ಎ ಶ್ರೇಣಿಯಲ್ಲಿ ದಿ ವೆಜಿಟಬಲ್ ಪ್ಲಾಂಟ್ ಸೌಹಾರ್ದ ಸಹಕಾರಿ

ಎ ಶ್ರೇಣಿಯಲ್ಲಿ ದಿ ವೆಜಿಟಬಲ್ ಪ್ಲಾಂಟ್ ಸೌಹಾರ್ದ ಸಹಕಾರಿ

ದಾವಣಗೆರೆ, ಸೆ. 26- ಉತ್ತಮ ಸಹಕಾರದೊಂದಿಗೆ ದಿ ವೆಜಿಟಬಲ್ ಪ್ಲಾಂಟ್ ಸೌಹಾರ್ದ ಸಹಕಾರಿ ಸಂಘ 2022-23 ನೇ ಸಾಲಿನಲ್ಲಿ 23,54,087 ರೂ. ಲಾಭ ಗಳಿಸುವ ಮೂಲಕ `ಎ’ ವರ್ಗದ ಶ್ರೇಣಿಯಲ್ಲಿದೆ ಎಂದು ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್ ತಿಳಿಸಿದರು.

ನಗರದ ಜಯದೇವ ವೃತ್ತದ ಬಳಿ ಇರುವ ಶ್ರೀ ಶಂಕರ ಭಾರತಿ ಮಂದಿರದಲ್ಲಿ (ಶಂಕರ ಮಠ) ದಿ ವೆಜಿಟಬಲ್ ಪ್ಲಾಂಟ್ ಸೌಹಾರ್ದ ಸಹಕಾರಿ ಸಂಘದ 7 ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಆರ್. ವೆಂಕಟಾಚಲಮೂರ್ತಿ ಮಾತನಾಡಿ, 2022-23 ನೇ ಸಾಲಿಗೆ 1108 ಸದಸ್ಯರಿಂದ 17,99,000 ಷೇರು ಬಂಡವಾಳ ಹೊಂದಿದೆ. 7,51,54,250 ಠೇವಣಿ ಸಂಗ್ರಹಿಸಿ, 5,68,44,500 ಸಾಲವನ್ನು ನೀಡಿದೆ. 8,91,53,000 ದುಡಿಯುವ ಬಂಡವಾಳ ಹೊಂದಿದ್ದು, 23,54, 000 ಲಾಭ ಬಂದಿರುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಹರಿಹರ ಪಟ್ಟಣದ ಕು. ಭೂಮಿಕ ಭಾರತೀಯ ನೌಕಾದಳಕ್ಕೆ ಕರ್ನಾಟಕದಿಂದ ಆಯ್ಕೆಯಾಗಿರುವ ಪ್ರಥಮ ಅಭ್ಯರ್ಥಿ ಹಾಗೂ ಬೇಬಿ ನಿಧಿ ಬೇತೂರು ಕರ್ನಾಟಕ ರಾಜ್ಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಕರಾಟೆಯಲ್ಲಿ ಭಾಗವಹಿಸಿ ಸಾಧನೆ ಮಾಡಿರುವುದರಿಂದ ಈ ಇಬ್ಬರಿಗೂ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಬಿ. ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಜೆ.ಕೆ. ಶಿವಕುಮಾರ್, ನಿರ್ದೇಶಕರಾದ ಮಾರುತಿ, ರುದ್ರಮುನಿ, ಮಹಾಂತೇಶ್, ಮಲ್ಲಿಕಾರ್ಜುನ್ ವಾಲಿ, ರಾಜಪ್ಪ, ಶ್ವೇತಾ, ಆಶಾ ಸಿಬ್ಬಂದಿಯವರಾದ ಚೈತ್ರಾ, ಅರವಿಂದ, ವೀರೇಂದ್ರ, ಪರಶುರಾಮ್ ಹಾಗೂ ಪಿಗ್ಮಿ ಸಂಗ್ರಾಹಕರಿದ್ದಾರೆ.

error: Content is protected !!