ದಾವಣಗೆರೆ, ಸೆ. 27 – ಲೈಫ್ ಲೈನ್ ಸ್ವಯಂ ಪ್ರೇರಿತ ರಕ್ತದಾನಿಗಳ ಸಮೂಹದ ವತಿಯಿಂದ ಅಮೃತ ವಿದ್ಯಾಲಯಂ ಪದವಿ ಪೂರ್ವ ಕಾಲೇಜಿನಲ್ಲಿ `ರಕ್ತದಾನದ ಬಗ್ಗೆ ಜಾಗೃತಿ ಮತ್ತು ಅರಿವು’ ಕಾರ್ಯಕ್ರಮನ್ನು ಹಮ್ಮಿಕೊಳ್ಳಲಾಗಿತ್ತು.
ಉಪಾಧ್ಯಕ್ಷ ಪೃಥ್ವಿರಾಜ್ ಬಾದಾಮಿ ಅವರು ಕಾರ್ಯಕ್ರಮದ ವಿವರವನ್ನು ಸಭೆಗೆ ತಿಳಿಸಿದರು. ಲೈಫ್ ಲೈನ್ ಸಂಸ್ಥೆಯ ಹಿರಿಯ ರಕ್ತದಾನಿ ಆದಿಕೇಶವ ಪ್ರಕಾಶ್ ರಕ್ತದಾನದ ಬಗ್ಗೆ ಅತ್ಯಮೂಲ್ಯ ಮಾಹಿತಿ ಗಳನ್ನು ಮತ್ತು ಸಲಹೆಗಳನ್ನು ನೀಡಿದರು.
ರಕ್ತದಾನ ಮಾಡುವುದರಿಂದ ಅನುಕೂಲಗಳನ್ನು ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳಿಗೆ ಹಾಗೂ ಪ್ರಾಧ್ಯಾಪಕರಿಗೆ ತಿಳಿಸಿದರು. ನಂತರ ವಿದ್ಯಾರ್ಥಿಯರಿಗೆ ಮತ್ತು ಪ್ರಾಧ್ಯಾಪಕರಿಗೆ ಕು. ಐಶ್ವರ್ಯ ಅವರು ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಯಾವ ಸಂದರ್ಭದಲ್ಲಿ ರಕ್ತದಾನ ಮಾಡಬಹುದು ರಕ್ತದಾನ ಮಾಡುವುದರಿಂದ ಮಹಿಳೆಯರಿಗೆ ಉಪಯೋಗಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು.
ಮಾಧವ ಪ್ರಸಾದ್ ಪದಕಿ ಅವರು ಸಂಸ್ಥೆಯ ಬಗ್ಗೆ ಹಾಗೂ ಸಂಸ್ಥೆಗಳಿಂದ ನಡೆಯುತ್ತಿರುವ ವಿವಿಧ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.ಈ ಸಂದರ್ಭದಲ್ಲಿ ಸಂಸ್ಥೆ ಕಾರ್ಯದರ್ಶಿ ಅನಿಲ್ ಬಾರಂಗೆಳ್, ಖಜಾಂಚಿ ಡಿ. ಶೇಷಾಚಲ, ಸಂಘಟನಾ ಕಾರ್ಯದರ್ಶಿ ಗಾಯಕ್ವಾಡ್ ಸಂತೋಷ್, ಗೋಪಾಲಕೃಷ್ಣ ಹಾಜರಿದ್ದರು.