ಹರಪನಹಳ್ಳಿ : ಇತಿಹಾಸದ ಮೆರಗನ್ನು ಪುಸ್ತಕಗಳಿಂದಲೇ ಓದಿ ತಿಳಿದರೆ ಹೆಚ್ಚು ಸುಖ, ನೆಮ್ಮದಿ ; ಎಂ.ಪಿ.ಲತಾ ಮಲ್ಲಿಕಾರ್ಜುನ

ಹರಪನಹಳ್ಳಿ : ಇತಿಹಾಸದ ಮೆರಗನ್ನು ಪುಸ್ತಕಗಳಿಂದಲೇ ಓದಿ ತಿಳಿದರೆ ಹೆಚ್ಚು ಸುಖ, ನೆಮ್ಮದಿ ; ಎಂ.ಪಿ.ಲತಾ ಮಲ್ಲಿಕಾರ್ಜುನ

ಹರಪನಹಳ್ಳಿ, ಸೆ.24- ಇತಿಹಾಸದ ಮೆರಗನ್ನು ಪುಸ್ತಕಗಳಿಂದಲೇ ಓದಿ ತಿಳಿದರೆ ಹೆಚ್ಚು ಸುಖ – ನೆಮ್ಮದಿ ನೀಡುತ್ತದೆ. ಓದುವ ಅಭಿರುಚಿ ಬೆಳೆಸಲು ಇಂದಿನ ಬರಹಗಾರರು ಶ್ರಮಿಸುತ್ತಿರುವುದು ಶ್ಲ್ಯಾಘನೀಯ ಎಂದು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ, ಕನ್ನಡ ಸಾಹಿತ್ಯ ಪರಿಷತ್ ಹರಪನಹಳ್ಳಿ, ಕರ್ನಾಟಕ ರಾಜ್ಯ ಬರಹಗಾರರ ಸಂಘ ಹರಪನಹಳ್ಳಿ, ಇವರ ಸಹಯೋಗದಲ್ಲಿ ನೂರು ಕೃತಿಗಳ ಲೋಕಾ ರ್ಪಣೆ ಹಾಗೂ ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು 

ಇಂದಿನ ದಿನಗಳಲ್ಲಿ ಓದುವ ಹವ್ಯಾಸ ದೂರವಾಗುತ್ತಿದ್ದರೂ ಕೃತಿಗಳನ್ನು ರಚಿಸುತ್ತಿರುವ ಲೇಖಕರ ಸಂಖ್ಯೆ ಬೆಳೆಯುತ್ತಿರುವುದು ಸಾಹಿತ್ಯ ಕ್ಷೇತ್ರ ಇನ್ನೂ ವಿರಾಜಿಸುತ್ತಿದೆ. ರಾಜ್ಯ ಬರಹಗಾರರು ರಚಿಸಿರುವ 118 ಕೃತಿಗಳನ್ನು ಒಂದೇ ವೇದಿಕೆಯಲ್ಲಿ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯಾಗಿದೆ. ಇಂದಿನ ಪೀಳಿಗೆ ಗುಬ್ಬಚ್ಚಿ ಗೂಡೇ ನೋಡಿಲ್ಲ ಅದನ್ನು ಪುಸಕ್ತದಲ್ಲಿ `ಗುಬ್ಬಚ್ಚಿ ಗೂಡಿನ ಬೆರಗು’ ಎಂದು ರಸವತ್ತಾಗಿ ರಚಿಸಿ, ಓದುಗರಿಗೆ ನೀಡಿರುವ ಬರಹಗಾರರ ಬಗ್ಗೆ ಹೆಮ್ಮೆಯಾಗಿದೆ. ಇದೇ ರೀತಿ ಪ್ರಸ್ತುತ ಘಟನೆಗಳ ಕುರಿತು ಬರೆದು ಓದುಗರನ್ನು ಸೆಳೆಯುತ್ತಿರುವ ಪ್ರಯತ್ನ ಸಫಲವಾಗಲಿ ಎಂದರು. 

