ವಿಜಯನಗರ ಕ್ರೆಡಿಟ್ ಸೊಸೈಟಿಗೆ 40 ಲಕ್ಷ ಲಾಭ

ವಿಜಯನಗರ ಕ್ರೆಡಿಟ್ ಸೊಸೈಟಿಗೆ 40 ಲಕ್ಷ ಲಾಭ

ದಾವಣಗೆರೆ, ಸೆ. 26 – ನಗರದ ವಿಜಯನಗರ ಕ್ರೆಡಿಟ್ ಕೋ-ಆಪ್. ಸೊಸೈಟಿ 2022-23ನೇ ಸಾಲಿನಲ್ಲಿ 40,31,711.28 ರೂ. ಲಾಭ ಗಳಿಸಿ ಅಭಿವೃದ್ದಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದು ಸೊಸೈಟಿ ಅಧ್ಯಕ್ಷ ಜೆ.ಚೆಲುವಪ್ಪ ಸಂತಸ ವ್ಯಕ್ತಪಡಿಸಿದರು.

ಶ್ರೀ ಕೃಷ್ಣ ಭವಾನಿ ಸಭಾ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮ್ಮ ಸೊಸೈಟಿ ವರ್ಷದಿಂದ ವರ್ಷಕ್ಕೆ  ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದ್ದು, ಇದಕ್ಕೆ ಆಡಳಿತ ಮಂಡಳಿ ಸದಸ್ಯರ ಸಹಕಾರ, ಸಿಬ್ಬಂದಿ ವರ್ಗದವರ ಶ್ರಮ ಕಾರಣ ಎಂದು ಶ್ಲ್ಯಾಘಿಸಿದರು.

ಪ್ರಸಕ್ತ ಸಾಲಿನಲ್ಲಿ 3518 ಸದಸ್ಯರು ಇದ್ದು, ಸೊಸೈಟಿಯು ರೂ. 1,15,13,000  ಷೇರು ಬಂಡವಾಳ ಹೊಂದಿದೆ.  ರೂ. 24.78 ಕೋಟಿ ಠೇವಣಿ ಇದ್ದು, ರೂ.19.10 ಕೋಟಿ ಸಾಲ ನೀಡಲಾಗಿದೆ. ಮರಣ ಹೊಂದಿದ ಸಂಘದ ಸದಸ್ಯರ ಅಂತ್ಯಕ್ರಿಯೆಗೆ ನೆರವಾಗುವ ಉದ್ದೇಶದಿಂದ ಮೃತರ ವಾರಸುದಾರರಿಗೆ 4000 ರೂ. ಗಳನ್ನು ವಿತರಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆಗೆ ಒಳಗಾದ ಸಂಘದ ಸದಸ್ಯರು ಅಗತ್ಯ ದಾಖಲೆ ನೀಡಿದಲ್ಲಿ, ಸಹಾಯ ಧನ ನೀಡಲು ತೀರ್ಮಾನಿಸಲಾಗಿದೆ ಎಂದರು. 

ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ಟಾಂಪಿಂಗ್ ವ್ಯವಸ್ಥೆ, ಸಂಘದಿಂದ ಸಾಲ ಪಡೆದ ಸದಸ್ಯರುಗಳಿಗೆ ರೂ. 20,000 ಗಳ ವಿಮೆ ಮಾಡಿಸಲಾಗುತ್ತಿದೆ. ಸಂಘದ ಸಂಪೂರ್ಣ ವ್ಯವಹಾರವನ್ನು ಗಣಕೀಕೃತ ಗೊಳಿಸಲಾಗಿದೆ. 

ಈ ಬಾರಿ ಷೇರುದಾರರಿಗೆ ಶೇ.14 ಡಿವಿಡೆಂಡ್ ನೀಡಲು ನಿರ್ಧರಿಸಲಾಗಿದೆ. ಸಂಘದ ಕಛೇರಿಗೆ ನಿವೇಶನ ಅಥವಾ ಸ್ವಂತ ಕಟ್ಟಡದ ಗುರಿ ಹೊಂದಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್.ಜಿ.ಮೋಹನ್, ನಿರ್ದೇಶಕರುಗಳಾದ ಜಿ.ಕೆ.ಶಿವಾನಂದ, ಹೆಚ್.ಬಿ.ಗೋಣಪ್ಪ, ಬಿ.ರಮೇಶ್ (ಪಿ.ಜೆ.), ವಿ.ಮಂಜುನಾಥ, ರಮೇಶ್.ಬಿ., ಎನ್.ನಿಂಗಪ್ಪ, ಶ್ರೀಮತಿ ಹೆಚ್.ಸಿ.ವಾಣಿ, ಶ್ರೀಮತಿ ಸುನಂದ, ಡಿ.ಬಿ.ಚಂದ್ರಪ್ಪ, ವಿಶೇಷ ಆಹ್ವಾನಿತರಾದ ಎಸ್‍. ರವಿಸ್ವಾಮಿ, ಶ್ರೀಮತಿ ವಂದನಾ, ಕಾರ್ಯದರ್ಶಿ ದಯಾನಂದ ದೊಡ್ಡಮನಿ, ಸಿಬ್ಬಂದಿ ವರ್ಗದವರು ಹಾಗೂ ಷೇರುದಾರರು ಉಪಸ್ಥಿತರಿದ್ದರು.

error: Content is protected !!