ಹೊನ್ನಾಳಿ ಅರ್ಬನ್ ಕ್ರೆಡಿಟ್ ಸೊಸೈಟಿಗೆ 80 ಲಕ್ಷ ನಿವ್ವಳ ಲಾಭ

ಹೊನ್ನಾಳಿ ಅರ್ಬನ್ ಕ್ರೆಡಿಟ್ ಸೊಸೈಟಿಗೆ 80 ಲಕ್ಷ ನಿವ್ವಳ ಲಾಭ

ಸೊಸೈಟಿಯ ಅಧ್ಯಕ್ಷ ಡಾ. ರಾಜಕುಮಾರ್‌ ಸಂತಸ

ಹೊನ್ನಾಳಿ, ಸೆ. 26 – ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಆರ್ಥಿಕ ಮತ್ತು ಸಾಮಾಜಿಕ ಸೌಲ ಭ್ಯಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದ್ದು, 2022-23ನೇ ಸಾಲಿಗೆ 80.02 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಸೊಸೈಟಿಯ ಅಧ್ಯಕ್ಷ ಡಾ. ರಾಜಕುಮಾರ್‌ ಹೇಳಿದರು. 

ಅವರು ಪಟ್ಟಣದ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಆಯೋಜಿಸ ಲಾಗಿದ್ದ ಸೊಸೈಟಿಯ 2022-23ನೇ ಸಾಲಿನ ವಾರ್ಷಿಕ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿದರು. 

ಪ್ರಸ್ತುತ 3745 ಸದಸ್ಯರುಗಳಿದ್ದು 3.05 ಕೋಟಿ ಷೇರು ಬಂಡವಾಳ ಹೊಂ ದಿದೆ. 18.76 ಕೋಟಿ ಒಟ್ಟು ಠೇವಣಿಗಳನ್ನು ಹೊಂದಿದ್ದು, ಸಂಘವು ತನ್ನ ಮೂಲ ಬಂಡವಾಳದಲ್ಲಿಯೇ ಸಂಘದ ಸದಸ್ಯರ ಮತ್ತು ಸಹಸದಸ್ಯರ ಅನುಕೂಲಕ್ಕಾಗಿ ಎಲ್ಲಾ ರೀತಿಯ ಬ್ಯಾಂಕಿಂಗ್ ಸೇವಾ ಸೌಲಭ್ಯಗಳನ್ನು ಕಲ್ಪಿಸಿದೆ. ಸಂಘದ ಸದಸ್ಯರು ಗಂಪು ವಿಮೆ ಯೋಜನೆಗೆ ಒಳಪಟ್ಟಿದ್ದರೆ ಅಂತಹ ಸದಸ್ಯರು ಯಾವುದೇ ಅಪಘಾತದಿಂದ ಮರಣ ಹೊಂದಿದರೂ ಒಂದು ಲಕ್ಷ ಅವರ ವಾಸುದಾರರಿಗೆ ಕೊಡಿಸಲಾಗು ವುದು ಹಾಗೂ ಸಂಘದಿಂದ 5 ಸಾವಿರ ನೀಡಲಾಗುವುದು ಎಂದು ವಿವರಿಸಿದರು.

ಉಪಾಧ್ಯಕ್ಷ ವಿರೇಶ್ ಸ್ವಾಗತಿಸಿದರು, ಮಾಜಿ ಉಪಾಧ್ಯಕ್ಷ ಡಾ.ರಾಜಾನಾಯ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ದರು.   ನಿರ್ದೇಶಕರುಗಳಾದ ಎನ್‌. ಜಯರಾವ್‌, ಎಚ್‌.ಎಂ. ಶಿವಮೂರ್ತಿ, ಎಚ್‌.ಬಿ. ಮೋಹನ್‌, ಕೆ.ಆರ್‌. ನಾಗ ರಾಜ್‌, ಸಿ.ಕೆ. ರವಿಕುಮಾರ್‌, ಬಿ.ಎಚ್‌.ಉಮೇಶ್‌, ಎಚ್‌.ಎಂ. ಅರುಣ್‌ ಕುಮಾರ್‌, ಎನ್‌. ಪ್ರಸಾದ್‌, ಎಚ್‌.ಕೆ. ರೂಪ, ಎನ್‌.ಎನ್‌.ನಾಗರತ್ನ, ಎನ್‌. ಶಾಂತಲಾ ಮುಂತಾದವರು ಇದ್ದರು. 

error: Content is protected !!