ಕರ್ನಾಟಕ ರಾಜ್ಯ ಬರಹಗಾರರ ಸಂಘದ ಅಧ್ಯಕ್ಷ ಮಧುನಾಯ್ಕ್ ಮಾತನಾಡಿ, ರಾಜ್ಯದ ವಿವಿದ ಜಿಲ್ಲೆಗಳಿಂದ ಬಂದ 118 ಕೃತಿಗಳನ್ನು ರಚಿಸಿರುವ ಪುಸ್ತಕಗಳನ್ನು ಒಂದೇ ವೇದಿಕೆಯಲ್ಲಿ ಕೃತಿಗಳ ಲೋಕಾರ್ಪಣೆ ಮಾಡುತ್ತಿರವುದು ಉತ್ತಮ ಕಾರ್ಯವಾಗಿದ್ದು, ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ರಾಜ್ಯದ ಎಲ್ಲ ಬರಹಗಾರರ ಕೆಲಸ ಶ್ಲ್ಯಾಘನೀಯವಾಗಿದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ಸರ್ಕಾರಿ ನೌಕರರು ಹಾಗೂ ವಿವಿಧ ವೃತ್ತಿಗಳಲ್ಲಿ ಒತ್ತಡದ ಬದುಕಿನಲ್ಲಿ ಕೆಲಸ ಮಾಡುತ್ತಿರುವ ಬರಹಗಾರರು ಅನೇಕ ಉತ್ತಮ ಕಥೆಗಳನ್ನು ಕವಿತೆಗಳನ್ನು ರಚಿಸಿ, ಲೋಕರ್ಪಣೆ ಮಾಡುತ್ತಿರವುದು ಹೆಮ್ಮೆಯ ವಿಷಯವಾಗಿದೆ. ಎಲೆಮರೆಯ ಕಾಯಿಯಂತೆ ಇರುವ ನೂರಾರು ಕವಿಗಳು ಸಾಹಿತಿಗಳನ್ನು ಮುಖ್ಯವಾಹಿನಿಗೆ ತರುವ ಕೆಲಸವನ್ನು ಬರಹಗಾರರ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು  ಮಾಡುತ್ತಿದೆ ಎಂದರು.

ಹಿರಿಯ ಸಾಹಿತಿ ರಾಮನಮಲಿ ಅಧ್ಯಕ್ಷತೆ ಯಲ್ಲಿ ಕವಿಗೋಷ್ಠಿ ಕಾರ್ಯಕ್ರಮ ಜರುಗಿತು. ಆಶಯ ನುಡಿಗಳನ್ನು ಹಿರಿಯ ಸಾಹಿತಿ ಸುಭ ದ್ರಮ್ಮ ಮಾಡ್ಲಿಗೇರಿ ನಡೆಸಿಕೊಟ್ಟರು. ಕವಿ ಖಷಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮೈಲಾರಲಿಂಗನ ವಚನಕಾರ ಹಾಗೂ ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ಹೆಚ್.ಡಿ.ಜಗ್ಗಿನ್, ಗೊರೂರು ಅನಂತರಾಜ, ಲಕ್ಷ್ಮಿ ಮಾನಸ ಹಾಗೂ ಯಾಕೂಬ್ ಅವರನ್ನು ಸನ್ಮಾನಿಸಲಾಯಿತು. 

ಕಾರ್ಯಕ್ರಮದಲ್ಲಿ ಖ್ಯಾತ ಚಲನ ಚಿತ್ರನಟ ಮೈಸೂರು ರಮಾನಂದ, ಬೆಂಗಳೂರಿನ ಮಹಾಡ್ರೀಮ್ ಸಂಸ್ಥೆಯ ಎಂ.ಡಿ.ಪಿ.ಲಕ್ಷ್ಮಿರಾವ್, ಬಿ.ಲಕ್ಷೀದೇವಿ, ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಜಿ.ಅಗ್ರಹಾರ, ಎಸ್.ಯು.ಜೆ.ಎಂ. ಕಾಲೇಜು ಪ್ರಾಂಶುಪಾಲ ಹೆಚ್. ಮಲ್ಲಿಕಾರ್ಜುನ, ತಾಲ್ಲೂಕು ಅಧ್ಯಕ್ಷ ಕೆ.ಬಸವರಾಜ, ಕಾರ್ಯದರ್ಶಿ ಹೆಚ್.ಕೆ.ಮಂಜುನಾಥ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಗಿರಜ್ಜಿ ನಾಗರಾಜ, ಚುಟುಕು ಸಾಹಿತ್ಯ ಪರಿಷತ್ತು ಅಧ್ಯಕ್ಷ ಬಣಕಾರ ರಾಜಶೇಖರ,  ಸಾಹಿತಿ ಡಿ.ರಾಮಣ್ಣ ಆಲಮರಸಿಕೇರಿ, ತೆಲಗಿ ಕೆ.ಎಸ್.ವೀರಭದ್ರಪ್ಪ, ನೇತ್ರಾ ಬಾಸೂರು, ಕೆ.ಕೊಟ್ರೇಶ್, ಟಿ.ಶಾಂತಲಿಂಗಪ್ಪ, ಗಾಟಿನ ಮಂಜುನಾಥ ಸೇರಿದಂತೆ ಇತರರು ಇದ್ದರು.

error: Content is protected !!