ಸಚಿವ ಎಸ್ಸೆಸ್ಸೆಂ ವ್ಯಕ್ತಿಯಲ್ಲ, ಶಕ್ತಿ : ಮಂಜಪ್ಪ

ಸಚಿವ ಎಸ್ಸೆಸ್ಸೆಂ ವ್ಯಕ್ತಿಯಲ್ಲ, ಶಕ್ತಿ : ಮಂಜಪ್ಪ

ಹೊನ್ನಾಳಿ, ಸೆ. 22- ಕರ್ನಾಟಕದ ಭೂಪಟದಲ್ಲಿ ದಾವಣಗೆರೆಯ ಹೆಸರು ಖ್ಯಾತಿ ಹೊಂದಲು ಎಸ್.ಎಸ್.ಮಲ್ಲಿಕಾರ್ಜುನ್ ಮತ್ತು ಶಾಮನೂರು ಶಿವಶಂಕರಪ್ಪನವರು ಕಾರಣೀಭೂತರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ಬಣ್ಣಿಸಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ 56ನೇ ಹುಟ್ಟುಹಬ್ಬದ ಪ್ರಯುಕ್ತ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಬ್ರೆಡ್ ವಿತರಿಸಿ ಅವರು ಮಾತನಾಡಿದರು.

ಆಕಸ್ಮಿಕವಾಗಿ ರಾಜಕೀಯಕ್ಕೆ ಧುಮುಕಿದ ಎಸ್ಸೆಸ್ಸೆಂ ಅವರು ತಮ್ಮ ತಂದೆಯ ಜೊತೆಗೂಡಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ಕಾರ್ಯ ನಿರ್ವಹಿಸುತ್ತಾ ಕೇವಲ ವ್ಯಕ್ತಿಯಾಗದೇ ಶಕ್ತಿಯಾಗಿ ಜಿಲ್ಲೆಯ ನೊಂದವರ ಆಸರೆಯಾಗಿ ಹೊರಹೊಮ್ಮಿದ್ದಾರೆ ಎಂದು ಗುಣಗಾನ ಮಾಡಿದರು.

ಈ ಹಿಂದೆಯೂ ಸಚಿವರಾಗಿದ್ದಾಗ ರಾಜ್ಯದ ಕೃಷಿ ಮಾರುಕಟ್ಟೆಗಳಿಗೆ ಕಾಯಕಲ್ಪ, ದಾವಣಗೆರೆ ನಗರದ ಶಾಶ್ವತ ಕುಡಿಯುವ ನೀರಿನ ಯೋಜನೆ, ಏಷ್ಯಾದಲ್ಲಿಯೇ ಅತೀ ದೊಡ್ಡ ಗಾಜಿನ ಮನೆ, ಕೊಳಚೆ ಪ್ರದೇಶವಾಗಿದ್ದ ಕುಂದುವಾಡದ ಕೆರೆಯನ್ನು ಅಭಿವೃದ್ಧಿಪಡಿಸಿ ಅದಕ್ಕಾಗಿ ಸ್ವಂತ ಹಣವನ್ನೂ ಬಳಸಿ ಅವರು ಮಾಡಿದ ಸಾಧನೆಯನ್ನು ಜನತೆ ಇಂದಿಗೂ ಮರೆತಿಲ್ಲವೆಂದು ತಿಳಿಸಿದರು.

ಕೊರೊನಾ ಸಂದರ್ಭದಲ್ಲಿ ಕೋವಿಡ್ ಲಸಿಕೆಗಾಗಿ ತಮ್ಮ ಸ್ವಂತ 7 ಕೋಟಿ ಹಣವನ್ನು ವಿನಿಯೋಗಿಸಿ ಜನರ ಸಂಕಷ್ಟಗಳಿಗೆ ಮಿಡಿದ ಮಾನವೀಯತೆಯ ಸಾಕಾರಮೂರ್ತಿ ಎಂದು ಶ್ಲ್ಯಾಘಿಸಿದರು.

ಸಾಸ್ವೆಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ನಾಗಪ್ಪ ಮಾತನಾಡಿದರು.ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಣ್ಣಕ್ಕಿ ಬಸವನಗೌಡ ಮಾತನಾಡಿ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ದಾವಣಗೆರೆಯಲ್ಲಿ ರಕ್ತ ನಿಧಿ ಸ್ಥಾಪಿಸಿ ಅವಶ್ಯಕತೆಯಿರುವವರಿಗೆ ಉಚಿತ ರಕ್ತದ ವ್ಯವಸ್ಥೆ, ಕಿಡ್ನಿ ಸಮಸ್ಯೆಯಿರುವ ಬಡವರಿಗೆ ಉಚಿತ ಡಯಾಲಿಸಿಸ್ ಕೇಂದ್ರವನ್ನು ತೆರೆಯುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ತಿಳಿಸಿದರು.  

ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ರಾಜೇಂದ್ರ, ಮೈಲಪ್ಪ, ಮಾಜಿ ಸದಸ್ಯ ಎಚ್.ಬಿ.ಅಣ್ಣಪ್ಪ, ಸಿಂಗಟಗೆರೆ ಗ್ರಾ.ಪಂ. ಸದಸ್ಯ ಅಣ್ಣಪ್ಪ, ಕಾಂಗ್ರೆಸ್ ಮುಖಂಡರಾದ ಎಚ್.ಡಿ.
ವಿಜೇಂದ್ರಪ್ಪ, ಕೆ.ಆರ್.ವಸಂತನಾಯ್ಕ್, ಬಿ.ಕೆ.ಮಾದಪ್ಪ, ಅರಕೆರೆ ಮಧುಗೌಡ, ಬಸವರಾಜ್ ಮಾರಜೋಗಿ, ಬಾಹುಬಲಿ, ಸ್ವರೂಪ್ ಬಣ್ಣಜ್ಜಿ, ಪದ್ಮಾನಾಯ್ಕ, ಮಂಜು ಬಂತಿ, ತೊಳಕಿ ಮಾದೇಶ, ಸಿದ್ದು, ರಘು ಕವಳಿ, ಗೋಪಾಲಪ್ಪ, ಮಲ್ಲೇಶ್, ಮೇಘರಾಜ್, ರಾಮು ಮತ್ತಿತರರು ಉಪಸ್ಥಿತರಿದ್ದರು.

error: Content is protected !!