ನಗರದಲ್ಲಿ ಈದ್‌-ಮಿಲಾದ್ ಭರ್ಜರಿ ತಯಾರಿ, ಮಕ್ಕಳ ಖುಷಿ

ನಗರದಲ್ಲಿ ಈದ್‌-ಮಿಲಾದ್ ಭರ್ಜರಿ ತಯಾರಿ, ಮಕ್ಕಳ ಖುಷಿ

ದಾವಣಗೆರೆ, ಸೆ. 27- ಮುಸ್ಲಿಂ ಬಾಂಧವರು ನಾಳೆ ಆಚರಿಸಲಿರುವ ಈದ್ ಮಿಲಾದ್ ಹಬ್ಬದ ಖರೀದಿಯ ಆರ್ಭಟ ಮುಗಿಲು ಮುಟ್ಟಿದ್ದು, ಭರ್ಜರಿ ತಯಾರಿಯಲ್ಲಿರುವ ಮಕ್ಕಳು, ಯುವಕರು ಗಲ್ಲಿ ಗಲ್ಲಿಗಳಲ್ಲಿ ಝಂಡಾಗಳನ್ನು ಕಟ್ಟಿ ದೀಪಾಲಂಕಾರದಿಂದ ಶೃಂಗಾರಗೊಳಿಸಿರುವ ದೃಶ್ಯ ನಗರಾದ್ಯಂತ ಕಂಡು ಬಂದಿದೆ.

ಆಜಾದ್ ನಗರ, ಭಾಷಾನಗರ, ಇಮಾಂನಗರ ಸೇರಿದಂತೆ ವಿನೋಬನಗರ, ಕೆಟಿಜೆ ನಗರ, ಜಾಲಿ ನಗರದಲ್ಲಿಯೂ ಸಹ ಹಬ್ಬದ ತಯಾರಿಯಲ್ಲಿ ಮಿಂದಿರುವ ಮುಸ್ಲಿಂ ಬಾಂಧವರು ಮಕ್ಕಳಿಗೆ ಜುಬ್ಬಾ, ಕುರ್ತಾ, ಪೈಜಾಮ, ಫ್ಯಾನ್ಸಿ ಡ್ರೆಸ್‌ಗಳ ಖರೀದಿ ಒಂದೆಡೆ ಇದ್ದರೆ, ಹಬ್ಬದ ವಿಶೇಷ ಪಾಯಸ ಮಾಡಲು ಶ್ಯಾವಿಗೆ, ಆಹಾರ ಸಾಮಗ್ರಿಗಳ ಖರೀದಿ ಮತ್ತೊಂದೆಡೆ. ಇವೆಲ್ಲದರ ನಡುವೆ ಮೆಹಂದಿ, ಬ್ಯಾಂಗಲ್ಸ್, ಖರೀದಿಯಿಂದ ಕಾಸ್ಮೆಟಿಕ್ಸ್ ಅಂಗಡಿಗಳಲ್ಲಿ ಜನಜಂಗುಳಿಯಿಂದ ತುಂಬಿ ತುಳುಕುತ್ತಿರುವುದು ಮತ್ತೊಂದು ವಿಶೇಷ.

ನಗರದಲ್ಲಿ ಈದ್‌-ಮಿಲಾದ್ ಭರ್ಜರಿ ತಯಾರಿ, ಮಕ್ಕಳ ಖುಷಿ - Janathavani

ರಂಗುರಂಗಿನ ದೀಪಾಲಂಕಾರದಿಂದ ಕಂಗೊಳಿಸುತ್ತಿರುವ ನಗರದ ವಿವಿಧ ಬಡಾವಣೆಗಳಲ್ಲಿ ಸಂಘ-ಸಂಸ್ಥೆಗಳಿಂದ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ, ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಈದ್ ಮಿಲಾದ್ ಹಬ್ಬಕ್ಕೆ ಮೆರಗು ನೀಡುವಂತಿದೆ. ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮ ದಿನದ ಸಂಭ್ರಮದಲ್ಲಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮಗಳಲ್ಲಿ ರೋಗಿಗಳಿಗೆ ಹಣ್ಣು ವಿತರಣೆ, ಬಡವರಿಗೆ, ನಿರ್ಗತಿಕರಿಗೆ ಫುಡ್ ಪ್ಯಾಕೇಟ್ ನೀಡಿ ಹಬ್ಬದ ಖುಷಿ ವಿನಿಮಯ ಮಾಡಿಕೊಂಡಿರುವುದು ಬಹಳ ವಿಶೇಷ. 

error: Content is protected !!