಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

error: Content is protected !!